ವಾಡಿ: ಚಿತ್ತಾಪುರ ಮೀಸಲು ಮತಕ್ಷೇತ್ರದಲ್ಲಿ ಅಭಿವೃದ್ಧಿಯ ಪರ್ವ ಆರಂಭಿಸುವ ಮೂಲಕ ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಅವರು ಶೈಕ್ಷಣಿಕ ಕ್ರಾಂತಿಯ ಕನಸು ಹೊತ್ತು ಸಾಗಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಹಿರಿಯ ಮುಖಂಡ ಟೋಪಣ್ಣ ಕೋಮಟೆ ಹೇಳಿದರು.
ಪ್ರಜ್ಞಾ ದಲಿತ ಸೇವಾ ಸ್ವಸಹಾಯ ಸಂಘದ ವತಿಯಿಂದ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಜಿಪಿಎಸ್)ಯಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಯುವ ನಾಯಕ, ಮಾಜಿ ಸಚಿವ, ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಅವರ ೪೧ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಕ್ಷೇತ್ರದ ವಿದ್ಯಾರ್ಥಿಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಪ್ರಿಯಾಂಕ್, ಸಮಾಜಕಲ್ಯಾಣ ಸಚಿವರಾಗಿದ್ದಾಗ ರಾಜ್ಯದ ಅನೇಕ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಓದುವ ಅವಕಾಶ ಕಲ್ಪಿಸಿದ್ದಾರೆ. ಚಿತ್ತಾಪುರದಲ್ಲಿ ಶೈಕ್ಷಣಿಕ ವಲಯ ಸ್ಥಾಪಿಸಿದ್ದಾರೆ. ವಾಡಿ ಪಟ್ಟಣದಲ್ಲೂ ಹೊಸ ನಗರ ನಿರ್ಮಾಣಕ್ಕೆ ನೂರಾರು ಎಕರೆ ಭೂಮಿ ಖರೀದಿಸಿದ್ದಾರೆ. ವಾಡಿ, ನಾಲವಾರ ವಲಯದ ವಿದ್ಯಾರ್ಥಿಗಳಿಗಾಗಿ ವಾಡಿ ನಗರದಲ್ಲಿ ಶೈಕ್ಷಣಿಕ ವಲಯ ಸ್ಥಾಪಿಸಲು ಮುಂದಾಗಿದ್ದಾರೆ. ಪ್ರಿಯಾಂಕ್ ಖರ್ಗೆ ಅವರಂತಹ ಛಲ ತೊಟ್ಟು ಕೆಲಸ ಮಾಡುವ ಉತ್ಸಾಹಿ ರಾಜಕಾರಣಿಯನ್ನು ಪಡೆದ ಚಿತ್ತಾಪುರದ ಜನರು ಅದೃಷ್ಠವಂತರು ಎಂದರು.
ಕೇಂದ್ರ ಮಾಜಿ ಸಚಿವ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿ, ವಾಡಿ, ಶಹಾಬಾದ ನಗರಳ ಕಾರ್ಖಾನೆಗಳಲ್ಲಿ ಕಾರ್ಮಿಕರಾಗಿ ಕಷ್ಟದ ಕಣ್ಣೀರು ಸುರಿಸಿದ್ದಾರೆ. ಬಡವರ ನೋವು ಅರ್ಥಮಾಡಿಕೊಂಡ ರಾಜಕಾರಣೀಯ ಉದರದಲ್ಲಿ ಶ್ರೀಮಂತಿಕೆಯ ಸೌಲತ್ತಿನಲ್ಲಿ ಪ್ರಿಯಾಂಕ್ ಖರ್ಗೆ ಬೆಳೆದಿದ್ದರೂ ಸಹ ಜನಸಾಮಾನ್ಯರ ಬದುಕಿನ ಕಷ್ಟ ತೀರಾ ಹತ್ತಿರದಿಂದ ಕಂಡು ಮರುಗಿದ್ದಾರೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಕ್ಷೇತ್ರದ ಜನರನ್ನು ಮೇಲೆತ್ತಲು ಪ್ರಾಮಾಣಿಕ ಪ್ರಯತ್ನದಲ್ಲಿದ್ದಾರೆ. ಆನ ಸೇವೆಯೇ ಜೀವನದ ಗುರಿ ಎಂದಾಗಿಸಿಕೊಂಡಿರುವ ರಾಜಕಾರಣಿಯನ್ನು ಜನರು ಕೈ ಹಿಡಿದು ನಡೆಸಬೇಕು ಎಂದು ಹೇಳಿದರು.
ಕೇಕ್ ಕತ್ತರಿಸುವ ಮೂಲಕ ಮಕ್ಕಳಿಗೆ ಸಿಹಿ ಉಣಬಡಿಸಲಾಯಿತು. ಶಾಲೆಯ ೧ ರಿಂದ ೭ನೇ ತರಗತಿಯ ಒಟ್ಟು ೧೬೮ ವಿದ್ಯಾರ್ಥಿಗಳಿಗೆ ಉಚಿತ ಕಂಪಾಸ್, ನೋಟ್‌ಬುಕ್, ಪೆನ್ನು ವಿತರಿಸಿದರೆ, ಬಿಸಿಯೂಟ ಸಿಬ್ಬಂದಿಗೆ ಸೀರೆ ಕುಪ್ಪಸ ಕಾಣಿಕೆಯಾಗಿ ನೀಡಿ ಪ್ರಿಯಾಂಕ್ ಖರ್ಗೆ ಅವರ ಹುಟ್ಟು ಹಬ್ಬ ಆಚರಿಸಲಾಯಿತು.
ಪ್ರಜ್ಞಾ ದಲಿತ ಸೇವಾ ಸಂಘದ ಸಂಘಟನಾ ಕಾರ್ಯದರ್ಶಿ ಭೀಮಾಶಂಕರ ಸಿಂಧೆ, ಡಾ.ಶ್ರವಣಕುಮಾರ ತಂಗಡಗಿ, ಡಾ.ಅರ್ಚನಾ ಗಿಲಕಿ, ಮುಖ್ಯಶಿಕ್ಷಕಿ ಲಲಿತಾ ಜ್ಞಾನಮಿತ್ರ, ಪುರಸಭೆ ಸದಸ್ಯ ದೇವಿಂದ್ರ ಕರದಳ್ಳಿ, ಮುಖಂಡರಾದ ಖೇಮಲಿಂಗ ಬೆಳಮಗಿ, ಮಲ್ಲಿಕಾರ್ಜುನ ಕಟ್ಟಿ, ಮಹಾದೇವ ಸಿರೂರಕರ, ರಾಜಕುಮಾರ ಮೇಲಕೇರಿ, ಶಿಕ್ಷಕರಾದ ಮಲ್ಲೇಶ, ತ್ರಿಶುಲಾದೇವಿ, ಗೌತಮಿ, ನಂದಿನಿ, ಬಸವರಾಜ ಕುಲಕುಂದಿ, ಕಲ್ಪಣ್ಣ ಭರ್ಮಾ ಪಾಲ್ಗೊಂಡಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…