ಬಿಸಿ ಬಿಸಿ ಸುದ್ದಿ

ಬರಹದಂತೆ ಬದುಕಿದವರು ಬಂಡಾಯ ಸಾಹಿತಿ ಡಾ.ವಾಲೀಕಾರ: ತೇಗಲತಿಪ್ಪಿ ಅಭಿಮತ

ಕಲಬುರಗಿ: ಕನ್ನಡ ಸಾಹಿತ್ಯ ಲೋಕದಲ್ಲಿ ಅಣ್ಣನವರೆಂದೆ ಕರೆಯಲ್ಪಡುತ್ತಿದ್ದ ಹಿರಿಯ ಬಂಡಾಯ ಸಾಹಿತಿ ಡಾ.ಚೆನ್ನಣ್ಣಾ ವಾಲೀಕಾರ ರವರು ಕೆಂಪಂಗಿ ಧರಿಸುವ ಮೂಲಕ ಅಸಮಾನತೆಯ ವಿರುದ್ಧ ಧ್ವನಿ ಎತ್ತುವ ಮೂಲಕ ಬಂಡಾಯಗಾರರಾಗಿ ಗುರಿಸಿಕೊಂಡರೂ ಅವರ ಹೃದಯದಲ್ಲಿ ಮಾತ್ರ ಹರಿದಿದ್ದುಆನವ ಪ್ರೇಮ ಸಾಗರ ಎಂದು ಹಿರಿಯ ಕಥೆಗಾರ ಸಿದ್ಧರಾಮ ಹೊನ್ಕಲ್ ಅಭಿಪ್ರಾಯಪಟ್ಟರು.

ವಿಶ್ವಜ್ಯೋತಿ ಪ್ರತಿಷ್ಠಾನದ ವತಿಯಿಂದ ನಗರದ ಬಸವೇಶ್ವರ ಪುತ್ಥಳ್ಳಿ ಆವರಣದಲ್ಲಿ ಹಮ್ಮಿಕೊಂಡ ಹಿರಿಯ ಬಂಡಾಯ ಸಾಹಿತಿ ದಿವಂಗತ ಡಾ.ಚೆನ್ನಣ್ಣಾ ವಾಲೀಕಾರ ಅವರಿಗೆ ನಡೆದ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರತಿಷ್ಠಾನದ ಸಂಸ್ಥಾಪಕರೂ ಆದ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಸಮಾಜದ ಪ್ರತಿಯೊಬ್ಬರನ್ನು ಮುಖ್ಯ ವಾಹಿನಿಗೆ ತರಬೇಕೆಂಬ ಆಶಯ ಹೊಂದಿದ ವಿಶಿಷ್ಟ ಕವಿಯಾಗಿದ್ದ ಚೆನ್ನಣ್ಣ ನವರು ಸಮಾನತೆಗಾಗಿ ಹಂಬಲಿಸುತ್ತಾ ತಳಸಮುದಾಯಕ್ಕೆ ತಲೆ ಎತ್ತಿ ಬದುಕುವಂತೆ ಕರೆ ಕೊಟ್ಟಿದ್ದ ಸಾಹಿತ್ಯ ಹೋರಾಟಗಾರ ಹಾಗೂ ಯಾವುದೇ ಗೊಂದಲಗಳಿಲ್ಲದ ಸುಂದರವಾಗಿ ಮಿನುಗಿದ ನಕ್ಷತ್ರ ಡಾ.ಚೆನ್ನಣ್ಣಾ ವಾಲೀಕಾರ ರವರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಜನಪರ ನಿಲುವುನ್ನು ಹೊಂದಿದ ಚೆನ್ನಣ್ಣಾ ನವರು, ಯುವಕರನ್ನು ಕೂಡ ತನ್ನೊಂದಿಗೆ ಕರೆದುಕೊಂಡು ಹೋಗುವ ವಿಶಿಷ್ಟ ಗುಣ ಹೊಂದಿದ್ದರು ಎಂದು ಭಾವಪೂರ್ಣವಾಗಿ ಹೇಳಿದರು.

ವಾಗ್ಮಿ ಡಾ.ಕೆ.ಗಿರಿಮಲ್ಲ ಮಾತನಾಡಿ, ನುಡಿದಂತೆ ನಡೆದು ಬರಹ ಹಾಗೂ ಬದುಕಿನ ನಡುವೆ ಸಾಮಿಪ್ಯ ಸಾಧಿಸಿದ ಅಪರೂಪದ ಸಾಹಿತಿ. ಅನೇಕ ಯುವ ಬರಹಗಾರರ ಗುರುಗಳಾಗಿ ಬೆನ್ನು ತಟ್ಟಿದ್ದ ಶ್ರೇಷ್ಠ ವ್ಯಕ್ತಿತ್ವ ಅಣ್ಣ ಚೆನ್ನಣ್ಣಾ ನವರದು. ಅವರ ಅಗಲಿಕೆ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ.ರಾಜೇಂದ್ರ ಯರನಾಳೆ, ಪತ್ರಕರ್ತ-ಸಾಹಿತಿ ಪ್ರಭಾಕರ ಜೋಶಿ, ಪ್ರಮುಖರಾದ ರವೀಂದ್ರ ಶಾಬಾದಿ, ಡಾ,ಬಿ.ಸಂದೀಪ, ಹೋರಾಟಗಾರ ಸಚೀನ್ ಫರಹತಾಬಾದ, ರವೀಂದ್ರಕುಮಾರ ಭಂಟನಳ್ಳಿ, ನಾಗಲಿಂಗಯ್ಯಾ ಮಠಪತಿ, ಶಿವಾನಂದ ಮಠಪತಿ, ನೀಲಾಂಬಿಕಾ ಚೌಕಿಮಠ, ಬಸವರಾಜ ತೋಟದ, ಸಂಗಯ್ಯಾ ಹಳ್ಳದಮಠ, ಮಹಾಂತೇಶ ಕಲಬುರಗಿ, ಪ್ರಭುಲಿಂಗ ಯಳವಂತಗಿ, ಪ್ರಭುಲಿಂಗ ಮೂಲಗೆ, ಎಂ.ಬಿ.ಅಂಬಲಗಿ, ಎಸ್.ಎಂ.ಪಟ್ಟಣಕರ್, ಹಣಮಂತ ಅಟ್ಟೂರ, ಶಿವಶರಣ ಕುಸನೂರ, ವಿಶ್ವನಾಥ ತೊಟ್ನಳ್ಳಿ, ಶ್ರೀಕಾಂತ ಪಾಟೀಲ ತಿಳಗೂಳ, ಭಗವಂತ ಹೊನ್ನಕಿರಣಗಿ ಸೇರಿದಂತೆ ಅನೇಕ ಜನಪರ ಹೋರಾಟಗಾರರು, ಸಾಹಿತಿಗಳು ಭಾಗವಹಿಸಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 hour ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 hour ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 hour ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

18 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

20 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago