ಕಲಬುರಗಿ: ಭಾರತದ ಈ ಮಣ್ಣಿನ ವಿಶೇಷತೆ ಎಂದರೆ, ಒಂದು ವೃತ್ತಿಯನ್ನು ಕೇವಲ ವೃತ್ತಿಯ ರೀತಿಯಲ್ಲಿ ಕಾಣದೇ, ಮಾಡುವ ಕೆಲಸದಲ್ಲಿ ಕಾಯಕದಲ್ಲಿ ದೇವರನ್ನು ಕಾಣುತ್ತೇವೆ.ಅದಕ್ಕೆ ಬಸವಣ್ಣನವರು ಕೂಡ ಕಾಯಕವೇ ಕೈಲಾಸ ಎಂದಿದ್ದು. ಆದರೆ ಇಂದು ಶಿಕ್ಷಣ ಕ್ಷೇತ್ರ ನೋಡಿದರೆ ಕಾರ್ಮಿಕರನ್ನು ನಿರ್ಮಿಸುವ ಒಂದು ಕಾರ್ಖಾನೆ ರೀತಿ (ಸ್ಕೂಲ್ = ಫ್ಯಾಕ್ಟರಿ) ಇಂದಿನ ಶಿಕ್ಷಣ ಪದ್ದತಿ ಕೆಲಸಗಾರರನ್ನು ತಯಾರಿಸುತ್ತಿದಯೇ ಹೊರತು ವ್ಯಕ್ತಿತ್ವವನ್ನು ನಿರ್ಮಿಸುವುದಿಲ್ಲ. ಅದಕ್ಕಾಗಿ ಶಿಕ್ಷಕರು ಪರಿಣಾಮಕಾರಿ ಬೋಧನೆಗೆ ತರಬೇತಿ ಕಾರ್ಯಾಗಾರಗಳು ಅತ್ಯವಶ್ಯಕವಾಗಿವೆ ಎಂದು ನಗರದ ಖ್ಯಾತ ವೈದ್ಯರಾದ ಡಾ.ಎಸ್.ಬಿ.ಕಾಮರೆಡ್ಡಿ ಅವರು ಹೇಳಿದರು.
ಇತ್ತೀಚೆಗೆ ಸರ್ಕಾರಿ ಶಿಕ್ಷಕ ತರಬೇತಿ ಮಹಾವಿದ್ಯಾಲಯದಲ್ಲಿ ಬಿ.ಎಡ್.ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ನಡೆದ ಶಿಕ್ಷಕರಿಗಾಗಿ ಟೀಚಿಂಗ್ ಎಕ್ಸಲೆನ್ಸ್ ವಿಥ್ ಎನ್.ಎಲ್.ಪಿ ಅನ್ನುವ ಕಾರ್ಯಾಗಾರ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೊದಲು ಗುರುವೇ ನಮಹ,ಅನ್ನುವುದು ಈಗ ಗುರುವೇನ್ ಮಹಾ ಎಂದಾಗುತ್ತಿದೆ.ಇದು ತುಂಬ ಆತಂಕಕಾರಿ ಸಂಗತಿ. ಈ ನಿಟ್ಟಿನಲ್ಲಿ ಮಕ್ಕಳಲ್ಲಿನ ವಿಶೇಷ ಕೌಶಲ್ಯಗಳನ್ನು ಗುರ್ತಿಸಿ ಅವರಲ್ಲಿನ ಪ್ರತಿಭೆ ಹೊರತೆಗೆಯುವ ಕೆಲಸ ಶಿಕ್ಷಕರಿಂದಾಗಬೇಕಾಗಿದೆ.ಆವಾಗಲೇ ಡಾ.ಏ.ಪಿ,ಜೆ.ಅಬ್ದುಲ್ ಕಲಾಂ ಅವರ ಭಾರvವನ್ನು ಒಂದು ವಿಶ್ವಶಕ್ತಿ ದೇಶವನ್ನಾಗಿ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಈ ಪ್ರಯುಕ್ತ ಭಾವಿ ಶಿಕ್ಷಕರಿಗಾಗಿ ಟೀಚಿಂಗ್ ಎಕ್ಸಲೆನ್ಸ್ ವಿಥ್ ಎನ್.ಎಲ್.ಪಿ ಅನ್ನುವ ಕಾರ್ಯಾಗಾರ ಶಿಬಿರವನ್ನುಆಯೋಜಿಸಿದ್ದು ಬಹಳ ಸೂಕ್ತಮತ್ತು ಅತಿ ಅವಶ್ಯಕವಾಗಿದೆ. ತರಬೇತಿ ನೀಡಲು ಬೆಂಗಳೂರಿನಿಂಧ ಆಗಮಿಸಿದ ಮನೋತಜ್ಙ ಹಾಗೂ ಶೈಕ್ಷಣಿಕ ತಜ್ಞ, ಭುಜಬಲಿ ಬೋಗಾರ ಅವರಿಗೂ ನಾನು ಅಭಿನಂದನೆ ಹೇಳುತ್ತೇನೆ ಹಾಗು ಭವಿಷ್ಯದ ಶಿಕ್ಷಕರಾಗುವ ತಮಗೆಲ್ಲರಿಗೂ ಈ ತರಬೆತಿ ಶಿಬಿರದ ಸದುಪಯೋಗ ಪಡೆದು ಅತ್ಯುತ್ತಮ ಶಿಕ್ಷಕರಾಗಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…