ಕಲಬುರಗಿ/ಜೇವರ್ಗಿ: ದಲಿತರಿಗೆ ಮನೆಹೊಕ್ಕು ಹೊಡೆಯುತ್ತೇವೆ ಎಂದು ಭಾಷಣ ಮಾಡಿದ ಕುರಳಗೇರ ತಾಲೂಕ ಪಂಚಾಯತ ಸದಸ್ಶ ಮಲ್ಲಣಗೌಡ ಪಾಟೀಲ್ ಅವರ ಮೇಲೆ ದಲಿತ ದೌರ್ಜನ್ಶ ಕೇಸ್ ದಾಖಲಿಸಬೇಕೆಂದು ಆಗ್ರಹಿಸಿ ದಲಿತ ಸಮನ್ವಯ ಸಮಿತಿ ವತಿಯಿಂದ ನಾಳೆ ಡಿ.3ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸಭೆ ಸೇರಿದ ದಲಿತ ಸಮನ್ವಯ ಸಮಿತಿ ಮುಖಂಡರುˌ ತಾಪಂ ಸದಸ್ಶ ಮಲ್ಲಣಗೌಡ ಪಾಟೀಲ್ ಕುರಳಗೇರ ಅವರ ಮೇಲೆ ದಲಿತ ದೌರ್ಜನ್ಶ ಕೇಸ್ ದಾಖಲಿಸಬೇಕು. ಅವರನ್ನು ಕೂಡಲೇ ಬಂಧಿಸಬೇಕು. ತಾಪಂ ಸದಸ್ಶ ಮಲ್ಲಣಗೌಡ ಅವರಿಂದ ಭಯಭೀತರಾದ ಕುರಳಗೇರ ಗ್ರಾಮದ ದಲಿತರಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ದಲಿತ ಬಂಧುಗಳುˌ ಹಿತೈಸಿಗಳು ಭಾಗವಹಿಸುವಂತೆ ಜಿಲ್ಲಾ ಪಂಚಾಯತ ಮಾಜಿ ಸದಸ್ಶ ಚಂದ್ರಶೇಖರ ಹರನಾಳˌ ಶ್ರೀಮಂತ ಧನಕರ್ˌ ದವಲಪ್ಪ ಮದನˌ ಶ್ರೀಹರಿ ಕರಕಿಹಳ್ಳಿˌ ಮಲ್ಲಣ್ಣ ಕೊಡಚಿ ಸೇರಿದಂತೆ ಅನೇಕರು ಮನವಿ ಮಾಡಿದ್ದಾರೆ.
ಹಿನ್ನೆಲೆ: ದಲಿತರ ಮನೆ ಹೊಕ್ಕು ಹೊಡೆಯುತ್ತೇವೆ. ಬಸವಣ್ಣನವರ ಕಾಲಕ್ಕೆ ಹೇಗೆ ಕಲ್ಶಾಣ ಕ್ರಾಂತಿ ಮಾಡಿ ಮನೆಯಲ್ಲಿದ್ದವರಿಗೆ ಎಬ್ಬಿಸಿಕೊಂಡು ಬಂದು ಹೊಡೆದ್ರೋˌ ಹಾಗೆಯೇ ತಾಲೂಕಿನಲ್ಲಿರುವ ಪ್ರತಿಯೊಂದು ಹಳ್ಳಿಗಳ ದಲಿತರಿಗೆ ಮನೆ ಹೊಕ್ಕು ಹೊಡಿತೀವಿ ಎಂದು ಕುರಳಗೇರ ತಾಲೂಕ ಪಂಚಾಯತ ಕಾಂಗ್ರೆಸ್ ಸದಸ್ಶ ಹಾಗೂ ಶಾಸಕ ಡಾ.ಅಜಯಸಿಂಗ್ ಅವರ ಆಪ್ತ ಮಲ್ಲನಗೌಡ ಪಾಟೀಲ್ ಅವರು ಭಾಷಣ ಮಾಡಿದ್ದರು. ಈ ರೀತಿಯ ಪ್ರಚೋದನಾತ್ಮಕ ಹೇಳಿಕೆಯನ್ನು ನೀಡಿದ್ದು ದಲಿತರ ಆಕ್ರೋಶಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…