ಬಿಸಿ ಬಿಸಿ ಸುದ್ದಿ

ಸಾಹಿತ್ಯವು ಸಂಬಂಧಗಳ ಕೊಂಡಿಯಾಗಿದೆ; ಪ್ರೊ.ಎಚ್.ಎಂ ಮಹೇಶ್ವರಯ್ಯ

ಕಲಬುರಗಿ; ಸಾಹಿತ್ಯವನ್ನು ನಾಲ್ಕು ತರಹದ ಸಂಬಂಧಗಳಲ್ಲಿ ಗುರುತಿಸಲಾಗಿದ್ದು, ಆ ಸಂಬಂಧಗಳೇ ಸಾಹಿತ್ಯದ ಕೊಂಡಿಗಳಾಗಿವೆ ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಎಚ್.ಎಂ. ಮಹೇಶ್ವರಯ್ಯರವರು ಹೇಳಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣ ಸಭಾಭವನದಲ್ಲಿ ಕಲಬುರಗಿ ಮತ್ತು ದಾವಣಗೆರೆಯ ಅಭಿವ್ಯಕ್ತಿ ಪ್ರಕಾಶನ ವತಿಯಿಂದ ಆಯೋಜಿಸಿದ್ದ ‘ಯಡ್ರಾಮಿ ಸೀಮೆ ಕಥನಗಳು’ ಎಂಬ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

ಬರಹಗಾರನ ಅಂತರಂಗದ ಸಂಬಂಧ,ಇತರರೊಡನೆ, ಪ್ರಕೃತಿಯೊಡನೆ ಮತ್ತು ಅರಿವಿಲ್ಲದ ಸಂಬಂಧಗಳೊಡನೆ ಹೀಗೆ ನಾಲ್ಕು ಪ್ರಕಾರದಲ್ಲಿ ಸಾಹಿತ್ಯ ಒಳಗೊಂಡಿದ್ದು, ಚಿಂತನಾತ್ಮಕ ಬರಹಗಳ ಮೂಲಕ ಪರಸ್ಪರ ಸಂಬಂಧಗಳನ್ನು ಜೋಡಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ನಾಲ್ಕು ಅಂಶಗಳಿಂದ ಒಳಗೊಂಡ ‘ಯಡ್ರಾಮಿ ಸೀಮೆ ಕಥನಗಳು’ ಎಂಬ ಕೃತಿಯು ಓದುಗರನ್ನು ಸೆಳೆಯುತ್ತದೆ. ಕೃತಿಯಲ್ಲಿರುವ ಉರ್ದು ಮಿಶ್ರಿತ ಕನ್ನಡ ಭಾಷೆಯು ಪ್ರಾದೇಶಿಕ ಜೀವನ ಚಿತ್ರಣವನ್ನು ಎತ್ತಿಹಿಡಿಯುತ್ತದೆ.

ಚಿಂತನಧಾರೆ, ಪ್ರಯೋಗಶೀಲತೆಯಿಂದ ಬರೆದಿರುವ ಲೇಖಕ ಮಲ್ಲಿಕಾರ್ಜುನ್ ಕಡಕೊಳ ರವರು ಜವಾರಿ ಭಾಷೆಯ ಬರವಣಿಗೆ ಮೆಚ್ಚುಗೆಯಾಗಿದ್ದು, ಇವರು ನಮ್ಮ ಭಾಗದವರು ಎಂದು ಹೇಳಿಕೊಳ್ಳಲು ಖುಷಿಯಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಾಂಸ್ಕೃತಿಕ ಚಿಂತಕ ಪ್ರೊ. ಆರ್.ಕೆ. ಹುಡಗಿ ಮಾತನಾಡಿ, ಯಡ್ರಾಮಿ ಸೀಮೆಯನ್ನು ವಿಸ್ತರಿಸಿ ನಾಡ ಮಟ್ಟಿಗೆ ಮುಟ್ಟಿಸಿದ ಕೀರ್ತಿ ಕಡಕೋಳ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಕಥನದಂತಹ ಪ್ರಬಂದಗಳು, ಪ್ರಬಂಧದಂತಹ ಕಥನಗಳು ಶಬ್ದ ಕಥನಗಳಂತಿವೆ. ಹೀಗಾಗಿ ಕಡಕೋಳ ಅವರು ಮಿನಿಯೇಚರ್ ಆರ್ಟಿಸ್ಟ್ ಎಂದು ಅವರು ಅಭಿಪ್ರಾಯಪಟ್ಟರು.

ಕಥೆಗಾರ್ತಿ ಸಂಧ್ಯಾ ಹೊನಗುಂಟಿಕರ್ ಕೃತಿ ಪರಿಚಯಿಸಿದರು. ಸಂಘಟಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ನಿರೂಪಿಸಿದರು. ಪತ್ರಕರ್ತ ಶಿವರಂಜನ್ ಸತ್ಯಂಪೇಟೆ ಸ್ಬಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಿವಾನಂದ ಅಣಜಗಿ ವಂದಿಸಿದರು.

ಇದೆ ಸಂದರ್ಭದಲ್ಲಿ ಸುರೇಶ್ ಬಡಿಗೇರ, ಸ್ವಾಮಿರಾವ್ ಕುಲಕರ್ಣಿ, ಪ್ರಭಾಕರ್ ಜೋಶಿ, ಮಹಾಂತೇಶ್ ನವಲ್ ಕಲ್ ಡಾ. ಈಶ್ವರಯ್ಯ ಮಠ, ಸುನಿಲ್ ಹುಡಗಿ, ಚಂದ್ರಕಾಂತ, ಕರದಳ್ಳಿ, ಶಾಂತಾ ಭೀಮಸೇನರಾವ, ಪ್ರಭು ಖಾನಾಪುರೆ, ಅನಂತ ನಾಯಕ, ಶಂಕ್ರಯ್ಯ ಘಂಟಿ, ವೀರಭದ್ರ ಸಿಂಪಿ, ಡಾ. ಕಾಶಿನಾಥ ಅಂಬಲಗಿ, ದಿನೇಶ ದೊಡ್ಡಮನಿ, ವೆಂಕಟೇಶ ಜನಾದ್ರಿ, ಸುನಿಲ್ ಮಾನ್ಪಡೆ, ಬಸಣ್ಣ ಸಿಂಗೆ, ಸನತಕುಮಾರ ಬೆಳಗಲಿ ಶಿಲ್ಪಾ ಜೋಶಿ ಸೇರಿದಂತೆ ಹಲವಾರು ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

4 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

4 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

4 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

21 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

23 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago