ಬಿಸಿ ಬಿಸಿ ಸುದ್ದಿ

ಬಸವಕಲ್ಯಾಣ ಅನುಭವಮಂಟಪ: ವಚನ ಸಂಗೀತ: ಪರಂಪರೆ ಮತ್ತು ಬೆಳವಣಿಗೆ ಗೋಷ್ಠಿ

ಬಸವಕಲ್ಯಾಣ: ಅನುಭವಮಂಟಪ ಪರಿಸರದಲ್ಲಿ ನಿರ್ಮಿಸಿದ ಪಂಡಿತ ಬಸವರಾಜ ರಾಜಗುರು ಮಹಾದ್ವಾರ ಮತ್ತು ಪಚಿಡಿತ ಮಲ್ಲಿಕಾರ್ಜುನ ಮನಸೂರು ವೇದಿಕೆಯಲ್ಲಿ ಆಯೋಜಿಸಲಾದ ೪೦ನೇ ಶರಣಕಮ್ಮಟ ಹಾಗೂ ಅನುಭವಮಂಟಪ ಉತ್ಸವ-೨೦೧೯ ರ ಭಾಗವಾಗಿ ವಚನ ಸಂಗೀತ ಪರಂಪರೆ ಮತ್ತು ಬೆವಳಣಿಗೆ ಗೋಷ್ಠಿ-೦೧ ಜರುಗಿತು. ಪೂಜ್ಯ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು ಖೇಳಗಿ, ಪೂಜ್ಯ ನಿರಂಜನ ಮಹಾಸ್ವಾಮಿಗಳು, ಬಸವಕಲ್ಯಾಣ ದಿವ್ಯಸನ್ನಿಧಾನವಹಿಸಿದ್ದರು. ಬೀದರ ಲಿಂಗಾಯತ ಮಹಾಮಠದ ಪೂಜ್ಯ ಅಕ್ಕ ಅನ್ನಪೂರ್ಣತಾಯಿ ಅಧ್ಯಕ್ಷತೆ ವಹಿಸಿದ್ದರು.

ಬಸವಬೆಳಗು ಸಂಪಾದ ಪ್ರೊ.ಸಿದ್ಧಣ್ಣ ಲಂಗೋಟಿ ರಾಮದುರ್ಗ ಅವರ ತಮ್ಮ ಅನುಭಾವ ನುಡಿಯಲ್ಲಿ ಬಸವಾದಿ ಶರಣರ ವಚನಗಳಿಗೆ ಸಂಗೀತ ಜೋಡಿಸಿ, ಹಾಡುವ ಪರಂಪರೆ ಮತ್ತು ಬೆವಳಣಿಗೆ ಕುರಿತಾಗಿ ತಿಳಿಸಿದರು. ರಾಷ್ಟ್ರಮಟ್ಟದ ಖ್ಯಾತ ಸಂಗೀತ ಕಲಾವಿದರಾದ ಡಾ.ಹನುಮಣ್ಣ ನಾಯಕ ದೊರೆ, ಡಾ.ಮೃತ್ಯುಂಜಯ ಶೆಟ್ಟರ್, ಡಾ.ಕೃಷ್ಣಮೂರ್ತಿ ಭಟ್ ತಮ್ಮ ಸಂಗೀತ ಪ್ರದರ್ಶನ ನೀಡಿದ್ದು, ವಿಶೇಷವಾಗಿತ್ತು.

ಮುಖ್ಯ ಅತಿಥಿಗಳಾಗಿ ಬಿ.ಜಿ.ಶಟಕಾರ, ಶಿವಶರಣಪ್ಪ ವಾಲೆ, ವಿಜಯಕುಮಾರ ತೇಗಲತಿಪ್ಪಿ, ಶರಣಪ್ಪ ಮಿಠಾರೆ, ಡಾ.ಜಗನ್ನಾಥ ಹೆಬ್ಬಾಳೆ, ಅನೀಲ ಭೂಸಾರೆ, ಪ್ರಭುರಾವ ವಸ್ಮತೆ, ಅಶೋಕ ಮಿಠಕಲ್ಲೆ, ಬಾಬು ವಾಜಿನಾಮ, ಘಾಳೆಪ್ಪ ಮಂಜು ನಾಯಕ, ಯುವರಾಜ ಬೆಂಡೆ, ವಿಶ್ವನಾಥಪ್ಪ ಬಿರಾದಾರ, ಬಸವರಾಜ ಮರೆ, ಮನ್ಮಥಪ್ಪ ಹುಗ್ಗೆ, ಕಲ್ಲಪ್ಪ ಮುದ್ದಾ, ಸಂಗಪ್ಪ ಹಿಪ್ಪಳಗಾಂವೆ, ಜಗನ್ನಾಥ ಪತಂಗೆ, ಜಗನ್ನಾಥ ಕುಶನೂರೆ, ಬಾಬು ಹೊನ್ನಾ ನಾಯಕ, ಗುಂಡುರೆಡ್ಡಿ ಕಮಲಾಪೂರೆ, ಶರಣು ಸಲಗರ, ಪ್ರದೀಪ ವಾತಡೆ, ನಿಖಿಲಕುಮಾರ ಖಂಡ್ರೆ ಭಾಗವಹಿಸಿದ್ದರು.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಭೀಮಸಿಂಗ್ ರಾಠೋಡ, ಮಾಣಿಕಪ್ಪ ಗಾದಾ, ಶಿವಶರಣಪ್ಪ ಕಲಬುರಗಿ, ಶಕುಂತಲಾ ಬೆಲ್ದಾಳೆ, ಹನುಮರೆಡ್ಡಿ ಮಲಕೇಂದ್ರರೆಡ್ಡಿ ನಾಡನೌಡ, ಶಿವಮಹಿಮಾ ಕಾಡಾದಿ ಅವರಿಗೆ ಸನ್ಮಾನಿಸಲಾಯಿತು. ಶ್ರೀ ಬಸವೇಶ್ವರ ದೇವಸ್ಥಾನ ಶಾಲೆ ಮಕ್ಕಳಿಂದ ಪ್ರದರ್ಶನ ವಚನ ನೃತ್ಯ ಗಮನ ಸೆಳೆಯಿತು. ಗುರುನಾಥ ಗಡ್ಡೆ ಸ್ವಾಗತಿಸಿದರು. ದೇವೆಂದ್ರ ಬರಗಾಲೆ ನಿರೂಪಿಸಿದರು. ಮಲ್ಲಿಕಾರ್ಜುನ ಸಂಗಮಕರ ವಂದಿಸಿದರು. ಕೊನೆಯಲ್ಲಿ ಗುರು ಚನ್ನಬಸವ ಸಾಂಸ್ಕೃತಿಕ ಕಲಾ ಮತ್ತು ಕ್ರೀಡಾ ವೇದಿಕೆ ಟ್ರಸ್ಟ್ ಭಾಲ್ಕಿ ಕಲಾವಿದರಿಂದ ವೈ.ಡಿ.ಬದಾಮಿ ಮತ್ತು ಮಂಜುಳಾ ಬಾದಾಮಿ ನಿರ್ದೇಶಿತ ಜಿ.ಎನ್.ಮಲ್ಲಿಕಾರ್ಜುನಪ್ಪ ವಿರಚಿತ ಮಹಾಕ್ರಾಂತಿ ನಾಟಕ ಪ್ರದರ್ಶಗೊಂಡಿತು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

4 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

4 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

4 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

21 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

23 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago