ಬಿಸಿ ಬಿಸಿ ಸುದ್ದಿ

ಪದವಿ ಕಾಲೇಜು ಅಧ್ಯಾಪಕರ ವೇತನ ಬಿಡುಗಡೆಗೆ ಆಗ್ರಹ

ಕಲಬುರಗಿ: ಪದವಿ ಕಾಲೇಜು ಅಧ್ಯಾಪಕರ ಎರಡು ತಿಂಗಳು ವೇತನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಸೋಮವಾರ ಹೈದ್ರಾಬಾದ್ ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಡಾ. ಶರಣಪ್ಪ ಸೈದಾಪೂರ್ ಅವರು ನಿಯೋಗದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಕಚೇರಿ ಜಂಟಿ ನಿರ್ದೇಶಕ ಡಾ. ಶ್ರೀಶಕುಮಾರ್ ಎಚ್.ವೈ. ಅವರಿಗೆ ಮನವಿ ಪತ್ರ ಸಲ್ಲಿಸಿದರು.

ರಾಜ್ಯದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಒಟ್ಟು ೪೧೨ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು, ಅವುಗಳಲ್ಲಿ ಸುಮಾರು ಐದುವರೆ ಸಾವಿರಕ್ಕೂ ಹೆಚ್ಚು ಖಾಯಂ ಅಧ್ಯಾಪಕರು ಕಾರ್ಯನಿರ್ವಹಿಸು ತ್ತಿದ್ದಾರೆ. ಎರಡು ತಿಂಗಳು ಗತಿಸುತ್ತಾ ಬಂದರೂ ಸಹ ಅಧ್ಯಾಪಕರ ವೇತನ ಬಿಡುಗಡೆಗೊಳಿಸಿರುವುದಿಲ್ಲ. ಇದರಿಂದಾಗಿ ಅಧ್ಯಾಪಕರ ಆರ್ಥಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿದೆ. ಅನುದಾನದ ಕೊರತೆ ಮತ್ತು ತಾಂತ್ರಿಕ ದೋಷಗಳಿಂದಾಗಿ ಎರಡು ತಿಂಗಳ ವೇತನ ಬಾರದೆ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವ ಅಧ್ಯಾಪಕರು ತೀವ್ರ ತೊಂದರೆ ಪಡುವಂತಾಗಿದೆ.

ಕಾಲೇಜುಅಧ್ಯಾಪಕರಿಗೆ ಸಕಾಲಕ್ಕೆ ವೇತನ ಪಾವತಿಸದೆ ಇರುವ ಸರಕಾರದ ಉನ್ನತ ಶಿಕ್ಷಣ ವಿರೋಧಿ ನೀತಿಯನ್ನು ಹೈದ್ರಾಬಾದ ಕರ್ನಾಟಕ ಸರಕಾರಿ ಕಾಲೇಜು ಅಧ್ಯಾಪಕರ ಸಂಘವು ತೀವ್ರವಾಗಿ ಖಂಡಿಸುತ್ತದೆ. ವೇತನ ಪಾವತಿ ಮಾಡುವಲ್ಲಿ ಅನಗತ್ಯ ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ಕುಟುಂಬದ ನಿರ್ವಹಣೆ ತುಂಬ ಕಷ್ಟವಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಅಲ್ಲದೆ ಗೃಹ ಸಾಲ, ವಾಹನ ಸಾಲ ಮತ್ತು ವಿಮೆ ಕಂತುಗಳನ್ನು ಕಟ್ಟಲು ಪರದಾಡುವಂತಹ ಪರಸ್ಥಿತಿ ನಿರ್ಮಾಣವಾಗಿರುವುದು ಶೋಚನಿಯ ಸಂಗತಿಯಾಗಿದೆ.ಸೂಕ್ತ ಪೂರ್ವ ಸಿದ್ದತೆ ಮಾಡಿಕೊಳ್ಳದೆ ಹೊಸ ಪದ್ದತಿಗೆ ಅಂದರೆ ಖಜಾನೆ-೨ಗೆ ಪರಿವರ್ತನೆ ಆಗುವುದು ಸರಕಾರದ ದೂರದೃಷ್ಟಿಯ ಕೊರತೆ ಎದ್ದು ತೋರಿಸುತ್ತದೆ. ರಾಜ್ಯದಲ್ಲಿ ಅಧ್ಯಾಪಕರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ವೇತನ ವಿಳಂಬ ನೀತಿಯಿಂದಾಗಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಮತ್ತು ಉನ್ನತ ಶಿಕ್ಷಣದ ಗುಣಮಟ್ಟವನ್ನು ಕಾಪಾಡುವ ಹೊಣೆ ಹೊತ್ತಿರುವ ಅಧ್ಯಾಪಕರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದು ದೊಡ್ಡ ದುರಂತವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

೮ನೇ, ೯ನೇ ಮತ್ತು ೧೦ನೇ ಅಕಾಡೆಮಿಕ್ ಗ್ರೇಡ್ ಪೇ ಬಿಡುಗಡೆಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು.ಪಿಎಚ್.ಡಿ ವೇತನ ಬಡ್ತಿಯನ್ನು ಅರ್ಹ ಅಧ್ಯಾಪಕರಿಗೆ ನೀಡಬೇಕು.೭ನೇ ವೇತನ ಆಯೋಗದ ಶಿಫಾರಸುಗಳ ಅನುಷ್ಠಾನದಲ್ಲಿ ತಾಂತ್ರಿಕ ನೂನ್ಯತೆಗಳನ್ನು ತಕ್ಷಣವೇ ಸರಿಪಡಿಸಬೇಕು ಎಂದು ಅವರು ಒತ್ತಾಯಿಸಿದರು. ಹೊಸ ವೇತನ ಪದ್ದತಿಯಿಂದ ಉನ್ನತ ಶಿಕ್ಷಣ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಆದ್ದರಿಂದ ಹೊಸ ಪದ್ದತಿ ಅನುಷ್ಠಾನಗೊಳ್ಳುವವರೆಗೂ ಹಳೆ ಪದ್ದತಿ ಅಂದರೆ ಖಜನೆ-೧ರ ಪ್ರಕಾರವೇ ಬಾಕಿಯಿರುವ ಎರಡು ತಿಂಗಳ ವೇತನ ಬಿಡುಗಡೆಗೊಳಿಸುವಲ್ಲಿ ಆಯುಕ್ತರು ಸೂಕ್ತ ಕ್ರಮ ಕೈಗೊಂಡು ಅಧ್ಯಾಪಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಡಾ. ಮಲ್ಲಿಕಾರ್ಜುನ್ ಶೆಟಿ, ಡಾ. ಚಿನ್ನಾ ಆಶಪ್ಪ. ಡಾ. ಶ್ರೀಮಂತ್ ಹೋಳಕರ್, ಡಾ. ರವಿ ನಾಯಕ್, ಪ್ರೊ. ಶಂಕರ್ ಸೂರಿ, ಡಾ. ರವಿಂದ್ರ ಕುಂಬಾರ್, ಡಾ.ಸಂತೋಷ ಹುಂಪಳಿ,ಪ್ರೊ.ಸೂರ್ಯಕಾಂತ ಉಮ್ಮಾಪೂರೆ,ಡಾ.ಎನ್.ಜಿ. ಶ್ರೀಧರ್,ಡಾ.ಸಂತೋಷ ಸಿಂಗ್ ಬಯಾಸ್,ಡಾ.ಪ್ರಸಾದ ಭಂಡಾರಿ,ಡಾ.ಬಲಭೀಮ ಸಾಂಗ್ಲಿ,ಡಾ.ಲಕ್ಷ್ಮಿಕಾಂತ ಶಿರೋಳ್ಳಿ, ಡಾ. ಮಹಮ್ಮದ್ ಯೂನುಸ್, ಡಾ. ಶಿವಶರಣಪ್ಪ ಮೋತಕಪಳ್ಳಿ, ಡಾ. ಅವಿನಾಶ್, ಡಾ. ಕೈಲಾಸಬಾಬು ಹೊಸ್ಮನಿ, ಡಾ. ಬಸಂತ್ ಸಾಗರ, ಡಾ. ಜಗನ್ನಾಥ್ ಕುಕ್ಕಡೆ, ಪ್ರೊ. ರಾಜೆಂದ್ರಕುಮಾರ್, ಪ್ರೊ. ಸಂತೋಷ್ ಜಿ ಕುಪೆಂದ್ರ, ಡಾ. ರಾಜು ಶಾಮರಾವ್, ಡಾ ಬಸವರಾಜ್, ಪ್ರೊ. ವಿಶ್ವನಾಥ್ ಬೆಣ್ಣೂರ್ ಮುಂತಾದವರು ಉಪಸ್ಥಿತರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

7 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

7 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

7 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

23 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago