ಬಿಸಿ ಬಿಸಿ ಸುದ್ದಿ

ಕಾಯಕ ಜೀವಿಗಳನ್ನು ಸಂಘಟಿಸಿ, ಅವರಲ್ಲಿ ಆತ್ಮ ವಿಶ್ವಾಸ ತುಂಬಿದವರು ಬಸವಣ್ಣನವರು

ಕಲಬುರಗಿ: ಕಲ್ಯಾಣದಲ್ಲಿ ಬಸವಣ್ಣನವರು ಸಂಘಟಿಸಿದ ಸಣ್ಣಸಣ್ಣ ಕಾಯಕ ಸಮುದಾಯಗಳಿಂದ ನೂರಾರು ಜನ ಶರಣರು ಮೂಡಿಬಂದರು. ಬಸವಣ್ಣನವರು ಇವರೆಲ್ಲರ ಬೆನ್ನಲುಬಾಗಿ ನಿಂತುದರಿಂದ ಈ ಸಾಮಾನ್ಯ ಕಾಯಕದವರಲ್ಲಿಯೂ ಅಪಾರವಾದ ಆತ್ಮವಿಶ್ವಾಸ ತುಂಬಿಬರಲು ಕಾರಣವಾಯಿತು. ಇದರಿಂದ ಕಲ್ಯಾಣದಲ್ಲಿ ನಡೆದ ಸಮಾಜೋ ಧಾರ್ಮಿಕ ಚಳುವಳಿ ಹುರಿಗೊಂಡಿತು ಎಂದು ಡಾ. ವೀರಣ್ಣ ದಂಡೆ ಅವರು ಅಭಿಪ್ರಾಯ ಪಟ್ಟರು.

ಬಸವ ಸಮಿತಿಯ ಅನುಭವ ಮಂಟಪದಲ್ಲಿ, ’ಮಂಗಳ ಜ್ಯೋತಿ ಶರಣ ಗಾಣದ ಕಣ್ಣಪ್ಪಯ್ಯ ಸಮಾಜ’ ಹೆಸರಿನಲ್ಲಿ ಜರುಗಿದ ಅರಿವಿನ ಮನೆ ೬೧೫ನೇ ದತ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ’ಗಾಣದ ಕಾಯಕ ಶರಣರು’ ಎಂಬ ವಿಷಯ ಕುರಿತು ಡಾ. ದಂಡೆ ಅವರು ಮಾತನಾಡುತ್ತಿದ್ದರು. ಕಾಣದ ಕಣ್ಣಪ್ಪ, ಶರಣ ರೇವಣಸಿದ್ಧ ಹಾಗೂ ಶರಣ ಮುಗ್ಧಸಂಗಯ್ಯ ಈ ಮೂವರು ಗಾಣದ ಕಾಯಕ ಮಾಡಿದ ಶರಣರಾಗಿದ್ದಾರೆ. ಗಾಣದ ಕಣ್ಣಪ್ಪಯ್ಯ ಹತ್ತು ವಚನಗಳನ್ನು ಬರೆದಿದ್ದಾರೆ. ಕಣ್ಣಪ್ಪಯ್ಯ ಅವರು ತಮ್ಮೊಂದು ವಚನದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರು ಲೋಕದ ಚೇಷ್ಠೆಗೆ ಒಳಗಾದವರು. ಅದರಿಂದ ಬ್ರಹ್ಮ ಐದರಲ್ಲಿ ಒಂದು ಶಿರವನ್ನು ಕಳೆದುಕೊಂಡ, ವಿಷ್ಣು ಮೀನ ಮೊಸಳೆಯಂತಹ ಹತ್ತು ಅವತಾರಗಳನ್ನು ತಾಳಿದ, ಶಿವ ಪಾರ್ವತಿಯನ್ನು ಹೆಂಡತಿಯಾಗಿ ಹೊಂದಿದ್ದೂ ಗಂಗೆಯನ್ನು ಕದ್ದು ತಲೆಯಲ್ಲಿ ಹೊತ್ತುಕೊಂಡ. ಇವರೆಲ್ಲರೂ ವೇಷಧಾರಿಗಳು. ಈ ಮರ್ತ್ಯದ ಗಾಣದಲ್ಲಿ ಸಿಕ್ಕು ನುಗ್ಗಾದವರು. ಇನ್ನು ಸಾಮಾನ್ಯರ ಗತಿ ಏನಾಗಬೇಡ? ಎಂದು ಗಾಣದ ಕಣ್ಣಪ್ಪಯ್ಯ ನಮಗೆ ಎಚ್ಚರಿಕೆ ಕೊಡುತ್ತಾನೆ ಎಂದು ಡಾ. ದಂಡೆ ಅವರು ವಿವರಿಸಿದರು.

ಶರಣ ರೇವಣಸಿದ್ಧರು ಬಸವಣ್ಣನವರಿಗಿಂತ ಹಿರಿಯ ಶರಣರಾದರೂ ಅವರ ಪ್ರಭಾವಕ್ಕೆ ಒಳಗಾಗಿ, ತಮ್ಮ ಮಗ ರುದ್ರಮುನಿಯೊಂದಿಗೆ ಕೊಲ್ಲಿಪಾಕಿಯಲ್ಲಿ ಒಂದೊಂದು ಸಮುದಾಯಕ್ಕೆ ಒಂದೊಂದು ಮಠವನ್ನು ನಿರ್ಮಿಸಿಕೊಟ್ಟು, ಅಲ್ಲಿಯ ಶಿವಲಿಂಗಗಳನ್ನು ಆಯಾ ಸಮುದಾಯವರೇ ಪೂಜಿಸಿಲು ಅನುವು ಮಾಡಿಕೊಟ್ಟಿದ್ದಾರೆ. ಈ ಮಾತಿಗೆ ಕೊಲ್ಲಿಪಾಕಿಯಲ್ಲಿ ರೇವಣಸಿದ್ಧರು ನಿರ್ಮಿಸಿದ ೧೮ ಮಠಗಳು ಇಂದಿಗೂ ಸಾಕ್ಷಿಯಾಗಿ ಸಿಗುತ್ತವೆ. ರೇವಣಸಿದ್ಧರು ಕಲ್ಯಾಣ ಪಟ್ಟಣದಲ್ಲಿ ಗಾಣಿಗರ ಮನೆಯಲ್ಲಿ ಗಾಣ ಹೊಡೆದು ಆ ಗಾಣಿಗ ಕಲ್ಲಿಸೆಟ್ಟಿಯನ್ನು ಉದ್ಧಾರ ಮಾಡಿದನೆಂದು ಕನ್ನಡದ ಖ್ಯಾತ ಕವಿ ಹರಿಹರ ಬರೆಯುತ್ತಾನೆ. ಆದರೆ ರೇವಣಸಿದ್ಧರು ಗಾಣ ಹೊಡೆದುದು ಕಲ್ಯಾಣದಲ್ಲಿ ಅಲ್ಲ, ರಟಗಲ್ಲ ಎಂಬ ಗ್ರಾಮದಲ್ಲಿ. ಅಲ್ಲಿ ಇವತ್ತಿಗೂ ರೇವಣಸಿದ್ಧರು ಹೊಡೆದ ಕಲ್ಲಿನ ಗಾಣಬರಿ ಸಾಕ್ಷಿಯಾಗಿ ದೊರೆಯುತ್ತದೆ. ಬಹುಶಃ ಹರಿಹರನಿಗೆ ಗ್ರಾಮದ ಹೆಸರು ಸರಿಯಾಗಿ ತಿಳಿಯದೆ ಕಲ್ಯಾಣವೆಂದು ಹೇಳಿದಂತಿದೆ ಎಂದು ಡಾ. ವೀರಣ್ಣ ದಂಡೆ ಅವರು ವಿವರಿಸಿದರು.

ಗಾಣದ ಕಾಯಕ ಮಾಡಿದ ಇನ್ನೊಬ್ಬ ಪ್ರಮುಖ ಶರಣನೆಂದರೆ ಮುಗ್ಧಸಂಗಯ್ಯ. ಮುಗ್ಧಸಂಗಯ್ಯ ಕಲ್ಯಾಣದ ಮಗ್ಗಲೂರು ಶಿವಪುರದವನು. ಬಾಲ್ಯದಿಂದಲೂ ಆಧ್ಯಾತ್ಮಿಕ ಸೆಳೆತವುಳ್ಳವನು. ಪುರಾಣಕಾರರ ವರ್ಣನೆ ಕೇಳಿ ತಾನೂ ಶ್ರೀಶೈಲ ನೋಡಬೇಕೆಂದು ಅಲ್ಲಿಗೆ ಹೋಗಿ ತಪಸ್ಸು ಮಾಡಿದವನು. ಕಲ್ಯಾಣದಲ್ಲಿ ಬಸವಣ್ಣನವರು ನಡೆಸಿದ ಕ್ರಾಂತಿಯ ಪ್ರಚಾರ ಶ್ರೀಶೈಲದವರೆಗೂ ಮುಟ್ಟಿ, ಅಲ್ಲಿಯೇ ಇದ್ದ ಸಕಲೇಶ ಮಾದರಸರು ಮುಗ್ಧ ಸಂಗಯ್ಯನವರನ್ನು ಕರೆದುಕೊಂಡು ಕಲ್ಯಾಣಕ್ಕೆ ಬರುತ್ತಾರೆ. ಇಲ್ಲಿ ಮುಗ್ಧ ಸಂಗಯ್ಯ ಬಸವಣ್ಣನವರಾದಿಯಾಗಿ ಹಿರಿಯ ಶರಣರ ಗಮನ ಸೆಳೆಯುತ್ತಾರೆ.  ತೆಲುಗು ಕವಿ ಪಾಲ್ಕುರಿಕೆ ಸೋಮನಾಥ ಮೊದಲ್ಗೊಂಡು ಕನ್ನಡದ ಎಲ್ಲ ಕವಿಗಳು ಮುಗ್ಧಸಂಗಯ್ಯನು ಕಲ್ಯಾಣದಲ್ಲಿ ವೇಶ್ಯಯರ ಮನೆಗೆ ಹೋಗಿ, ಅಲ್ಲಿ ಶಯ್ಯಾಗಾರವನ್ನು ಶಿವನ ಆವಾಸ ಸ್ಥಾನವೆಂದು ಭಾವಿಸಿ, ಅಲ್ಲಿಯೇ ಕೆಳಗೆ ಕಂಬಳಿ ಹಾಸಿ ಕುಳಿತುಕೊಂಡು ಇಡೀ ರಾತ್ರಿಯೆಲ್ಲ ಲಿಂಗಪೂಜೆ ಮಾಡಿಕೊಂಡು ಹಿಂತಿರುಗಿ ಬಂದುದನ್ನು ಬರೆಯುತ್ತಾರೆ. ಆದರೆ ಮುಗ್ಧಸಂಗಯ್ಯ ಮಹಾನ್ ತಪಸ್ವಿ. ಶಿವಪುರ, ಗಡವಂತಿ, ಇಂಗ್ಳೇಶ್ವರ ಗ್ರಾಮಗಳಲ್ಲಿ ಅವನು ತಪಸ್ಸು ಗೈದ ಗವಿಗಳಿವೆ.

ನಂತರ ಅವರು ಬಸವಣ್ಣನವರ ತತ್ತ್ವಗಳನ್ನು ಪ್ರಚಾರ ಮಾಡುತ್ತ ಬಿಜಾಪುರ ಜಿಲ್ಲೆಯ ಇಂಗಶ್ವರ ಬೆಟ್ಟದಲ್ಲಿ ತಪಸ್ಸು ಮಾಡಿ, ಕೊನೆಗೆ ಉಪ್ಪಲದಿನ್ನಿಗೆ ಹೋಗಿ, ಅಲ್ಲಿ ಒಬ್ಬ ಗಾಣಿಗರ ಮನೆಯಲ್ಲಿ ೩೦ ವರ್ಷ ಗಾಣದ ಕಾಯಕ ಮಾಡಿ, ಲಿಂಗೈಕ್ಯರಾಗುತ್ತಾರೆ. ಉಪ್ಪಲದಿನ್ನಿಯ ಶಿವಮಂದಿರದ ಅಂಗಳದಲ್ಲಿ ಮುಗ್ಧಸಂಗಯ್ಯನವರ ಸಮಾಧಿ-ಗದ್ದುಗೆ ಇದೆ. ಗ್ರಾಮದ ಅಧಿದೈವವೇ ಮುಗ್ಧಸಂಗಯ್ಯನಾಗಿದ್ದು, ಅವರ ಭವ್ಯವಾದ ಮಂದಿರವೂ ಅಲ್ಲಿದೆ.

ಶ್ರೀ ಸುರೇಶ ಸಜ್ಜನ ಅವರು ಕಾರ್ಯಕ್ರಮದ ಅಧ್ಯಕ್ಷ್ಯತೆಯನ್ನು ವಹಿಸಿದ್ದರು. ಶ್ರೀ ಅಪ್ಪಾರಾವ ಪಾಟೀಲ ಅತನೂರ ಅವರು ಉಪಸ್ಥಿತರಿದ್ದರು. ಕಲಬುರಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸವತಿ ಖೂಬಾ, ದತ್ತಿ ದಾಸೋಹಿಗಳಾದ ಡಾ. ಕೇಶವರಾಯ ಎಸ್. ಕಾಬಾ ಅವರು ವೇದಿಕೆಯಲ್ಲಿದ್ದರು. ಶ್ರಿಮತಿ ಅಶ್ವಿನಿ ರಾಜಕುಮಾರ ಹಿರೇಮಠ ಅವರು ವಚನ ಗಾಯನ ಮಾಡಿದರು. ಕಾರ್ಯದರ್ಶಿಗಳಾದ ಶ್ರೀ ಎಚ್.ಕೆ. ಉದ್ದಂಡಯ್ಯ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

1 hour ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

11 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

11 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

11 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago