ಬಿಸಿ ಬಿಸಿ ಸುದ್ದಿ

ದಕ್ಷ ಅಧಿಕಾರಿಯಾಗಿ ಸೇವೆ ಮಾಡಿದವರು ಒಡೆಯರ್: ಶಿವನಗೌಡ ಪಾಟೀಲ

ಸುರಪುರ: ಪೊಲೀಸ್ ಇಲಾಖೆಗೆ ಸೇರಿದ ನಂತರ ಮೊದಲ ಬಾರಿಗೆ ಸುರಪುರ ಠಾಣೆಗೆ ಆಗಮಿಸಿದ್ದರು ಉತ್ತಮವಾಗಿ ಕಾರ್ಯನಿರ್ವಹಿಸಿ ದಕ್ಷ ಅಧಿಕಾರಿಯಾಗಿ ಸೋಮಲಿಂಗ ಒಡೆಯರ್ ಸೇವೆ ಮಾಡಿದ್ದಾರೆ ಎಂದು ಡಿವಾಯ್‌ಎಸ್‌ಪಿ ಶಿವನಗೌಡ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.

ಸುರಪುರ ಠಾಣೆಯಿಂದ ಗೋಗಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿರುವ ಪಿಎಸ್‌ಐ ಸೋಮಲಿಂಗ ಒಡೆಯರ್ ಅವರ ಬಿಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ,ಜನ ಸೇವೆಯೇ ಜನಾರ್ಧನ ಸೇವೆ ಎಂಬ ಮಾತಿನಂತೆ ಒಡೆಯರ ಜನರ ಯಾವುದೆ ದೂರುಗಳಿಗೆ ಸ್ಪಂಧಿಸುವ ಮೂಲಕ ತಮ್ಮ ದಕ್ಷತೆಯನ್ನು ತೋರಿದ್ದಾರೆ ಎಂದರು.

ಇನ್ಸ್ಪೇಕ್ಟರ್ ಆನಂದರಾವ್ ಅವರು ಮಾತನಾಡಿ,ಒಡೆಯರ್ ಮೇಧಿಕಾರಿಗಳ ಯಾವುದೆ ಆದೇಶಕ್ಕೆ ಗೌರವಿಸುವ ವ್ಯಕ್ತಿಯಾಗಿದ್ದರು.ಅನೇಕ ಪ್ರಕರಣಗಳ ಕುರಿತು ರಾತ್ರಿ ಹಗಲೆನ್ನದೆ ತನಿಖೆಗೆ ಮುಂದಾಗಿದ್ದರು,ಕೂಡಲಗಿ ಯುವಕನ ಕೊಲೆ,ದೀವಳಗುಡ್ಡದ ಒಂದು ಫೋಕ್ಸೊ ಪ್ರಕರಣ ಇರಬಹುದು ಅನೇಕ ಪ್ರಕರಣಗಳ ಆರೋಪಿಗಳನ್ನು ಹಿಡಿದು ತರುವಲ್ಲಿ ಒಳ್ಳೆಯ ಕೆಲಸವನ್ನು ಮಾಡಿದ್ದರು.ಅವರ ಪ್ರಾಮಾಣಿಕ ಸೇವೆಗೆ ಇನ್ನೂ ಉನ್ನತ ಹುದ್ದೆಗಳು ಲಭಿಸುವಂತಾಗಲೆಂದು ಹಾರೈಸಿದರು.

ಸನ್ಮಾನ ಸ್ವೀಕರಿಸಿದ ಪಿಎಸ್‌ಐ ಸೋಮಲಿಂಗ ಒಡೆಯರ್ ಮಾತನಾಡಿ,ನಾನು ಈ ಠಾಣೆಗೆ ಬಂದಾಗ ಇನ್ನೂ ಯಾವುದರ ಬಗ್ಗೆಯೂ ಹೆಚ್ಚು ಗೊತ್ತಿರಲಿಲ್ಲ,ಅಂತಹ ಸಂದರ್ಭದಲ್ಲಿ ನನ್ನ ಮೇಲಧಿಕಾರಿಗಳು ಗುರವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವಂತೆ ಒಬ್ಬ ಗುರುವಿನಂತೆ ನಿಂತು ನನಗೆ ಮಾರ್ಗದರ್ಶನ ಮಾಡಿ ಉತ್ತಮ ಸೇವೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.ಅದಕ್ಕಾಗಿ ಅವರಿಗೆ ನನ್ನ ಧನ್ಯವಾದಗಳು ಎಂದರು.ಇದೇ ಸಂದರ್ಭದಲ್ಲಿ ಠಾಣೆಯ ಸಿಬ್ಬಂದಿಗಳಾದ ರವಿಕುಮಾರ ಏವೂರ,ದಯನಾಂದ್ ಹಾಗು ಮುಖಂಡರಾದ ನಿಂಗರಾಜ ಬಾಚಿಮಟ್ಟಿ ಮತ್ತಿತರರು ಅವರ ಸೇವೆಯ ಬಗ್ಗೆ ಗುಣಗಾನ ಮಾಡಿದರು.

ನಂತರ ಠಾಣೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗು ಒಡೆಯರ್ ಅವರ ಅಭಿಮಾನಿಗಳು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿ ಬೀಳ್ಕೊಟ್ಟರು.ಕಾರ್ಯಕ್ರಮದ ವೇದಿಕೆ ಮೇಲೆ ಶಹಾಪುರ ಠಾಣೆ ಸಿಪಿಐ ಶ್ರೀನಿವಾಸ ಅಲ್ಲಾಪುರ,ಪಿಎಸ್‌ಐ ಶರಣಪ್ಪ,ಪ್ರೋಬೆಷನರಿ ಪಿಎಸ್‌ಐ ಸಿದ್ದೇಶ್ವರ ಗೆರಡೆ ಇದ್ದರು.

ಕಾರ್ಯಕ್ರಮದಲ್ಲಿ ಠಾಣಾ ಸಿಬ್ಬಂದಿಗಳಾದ ಚಂದ್ರಶೇಖರ ಕುಂಬಾರ,ಸೋಮಯ್ಯ ಸ್ವಾಮಿ,ಬಸವರಾಜ ಮುದಗಲ್ ಹಾಗು ಮುಖಂಡರಾದ ಮಲ್ಲಪ್ಪ ಹುಬ್ಬಳ್ಳಿ,ಭೀಮರಾಯ ಕುಂಬಾರ,ಮಲ್ಲು ದಂಡಿನ್,ಸೂಗುರಾಜ,ರವಿ ಹುಲಕಲ್ ಸೇರಿದಂತೆ ಅನೇಕರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

3 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

3 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

3 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

20 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

22 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago