ಬಿಸಿ ಬಿಸಿ ಸುದ್ದಿ

ಹನ್ನೆರಡನೆಯ ಶತಮಾನದ ಬಸವಣ್ಣನವರ ನೆನೆಯುವುದ್ದು ಅದ್ಭುತ: ಪ್ರೊ. ಕುಪೇಂದ್ರ ಪಾಟೀಲ

ಶಹಾಪುರ: ಹನ್ನೆರಡನೆಯ ಶತಮಾನದ ಬಸವಣ್ಣನವರನ್ನು ನೆನೆಯುವುದೆ ಒಂದು ಅದ್ಭುತ ಎಂದು ಕಲಬುರ್ಗಿ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರೊ. ಕುಪೇಂದ್ರ ಪಾಟೀಲ ಅಭಿಪ್ರಾಯಪಟ್ಟರು.

ಸ್ಥಳೀಯ ಬಸವಮಾರ್ಗ ಪ್ರತಿಷ್ಢಾನ ಏರ್ಪಡಿಸಿದ್ದ ತಿಂಗಳ ಬಸವ ಬೆಳಕು – ೮೩ ಕಾರ್ಯಕ್ರಮದಲ್ಲಿ ಬಸವಣ್ಣನವರಿಂದ ಬದುಕಿತು ಈ ಲೋಕ ಎಂಬ ವಿಷಯ ಕುರಿತು ಅನುಭಾವ ನೀಡಿದರು. ಬ್ರಿಟನ್ ದೇಶ ಇಡೀ ರಾಷ್ಟ್ರಕ್ಕೆ ಪ್ರಜಾಪ್ರಭುತ್ವವನ್ನು ಪರಿಚಯಿಸಿತು ಎಂದು ಹೇಳಿತ್ತಾರೆ. ಮ್ಯಾಗ್ನಕಾರ್ಟ್ ಒಪ್ಪಂದದ ಮೂಲಕ ರಾಜಶಾಹಿ ವ್ಯವಸ್ಥೆಯ ಸರ್ವಾಧಿಕಾರವನ್ನು ಹಿಂತೆಗೆಯಲಾಯಿತು ಎಂದು ಹೇಳುತ್ತಾರೆ. ತೀರಾ ಇತ್ತೀಚಿನ ಶತಮಾನಗಳಲ್ಲಿ ಕಾರ್ಲಮಾರ್ಕ್ಸ್ ದುಡಿಯುವ ಜನಗಳಿಗೆ ಸ್ವಾಭಿಮಾನದ ಪಾಠ ಹೇಳಿದ ಮೊಟ್ಟ ಮೊದಲಿಗ ಎಂದೆಲ್ಲ ಇತಿಹಾಸದ ಪುಟಗಳನ್ನು ನಮ್ಮ ಮುಂದೆ ಬಿಚ್ಚಿರಿಸಿ ಹೇಳುತ್ತಾರೆ. ವಿಶ್ವ ಸಂಸ್ಥೆಯೂ ೩೩ ಮಾನವೀಯ ಹಕ್ಕುಗಳನ್ನು ಪ್ರತಿಪಾದಿಸಿತು ಎಂದು ನಾವೆಲ್ಲ ಓದುತ್ತೇವೆ.

