ಕಲಬುರಗಿ: ಪ್ರಜ್ಞಾ ದಿ ಇನ್ಸ್‌ಟ್ಯೂಟ್ ಆಫ್ ಲರ್ನಿಂಗ್ ಕಲಬುರ್ಗಿ, ಚಾಮ್ಸ್ ಮೈಂಡ್ ಪಾವರ್ ಸಲುಷನ್ ಕಲಬುರ್ಗಿ ಇವರ ಸಹಯೋಗದಲ್ಲಿ ಕೌನ ಬನೆಗಾ ಜ್ಞಾನಪತಿ ಎನ್ನುವ ವಿನೂತನ ವಿಶಿಷ್ಠ ರಸಪ್ರಶ್ನೆ ಕಾರ್ಯಕ್ರಮವು ಇದೇ ಡಿಸೆಂಬರ್ 8 ರಂದು, ಬೆಳೆಗ್ಗೆ 10 ಕ್ಕೆ ಸಂಗೀತ ಕಲಾ ಮಂಡಳದ ಸಭಾಭವನದಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಹಿನ್ನಲೆ: ಒಟ್ಟಾರೆ ಕರ್ನಾಟಕದ ಪ್ರತಿ ವರ್ಷದ ಫಲಿತಾಂಶ ಗಮನಿಸಿದಾಗ ಕಲ್ಯಾಣ ಕರ್ನಾಟಕದ ಫಲಿತಾಂಶ ಕಡಿಮೆಯಿದೆ. ಸಾರ್ವಜನಿಕ ವಲಯದಲ್ಲಿ ಗುಣಮಟ್ಟದ ಶಿಕ್ಷಣದ ಬಗೆಗಿನ ಜಿಜ್ಞಾಸೆಯಿದೆ. ಖಾಸಗೀಕರಣದಂತಹ ಒಟ್ಟು ಬಲವರ್ಧನೆಯಲ್ಲಿ ಶಾಲೆಗಳು ಇದೀಗ ಸಬಲೀಕರಣವಾಗುವತ್ತ ಮುಂದಾಗುತ್ತಿವೆ. ಸಾರ್ವಜನಿಕರು, ಶಿಕ್ಷಣ ಪ್ರೇಮಿಗಳು ಧನಾತ್ಮಕ ಮನಸ್ಸು ಮಾಡಿದರೆ ಫಲಿತಾಂಶ ಸುಧಾರಣೆಯಲ್ಲಿ ಕೈಜೋಡಿಸಬೇಕಾದ ಅತ್ಯಂತ ಅಗತ್ಯವಿದೆ. ಹೀಗಾಗಿ ಈ ಸ್ಪರ್ಧಾತ್ಮಕ ಯುಗಕ್ಕೆ ನಮ್ಮ ಮಕ್ಕಳನ್ನು ಬೆಳೆಸುವ ನಿಟ್ಟಿನಲ್ಲಿ ಈ ಕೌನ ಬನೆಗಾ ಜ್ಞಾನಪತಿ ಸ್ಪರ್ಧೆ ಹಮ್ಮಿಕೊಳ್ಳಲಾಗುತ್ತಿದೆ.
ಕಾರ್ಯಕ್ರಮದ ವಿವರ: ಕಲ್ಯಾಣ ಕರ್ನಾಟಕದ ಹತ್ತನೇಯ ತರಗತಿಯ ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ, ಈ ಭಾಗದ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು, ಸಭಾ ಕಂಪನ ಹೋಗಲಾಡಿಸುವುದು, ಆತ್ಮಸ್ಥೈರ್ಯ ತುಂಬುವುದು, ಪರೀಕ್ಷೆಯ ಬಗ್ಗೆ ಧೈರ್ಯ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಿರೀಕ್ಷೆಗಳು: ಈ ಕಾರ್ಯಕ್ರಮದ ಮೂಲಕ ಹತ್ತನೇಯ ತರಗತಿಯ ಫಲಿತಾಂಶದಲ್ಲಿ ಹೆಚ್ಚಳಕ್ಕೆ ಪ್ರಯತ್ನಿಸಲಾಗುವುದು. ಮಕ್ಕಳಲ್ಲಿ ಓದುವ ಚಿಂತನೆಗೆ ಅವಕಾಶ ಮಾಡಿಕೊಡುವುದು. ಮಕ್ಕಳು ಧೈರ್ಯವಾಗಿ ಪರೀಕ್ಷೆ ಎದುರಿಸಲು ಆತ್ಮಸ್ಥೈರ್ಯ ಹೆಚ್ಚಿಸುವುದು. ಹತ್ತನೇಯ ತರಗತಿಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಲ್ಲಿ ಪರೀಕ್ಷೆಗೆ ಪಾಸಾಗಲು ಬೇಕಾದ ಕನಿಷ್ಠ ಅಂಕಗಳತ್ತ ಹೆಜ್ಜೆಯಿಡಲು ಪ್ರೋತ್ಸಾಹಿಸುವುದು. ಪರೀಕ್ಷಾ ಟಿಪ್ಸ್, ಮೌಲ್ಯಮಾಪನ, ಪರೀಕ್ಷಾ ಬ್ಲೂಪ್ರಿಂಟ್ ಅವಶ್ಯಕವಾದ ಅಧ್ಯಾಯಗಳು ಇತ್ಯಾದಿ ಮಾಹಿತಿಗಳತ್ತ ಹೆಚ್ಚಿನ ಆದ್ಯತೆ ನೀಡಲಾಗುವುದು.
ಭಾಗವಹಿಸಲು ಅರ್ಹತೆಗಳು: ರಾಜ್ಯದ ಯಾವುದೇ ಜಿಲ್ಲೆಯಿಂದ ೧೦ನೇ ತರಗತಿಯಲ್ಲಿ ಪ್ರಸ್ತುತ ಓದುತ್ತಿರುವ ವಿಧ್ಯಾರ್ಥಿಗಳಿಗೆ ಮಾತ್ರ ಅವಕಾಶವಿರುತ್ತದೆ. ಸರಕಾರಿ, ಅನುದಾನಿತ, ಅನುದಾದ ರಹಿತ, ಖಾಸಗಿ ಕನ್ನಡ ಮಾಧ್ಯಮದ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಬಹುದು. ಕಾರ್ಯಕ್ರಮವು ನೊಂದಣಿ ಮಾಡಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಂತ ಹಂತವಾಗಿ ಅವಕಾಶ ಮಾಡಿಕೊಡಲಾಗುವುದು. ಮೊದಲು ನೊಂದಣಿ ಮಾಡಿದ ವಿಧ್ಯಾಥಿಗಳಿಗೆ ಮೊದಲ ಅವಕಾಶವಿರುತ್ತದೆ. ಪ್ರತಿ ತಂಡದಲ್ಲಿ ಇಬ್ಬರು ವಿಧ್ಯಾರ್ಥಿಗಳಿಗೆ ಅವಕಾಶವಿರುತ್ತದೆ. ಪ್ರತಿ ಶಾಲೆಯಿಂದ ಒಂದಕ್ಕಿಂತ ಹೆಚ್ಚು ತಂಡಗಳು ಭಾಗವಹಿಸಬಹುದು. ಕಾರ್ಯಕ್ರಮವು ಕನ್ನಡ, ಇಂಗ್ಲೀಷ, ಗಣಿತ, ವಿಜ್ಞಾನ, ಸಾಮಾನ್ಯ ಜ್ಞಾನ, ಹಾಡು,ಸಿನಿಮಾದ ಪ್ರಶ್ನೆಗಳಿರುತ್ತವೆ ಹಾಗೂ ಪಠ್ಯ ವಿಷಯಗಳಿಗೆ ಹೆಚ್ಚು ಆದ್ಯತೆ ನೀಡಲಾಗುವುದು. ವಿಧ್ಯಾರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಭಾಗವಹಿಸಬೇಕು. ಪ್ರಥಮ, ದ್ವಿತಿಯ ಮತ್ತು ತೃತಿಯ ಬಹುಮಾನಗಳನ್ನು ಆಯ್ಕೆ ಮಾಡಿ ಹಣದ ರೂಪದ ಹಾಗೂ ಪುಸ್ತಕ ರೂಪದಲ್ಲಿ ಬಹುಮಾನ ಕೊಡಲಾಗುವುದು. ನಿರ್ಣಾಯಕರ ನಿರ್ಣಯವೇ ಅಂತಿಮವಾಗಿರುತ್ತದೆ.
ಈ ಮೇಲಿನ ಷರತ್ತುಗಳಿಗೆ ಅನ್ವಯಿಸಿ ಕಾರ್ಯಕ್ರಮ ಆಯೋಜಿಸಲಾಗುವದು ಆಸಕ್ತಿಯುಳ್ಳ ಪಾಲಕರು ವಿಧ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಆಯೋಜಕರು ಹಾಗೂ ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿಗಳಾದ ಇತ್ತೀಚಗೆ ತಮ್ಮ ಶೈಕ್ಷಣಿಕ ಲೇಖನದ ಮೂಲಕ ರಾಜ್ಯದ ಶಿಕ್ಷಣ ಸಚಿವ ಸುರೇಶಕುಮಾರ ಅವರ ಪ್ರಶಂಸೆಗೆ ಪಾತ್ರರಾಗಿರುವ ಕೆ.ಎಂ.ವಿಶ್ವನಾಥ ಮರತೂರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನೊಂದಣಿ ಮತ್ತು ಮಾಹಿತಿಗಾಗಿ ಸಂಪರ್ಕಿಸಿ 9686714046.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…