ಉತ್ತಮ ಫಲಿತಾಂಶಕ್ಕೆ ಪರಿಣಾಮಕಾರಿ ಬೋಧನೆ ಅವಶ್ಯಕ: ಭುಜಬಲಿ ಬೋಗಾರ

ಕಲಬುರಗಿ: ಭಾರತದ ಈ ಮಣ್ಣಿನ ವಿಶೇಷತೆ ಎಂದರೆ, ಒಂದು ವೃತ್ತಿಯನ್ನು ಕೇವಲ ವೃತ್ತಿಯ ರೀತಿಯಲ್ಲಿ ಕಾಣದೇ, ಮಾಡುವ ಕೆಲಸದಲ್ಲಿ ಕಾಯಕದಲ್ಲಿ ದೇವರನ್ನು ಕಾಣುತ್ತೇವೆ.ಅದಕ್ಕೆ ಬಸವಣ್ಣನವರು ಕೂಡ ಕಾಯಕವೇ ಕೈಲಾಸ ಎಂದಿದ್ದು. ಆದರೆ ಇಂದು ಶಿಕ್ಷಣ ಕ್ಷೇತ್ರ ನೋಡಿದರೆ ಕಾರ್ಮಿಕರನ್ನು ನಿರ್ಮಿಸುವ ಒಂದು ಕಾರ್ಖಾನೆ ರೀತಿ (ಸ್ಕೂಲ್ = ಫ್ಯಾಕ್ಟರಿ) ಇಂದಿನ ಶಿಕ್ಷಣ ಪದ್ದತಿ ಕೆಲಸಗಾರರನ್ನು ತಯಾರಿಸುತ್ತಿದಯೇ ಹೊರತು ವ್ಯಕ್ತಿತ್ವವನ್ನು ನಿರ್ಮಿಸುವುದಿಲ್ಲ. ಅದಕ್ಕಾಗಿ ಉಪನ್ಯಾಸಕರಿಗೆ ಪರಿಣಾಮಕಾರಿ ಬೋಧನಾ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರಗಳು ಅತ್ಯವಶ್ಯಕವಾಗಿವೆ ಎಂದು ಬೆಂಗಳೂರಿನ ಖ್ಯಾತ ಮನೋವೈದ್ಯರು ಹಾಗೂ ಶೈಕ್ಷಣಿಕ ತಜ್ಞ ಎನ್.ಎಲ್.ಪಿ. ತರಬೇತುದಾರ ಭುಜಬಲಿ ಬೋಗಾರ ಅವರು ಹೇಳಿದರು.

ನಿನ್ನೆ ಸಿಂದಗಿಯ ಜಿ.ಪಿ.ಪೋರ‍್ವಾಲ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ಶಿಕ್ಷಕರಿಗಾಗಿ ಜರುಗಿದ ವಿದ್ಯಾರ್ಥಿ ಆಪ್ತಸಮಾಲೋಚನಾ ತರಬೇತಿ ಶಿಬಿರದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೊದಲು ಗುರುವೇ ನಮಃ,ಅನ್ನುವುದು ಈಗ ಗುರುವೇನ್ ಮಹಾ ಎಂದಾಗುತ್ತಿದೆ.ಇದು ತುಂಬ ಆತಂಕಕಾರಿ ಸಂಗತಿ. ಈ ನಿಟ್ಟಿನಲ್ಲಿ ಮಕ್ಕಳಲ್ಲಿನ ವಿಶೇಷ ಕೌಶಲ್ಯಗಳನ್ನು ಗುರ್ತಿಸಿ ಅವರಲ್ಲಿನ ಪ್ರತಿಭೆ ಹೊರತೆಗೆಯುವ ಕೆಲಸ ಶಿಕ್ಷಕರಿಂದಾಗಬೇಕಾಗಿದೆ.ಆವಾಗಲೇ ಡಾ.ಏ.ಪಿ,ಜೆ.ಅಬ್ದುಲ್ ಕಲಾಂ ಅವರ ಭಾರvವನ್ನು ಒಂದು ವಿಶ್ವಶಕ್ತಿ ದೇಶವನ್ನಾಗಿ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ತರಬೇತಿ ನೀಡಲು ಬೆಂಗಳೂರಿನಿಂಧ ಆಗಮಿಸಿದ ಮನೋತಜ್ಙ ಹಾಗೂ ಶೈಕ್ಷಣಿಕ ತಜ್ಞ, ಭುಜಬಲಿ ಬೋಗಾರ ಅವರು ಶಿಕ್ಷಕರಿಗೆ ಆಪ್ತ ಸಮಾಲೋಚನೆಯ ವಿವಧ ಸ್ತರದ ಪ್ರಾಯೋಗಿಕ ತಂತ್ರಗಳ ಮೂಲಕ ಮನದಟ್ಟು ಮಾಡಿಕೊಟ್ಟರು.ಉಪನ್ಯಾಸಕರಾಗಿ ಕಾಲೇಜಿಗೆ ಹೋಗುವಾಗ ಮನಸ್ಸಿನಲ್ಲಿರುವ ಆತಂಕ,ಗೊಂದಲ,ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾಗಿ ಪಾಠ ಮಾಡಬಾರದು.ಬದಲಾಗಿ ಎಲ್ಲವನ್ನು ಮರೆತು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಉಪನ್ಯಾಸಕರಾಗಿ ಬೋಧನೆ ಮಾಡಬೇಕು. ಮನೆಗೆ ಹೋಗುವಾಗಲೂ ಕಾಲೆಜಿನಲ್ಲಿರುವ ಯಾವುದೇ ರೀತಿಯ ಆಂತರಿಕ ಒತ್ತಡವನ್ನು ತೆಗೆದುಕೊಂಡು ಹೋಗದೇ ಒಬ್ಬ ತಾಯಿಯಾಗಿ,ಹೆಂಡತಿಯಾಗಿ ತಮ್ಮ ತಮ್ಮ ಜವಾಬ್ದಾರಿಯನ್ನು ಪ್ರಜ್ಞಾಪೂರ್ವಕವಾಗಿ ನಿಭಾಯಿಸಬೇಕು.

ಇದರಿಂದ ತಮ್ಮ ವೃತ್ತಿ ಜೀವನದಲ್ಲಿ ಪ್ರಗತಿ ಹಾಗು ವೈಯಕ್ತಿಕ ಜೀವನದಲ್ಲಿ ನೆಮ್ಮದಿಯಿಂದ ಯಶಸ್ವಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ತರಬೇತಿ ಶಿಬಿರದ ಕಾರ್ಯಕ್ರಮದಲ್ಲಿ ಮೌನಯೋಗಿ ಫೌಂಡೇಶನ್‌ನ ಅಧ್ಯಕ್ಷರಾದ ಶ್ರಾವಣಯೋಗಿ ಹಿರೇಮಠ, ಕಾಲೇಜಿನ ಪ್ರಾಂಶುಪಾಲರದ ಶ್ರೀಭುಶೆಟ್ಟಿ,ಆಡಳಿತಾಧಿಕಾರಿ ಬಿ.ಜಿ.ಮಠ, ಡಿ.ಎಂ.ಪಾಟೀಲ್ ಹಾಗೂ ಉಪನ್ಯಾಸಕ ವೃಂದ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

emedialine

Recent Posts

ಸ್ಲಂ ಜನರಿಗೆ ಹಕ್ಕು ಪತ್ರ ನೀಡುವಂತೆ ರೇಣುಕಾ ಸರಡಗಿ ಸಿಎಂಗೆ ಮನವಿ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ. ಯಾದಗಿರಿ. ಬೀದರ್. ಕೊಪ್ಪಳ. ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಸ್ಲಂ ನಿವಾಸಿಗಳ ಕುಟುಂಬ 1ಲಕ್ಷ…

3 hours ago

ಶರಣಬಸವ ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ

ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದಲ್ಲಿ ಮಂಗಳವಾರದಂದು, ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ವಿವಿಯ ಧ್ವಜಸ್ಥಂಭದಲ್ಲಿ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ ಧ್ವಜಾರೋಹಣ…

4 hours ago

ವಕ್ಫ್ ಬೋರ್ಡ್ ನಿಂದ 15 ಜಿಲ್ಲೆಗಳಲ್ಲಿ ಮಹಿಳಾ ಪದವಿ ಕಾಲೇಜು ಸ್ಥಾಪನೆಗೆ ಸಂಪುಟ ಅಸ್ತು: ಸಚಿವ ಜಮೀರ್ ಅಹಮದ್ ಖಾನ್

ಕಲಬುರಗಿ : ಐತಿಹಾಸಿಕ ವಿಶೇಷ ಸಂಪುಟ ಸಭೆ ಯಲ್ಲಿ ಕರ್ನಾಟಕ ವಖ್ಫ್ ಬೋರ್ಡ್ ವತಿಯಿಂದ ರಾಜ್ಯದ ಹದಿನೈದು ಜಿಲ್ಲೆಗಳಲ್ಲಿ ಮಹಿಳಾ…

5 hours ago

ಸೆ.22 ರಂದು ತುಂಗಭದ್ರೆಗೆ ಬಾಗಿನ ಅರ್ಪಣೆ: ಡಿ.ಕೆ ಶಿವಕುಮಾರ್

ಕಲಬುರಗಿ: ಬರುವ ಸೆಪ್ಟೆಂಬರ್ 22 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಚಿವ ಸಂಪುಟದ ಸಹೊದ್ಯೋಗಿಗಳೊಂದಿಗೆ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲಾಗುವುದು…

5 hours ago

ಅಮೇರಿಕಾದಲ್ಲಿ ಯಾರನ್ನೂ ಭೇಟಿಯಾಗಿಲ್ಲ: ಡಿಕೆ ಶಿವುಕುಮಾರ್

ಕಲಬುರಗಿ: ಅಮೇರಿಕಾದ ಪ್ರವಾಸದಲ್ಲಿ ತಾವು ಯಾರನ್ನೂ ಭೇಟಿಯಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು. ಸಚಿವ ಸಂಪುಟದ ಸಭೆಯಲ್ಲಿ ಪಾಲ್ಗೊಳ್ಳಲು…

5 hours ago

ನಾಗಮಂಗಲ ಘಟನೆ: ತನಿಖೆ ನಂತರ ಇನ್ನಷ್ಟು ಕ್ರಮ: ಗೃಹ ಸಚಿವ ಪರಮೇಶ್ವರ

ಕಲಬುರಗಿ: ನಾಗಮಂಗಲದ ಅಹಿತರ ಘಟನೆ ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದ್ದು, ತನಿಖಾ ವರದಿ ನಂತರ ಮುಂದಿನ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು…

5 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420