ಆದರೆ ನಾವೆಲ್ಲ ಒಂದು ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು. ಬಿಟ್ರನ್ ಪ್ರಜಾಪ್ರಭುತ್ವ ರಾಷ್ಟ್ರವಾಗುವುದಕ್ಕಿಂತ ಪೂರ್ವದಲ್ಲಿ, ಮ್ಯಾಗ್ನಕಾರ್ಟ ಒಪ್ಪಂದಕ್ಕೂ ಮುಂಚೆ, ಕಾರ್ಲ್ ಮಾರ್ಕ್ಸ್, ವಿಶ್ವ ಸಂಸ್ಥೆಗೂ ಮುಂಚೆಯೆ ಬಸವಣ್ಣನವರು ಈ ಎಲ್ಲವುಗಳ ಆಶಯಗಳನ್ನು ಜಾರಿಗೆ ತಂದಿದ್ದರು ಎಂದು‌ ವಿವರವಾಗಿ ತಿಳಿಸಿದರು. ಬಸವಣ್ಣನವರನ್ನು ಬಹಳಷ್ಟು ಜನ ಸಮಾಜ ಸುಧಾರಕ ಎಂದು ಕರೆಯುತ್ತಾರೆ, ಈ ಮಾತನ್ನು ಒಪ್ಪಲಾಗದು. ಹೊಸ ಸಮಾಜವನ್ನು ಕಟ್ಟಿ ನಿಲ್ಲಿಸಿದ ಮಹಾತ್ಮ ಎಂದು ಮನಂಬುಗುವಂತೆ ವಿಸೃತ್ತವಾಗಿ ಹೇಳಿದರು.  ವಿಶ್ವ ಸಂಸ್ಥೆ ಬಸವಣ್ಣನವರು ಕೇವಲ ಪಟ್ಟಭದ್ರರನ್ನು, ಅಧಾರ್ಮಿಕರನ್ನು , ರಾಜಶಾಹಿಯನ್ನು ವಿರೋಧಿಸಲಿಲ್ಲ. ಇವರೆಲ್ಲರಿಗೂ ಪರ್ಯಾಯವಾಗಿರುವ ಮಾರ್ಗವೊಂದನ್ನು ನಮಗೆಲ್ಲ ಬಿಟ್ಟುಕೊಟ್ಟರು.‌ಆದರೆ ಬಸವಣ್ಣನವರನ್ನು ಅರಿಯುವ ದೊಡ್ಡ ಮನಸ್ಸು ನಮ್ಮದಿಲ್ಲ. ಇದು ಶರಣರ ದೌರ್ಭಾಗ್ಯ ಎಂದು‌ ವ್ಯಥೆ ಪಟ್ಟರು.

ಶರಣರ ಕುರಿತು ಇಂದು ಬೇಕಾದಷ್ಟು ಸಭೆ ಸಮಾರಂಭ ಬರವಣಿಗೆ ಮುಂತಾದವೆಲ್ಲ ಯಥೇಚ್ಛವಾಗಿ ನಡೆದಿದ್ದರೂ ಅವು ಪರಿಣಾಮಕಾರಿಯಾಗದಿರುವುದಕ್ಕೆ ಕಾರಣ , ನಮ್ಮ ನಡೆ ನುಡಿ ಒಂದಾಗಿಲ್ಲದಿರುವುದು. ಶರಣರ ನಡೆ ನುಡಿ ಒಂದಾಗಿರುವುದರಿಂದ ಅವರ ಪ್ರತಿಯೊಂದು ಮಾತು ಮುತ್ತಾದವು. ನಡೆ ಪರುಷವಾಯಿತು.‌ಶರಣರ ಚಿಂತನೆಗಳನ್ನು ನಮ್ಮ‌ ಬದುಕಿನಲ್ಲಿ ಅಳವಡಿಸಿಕೊಂಡದ್ದೆ ಆದರೆ ಜೀವನ ಸಫಲವಾಗುವುದರಲ್ಲಿ ಯಾವುದೇ ಅನುಮಾಮವಿಲ್ಲ. ಬಸವನ ಆಶಯ ಹೊತ್ತುಕೊಂಡು ಜಗತ್ತೇ ಬದುಕುವ ಕಾಲ ದೂರವಿಲ್ಲ ಎಂದವರು ಹೇಳಿದರು.

