ಬಿಸಿ ಬಿಸಿ ಸುದ್ದಿ

40ನೇ ಶರಣಕಮ್ಮಟ ಹಾಗೂ ಅನುಭವಮಂಟಪ ಉತ್ಸವ-2019 ಉದ್ಘಾಟನೆ

ಬಸವಕಲ್ಯಾಣ: ಬಸವಕಲ್ಯಾಣ ಅನುಭವಮಂಟಪ ಪರಿಸರದಲ್ಲಿ ನಿರ್ಮಿಸಿದ ಪಂಡಿತ ಬಸವರಾಜ ರಾಜಗುರು ಮಹಾದ್ವಾರ ಮತ್ತು ಪಂಡಿತ ಮಲ್ಲಿಕಾರ್ಜುನ ಮನಸೂರು ವೇದಿಕೆಯಲ್ಲಿ ಆಯೋಜಿಸಲಾದ ೪೦ನೇ ಶರಣಕಮ್ಮಟ ಹಾಗೂ ಅನುಭವಮಂಟಪ ಉತ್ಸವ-೨೦೧೯ ಉದ್ಘಾಟನೆ ಮತ್ತು ಡಾ. ಚನ್ನಬಸವ ಪಟ್ಟದ್ದೇವರ ಅನುಭವಮಂಟಪ ಪ್ರಶಸ್ತಿ ಪ್ರದಾನ  ಸಮಾರಂಭ ಜರುಗಿತು.

ದಿವ್ಯಸನ್ನಿಧಾನವಹಿಸಿದ ಬೆಂಗಳೂರು ಬೇಲಿಮಠದ ಪೂಜ್ಯ ಶಿವರುದ್ರ ಮಹಾಸ್ವಾಮಿಗಳು ಬಸವಾದಿ ಶರಣರ ವಚನಗಳ ಆಶಯದಂತೆ ಬದುಕಬೇಕೆಂದು ಸೂಚಿಸಿದರು. ಅನುಭವಮಂಟಪ ಅಧ್ಯಕ್ಷ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ತಮ್ಮ ಸದಾಶಯ ನುಡಿಗಳಲ್ಲಿ ಅನುಭವಮಂಟಪ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆಯಬೇಕು. ಆ ನಿಟ್ಟಿನಲ್ಲಿ ನಾವೆಲ್ಲ ಶ್ರಮಿಸಬೇಕು ಎಂದರು. ನೇತೃತ್ವ ವಹಿಸಿದ ಹಾರಕೂಡ ಸಂಸ್ಥಾನ ಹಿರೇಮಠದ ಪೂಜ್ಯ ಡಾ.ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದುದ್ದಕ್ಕಾಗಿ ಸನ್ಮಾನಿಸಲಾಯಿತು.

ಪ್ರಸಕ್ತ ಸಾಲಿನ ಡಾ.ಚನ್ನಬಸವ ಪಟ್ಟದ್ದೇವರು ಅನುಭವಮಂಟಪ ಪ್ರಶಸ್ತಿ ಸ್ವೀಕರಿಸಿ, ಮನಗುಂಡಿ ಶ್ರೀ ಗುರುಬಸವಮಹಾಮನೆಯ ಪೂಜ್ಯ ಬಸವಾನಂದ ಮಹಾಸ್ವಾಮಿಗಳು ಇಲ್ಲಿ ನಡೆಯುವ ಸಮಾರಂಭಗಳಲ್ಲಿ ಸಣ್ಣ ದೋಷವು ಇರಲಾರದಂತೆ ಕಾರ್ಯಕ್ರಮ ರೂಪಿಸಬೇಕು. ಎಲ್ಲರನ್ನು ಆಕರ್ಷಿಸುವಂತಾಗಬೇಕು ಎಂದರು. ಅನುಭಾವ ನೀಡಿದ ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪನವರು ಬಸವಾದಿ ಶರಣರು ಕಟ್ಟ ಬಯಸಿದ ಅನುಭವಮಂಟಪದ ಸಂಭ್ರಮ ಮತ್ತೊಮ್ಮೆ ನಾವು ನೋಡುವಂತಾಗಲಿ ಎಂದರು.

ಕರ್ನಾಟಕ ಸರಕಾರ ಪಶು ಸಂಗೋಪನಾ ಸಚಿವರ ಪ್ರಭು ಚವ್ಹಾಣ ಸಮಾರಂಭವನ್ನು ಉದ್ಘಾಟಿಸಿ, ಪೂಜ್ಯರ ಆಶಯಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು. ಯುಗಪ್ರವರ್ತಕ ಗ್ರಂಥ ಮತ್ತು ಲಿಂಗಾಯತ ದಿನದರ್ಶಿಕೆ ಬಿಡುಗಡೆಗೊಳಿಸಲಾಯಿತು. ಆರಂಭದಲ್ಲಿ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಆಯುಕ್ತ ಶರಣಬಸಪ್ಪ ಕೊಟ್ಟಪ್ಪಗೋಳ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿದರು. ಚಂದ್ರಕಾಂತ ಬೆಲ್ಲದ ಅವರು ಮಹಾದ್ವಾರ ಉದ್ಘಾಟಿಸಿದರು. ಡಾ.ಪಂ.ವೀರಭದ್ರಪ್ಪ ಗಾದಗಿ ವೇದಿಕೆ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬೀದರ ಸಂಸದ ಭಗವಂತ ಖೂಬಾ, ಕಲಬುರಗಿ ಸಂಸದ ಉಮೇಶ ಜಾಧವ, ಸೇಡಂ ಶಾಸಕ ರಾಜಕುಮಾರ ತೇಲಕೂರು, ಬೀದರ ಎಂ.ಎಲ್.ಸಿ. ರಘುನಾಥ ಮಲ್ಕಾಪೂರೆ ಇದ್ದರು.

ಅತಿಥಿಗಳಾಗಿ ಭಾಲ್ಕಿ ಮಾಜಿ ಶಾಸಕ ಪ್ರಕಾಶ ಖಂಡ್ರೆ, ಸುಭಾಷ ಕಲ್ಲೂರು, ಬಾಬು ವಾಲಿ, ಗುರುನಾಥ ಕೊಳ್ಳುರು, ಶಾಲಿನಿ ವಾಡೇಕರ, ಅನೀಲ ರಗಟೆ, ಬಸವರಾಜ ಬಾಲಕೀಲೆ, ಬಿ.ಗುರುಪ್ರಸಾದ ಮುಂತಾದವರು ಇದ್ದರು. ಡಾ.ಎಸ್.ಬಿ.ದುರ್ಗೆ ಬಸವಗುರುಪೂಜೆ ನೆರವೇರಿಸಿದರು. ರೇಖಾ ಅಪ್ಪಾರಾವ ಸೌದಿ ರಾಜಕುಮಾರ ಹೂಗಾರ, ರಾಮಚಂದ್ರ ಕಲ್ಲಹಿಪ್ಪರ್ಗಿ ಅವರಿಂದ ವಚನ ಸಂಗೀತ ನಡೆಯಿತು. ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಧನರಾಜ ತಾಳಂಪಳ್ಳಿ ಸ್ವಾಗತಿಸಿದರು. ನೂಪುರ ನೃತ್ಯ ಅಕಾಡೆಮಿ ಬೀದರ ತಂಡದವರಿಂದ ಪ್ರದರ್ಶನಗೊಂಡ ನೃತ್ಯ ಗಮನ ಸೆಳೆಯಿತು. ೭೭೦ ವಿದ್ಯಾರ್ಥಿಗಳಿಂದ ವಚನ ಹಾಗೂ ಗೀತಗಾಯನದೊಂದಿಗೆ ಸಮಾರಂಭ ಆರಂಭಗೊಂಡಿತ್ತು. ಆಕಾಶವಾಣಿ ಕಲಾವಿದ ನವಲಿಂಗ ನಿರೂಪಿಸಿದರು. ದೇವೇಂದ್ರ ಖಾದೆಪೂರ ವಂದಿಸಿದರು. ಬಸವಕಲ್ಯಾಣ ಶ್ರೀ ಬಸವೇಶ್ವರ ದೇವಸ್ಥಾನ ಕಮೀಟಿ ವತಿಯಿಂದ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

emedialine

Recent Posts

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

48 seconds ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

3 hours ago

ಶರಣ ಮಾರ್ಗಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅಗತ್ಯ: 10ನೇ ವರ್ಷದ ಹೊಸ್ತಿಲಲ್ಲಿ ನಿಂತು ನಿಮ್ಮೊಂದಿಗಿಷ್ಟು

ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…

4 hours ago

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

18 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

18 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

19 hours ago