ಮ್ಯಾಗ್ನಕಾರ್ಟಾ ಒಪ್ಪಂದ ಸಮಾಜದಲ್ಲಿ‌ಮೌಢ್ಯ ಕಂದಾಚಾರ ಹೊಡೆದೊಡಿಸಬೇಕೆಂದು ತಮ್ಮ‌ ಬದುಕನ್ನೇ ದೀವಿಗೆಯಂತೆ ಉರಿಸಿದ ನಾಲತವಾಡದ ವೀರೇಶ್ವರ ಶರಣ – ಬಸವಾದಿ ಶರಣರ ಬದುಕಿನಿಂದ ಪ್ರಭಾವಿತಗೊಂಡು ಶರಣ ಜೀವನವನ್ನೆ ಸವೆಸಿದವರು. ಶರಣರ ಚಿಂತನೆಗಳನ್ನು ಜಾರಿಗೆ ತರುವಾಗ ಕಾಡಿದ ಸಮಾಜ, ಅವರು ಲಿಂಗೈಕ್ಯರಾದ ತರುವಾಯ ಶರಣರನ್ನು‌ ಕೊಂಡಾಡುವುದು ಯಾವ ನ್ಯಾಯ ? ಶರಣರ ವಚನಗಳು ಬದುಕಿನ‌ ದಾರಿ ದೀಪ.‌ಮಾರ್ಗದರ್ಶಿ. ವಚನದ ಬೆಳಕಿನಲ್ಲಿ ಸಮಾಜ‌ ಸಾಗುತ್ತಿದ್ದರೆ ಗುಡಿ ಚರ್ಚು ಮಸೀದಿಗಳು ಪ್ರಾಮುಖ್ಯತೆ ಕಳೆದುಕೊಳ್ಳುತ್ತವೆ. ಶರಣ ತತ್ವ ಇವನಾರವ ಎನ್ನುವ ತತ್ವವಲ್ಲ. ಇವ ನಮ್ಮವ ಎಂದು ಅಪ್ಪಿಕೊಳ್ಳುವ ಧರ್ಮ ಎಂದು ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ನುಡಿದರು.

ಸಭೆಯ ಅಧ್ಯಕ್ಷತೆಯನ್ನು ಕಲಬುರ್ಗಿ ಜಾಗತಿಕ ಲಿಂಗಾಯತ ಮಹಾಸಭೆಯ ಆರ್.ಜಿ.‌ಶೆಟ್ಟಕಾರ ವಹಿಸಿದ್ದರು. ಸಭೆಯ ಉದ್ಘಾಟನೆಯನ್ನು ಶಹಾಪುರ ಕಾರ್ಯನಿರ್ವಾಹಕ ಅಭಿಯಂತರ ಎಚ್. ಬಕ್ಕಪ್ಪ ವಹಿಸಿದ್ದರು. ಅಲ್ಲಮಪ್ರಭು, ಮಹಾದೇವ ಗಾಳೇನೋರ, ಚೆನ್ನಮಲ್ಲಿಕಾರ್ಜುನ‌ ಗುಂಡಾನೋರ ವಚನ ಪ್ರಾರ್ಥನೆ ಮಾಡಿದರು. ಸಂಗಣ್ಣ ಗುಳಗಿ ಸ್ವಾಗತಿಸಿದರು.ಶಿವಣ್ಣ ಇಜೇರಿ‌ನಿರ್ವಹಿಸಿದರು. ಕೊನೆಗೆ ಶರಾವತಿ ಸತ್ಯಂಪೇಟೆ ವಂದಿಸಿದರು.

ಸಭೆಯಲ್ಲಿ ಬಸವರಾಜ ಅರುಣಿ, ಶಂಕ್ರಪ್ಪ‌ ಮಣ್ಣೂರ, ಗುರಣ್ಣ ತಳವಾರ, ಸಿದ್ದಲಿಂಗಪ್ಪ ಆನೇಗುಂದಿ, ಶ್ರೀಮತಿ ಗೀತಾ ವಾಗಾ, ಶ್ರೀಮತಿ ಗಂಗಮ್ಮ , ತುಂಬಗಿ, ಹೊನ್ನಾರೆಡ್ಡಿ, ದೇವಿಂದ್ರಪ್ಪ ಬಡಿಗೇರ, ನಾಡಗೌಡ, ಗುರುಬಸವಯ್ಯ ಗದ್ದುಗೆ, ರಾಜು ಕುಂಬಾರ, ಸಂಗಮ್ಮ ಹರನೂರ ,ಪುಷ್ಪ ತುಂಬಗಿ ನಾಗರತ್ನ ಜಾಲವಾದಿ, ಅನಿತಾ ,ಸಾವಿತ್ರಿ ಕುಂಬಾರ, ಮುಂತಾದವರು ಭಾಗವಹಿಸಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

10 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

10 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

10 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago