ಬಿಸಿ ಬಿಸಿ ಸುದ್ದಿ

ಕ್ಯಾಂಡೆಲ್ ರ‍್ಯಾಲಿ: ಪ್ರಿಯಾಂಕಾ ಅತ್ಯಾಚಾರ-ಕೊಲೆ ಘಟನೆಗೆ ಆಕ್ರೋಶ

ವಾಡಿ: ಡಾ.ಪ್ರಿಯಾಂಕಾ ರೆಡ್ಡಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಘಟನೆಯನ್ನು ಖಂಡಿಸಿ ಎಐಎಂಎಸ್‌ಎಸ್, ಎಐಡಿವೈಒ ಹಾಗೂ ಎಐಡಿಎಸ್‌ಒ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಸಂಜೆ ಪಟ್ಟಣದಲ್ಲಿ ಕ್ಯಾಂಡೆಲ್ ರ‍್ಯಾಲಿ ನಡೆಯಿತು.

ಕ್ಯಾಂಡೆಲ್ ಹಾಗೂ ಪ್ರಿಯಾಂಕಾ ರೆಡ್ಡಿ ಭಾವಚಿತ್ರಗಳನ್ನು ಹಿಡಿದು ಅಂಬೇಡ್ಕರ್ ವೃತ್ತದಿಂದ ಮೌಲಾನಾ ಆಜಾದ್ ವೃತ್ತದ ವರೆಗೆ ನೂರಾರು ಜನ ಕಾರ್ಯಕರ್ತರು ಮೆರವಣಿಗೆ ನಡೆಸುವ ಮೂಲಕ ಅಶ್ಲೀಲ ಸಿನೆಮಾ ಸಾಹಿತ್ಯದ ವಿರುದ್ಧ ಘೋಷಣೆ ಕೂಗಿದರು. ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ದೇಹವನ್ನು ಸುಟ್ಟು ಹಾಕಿದ ಕಾಮ ಪಿಶಾಚಿಗಳ ದುಷ್ಕೃತ್ಯದ ವಿರುದ್ಧ ಪ್ರತಿಭಟನಾಕಾರರು ತ್ರೀವ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಕೆ.ಗೌರಮ್ಮ, ಕಾಮುಕರ ಅಟ್ಟಹಾಸಕ್ಕೆ ದೇಶದಲ್ಲಿ ನಿತ್ಯವೂ ಮಹಿಳೆಯರು ಮತ್ತು ಯುವತಿಯರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಕುಸಂಸ್ಕೃತಿಯ ವಿಷಗಾಳಿ ವ್ಯವಸ್ಥೆಯನ್ನು ಆವರಿಸಿಕೊಂಡಿದೆ. ಒಂದು ಹೆಣ್ಣು ತನ್ನ ತಂಗಿ ಮತ್ತು ತಾಯಿಯಾಗಬಲ್ಲಳು ಎಂಬುದನ್ನು ಲೆಕ್ಕಿಸದೆ ಕಾಮುಕರು ರಣಹದ್ದುಗಳಂತೆ ಹರಿದು ತಿನ್ನುತ್ತಾರೆ ಎಂದರೆ ಅಶ್ಲೀಲತೆ ಎಷ್ಟು ದೊಡ್ಡ ಮಟ್ಟದಲ್ಲಿ ಯುವಜನರನ್ನು ಅಪ್ಪಿಕೊಂಡಿದೆ ಎಂಬುದನ್ನ ತಿಳಿಸುತ್ತದೆ.

ವಿಕೃತಕಾಮುಕರನ್ನು ಸೃಷ್ಠಿಸುತ್ತಿರುವ ಈ ವ್ಯವಸ್ಥೆಯನ್ನು ಸಂಘಟಿತ ಹೋರಾಟಗಳಿಂದ ಬದಲಿಸಬೇಕಿದೆ. ಕ್ಷುಲ್ಲಕ ಪ್ರಕರಣಗಳನ್ನು ದೊಡ್ಡದಾಗಿ ಬಿತ್ತರಿಸುವ ದೇಶದ ಮಾಧ್ಯಮಗಳು, ಪ್ರಿಯಾಂಕಾಳ ಅತ್ಯಾಚಾರ ಮತ್ತು ಘೋರ ಸಾವಿನ ಘಟನೆಯನ್ನು ಮರೆಮಾಚಿವೆ. ಮಾನವೀಯ ಮೌಲ್ಯಗಳನ್ನು ಸಾಯಿಸಿ ಕ್ರೌರ್ಯ ಮೆರೆಯುತ್ತಿರುವ ಈ ಸಮಾಜದಲ್ಲಿ ಹೆಣ್ಣಿಗೆ ರಕ್ಷಣೆಯಿಲ್ಲ. ಇಂಥ ಘಟನೆಗಳು ನಡೆದಾಗ ಜನತೆ ಜಾತಿ ಧರ್ಮವನ್ನು ಲೆಕ್ಕಿಸದೆ ಮೌನ ಮುರಿಯದಿದ್ದರೆ, ನಿರ್ಭಯ, ಸೌಜನ್ಯ, ದಾನಮ್ಮ, ಆಶೀಫಾ, ಪ್ರಿಯಾಂಕಾ ಹೀಗೆ ಅತ್ಯಾಚಾರಕ್ಕೊಳಗಾದ ಹೆಣ್ಣಿನ ಪಟ್ಟಿ ಬೆಳೆದು ನಮ್ಮ ಮನೆಬಾಗಿಲಿಗೂ ಬರುವುದರಲ್ಲಿ ಸಂಶಯವಿಲ್ಲ ಎಂದು ಎಚ್ಚರಿಸಿದರು.

ಎಐಡಿಎಸ್‌ಒ ಅಧ್ಯಕ್ಷ ಗೌತಮ ಪರತೂರಕರ ಮಾತನಾಡಿ, ದೇಶದ ಯಾವೂದೇ ಮೂಲೆಯಲ್ಲಿ ಅತ್ಯಾಚಾರದಂತಹ ಅಮಾನವೀಯ ಘಟನೆಗಳು ನಡೆದಾಗ ನಮ್ಮದೇ ಮನೆಯ ಹೆಣ್ಣಿನ ಮೇಲೆ ನಡೆದ ಕೃತ್ಯವೆಂದು ಪರಿಗಣಿಸಿ ಜನರು ಸಿಡಿದೇಳಬೇಕು. ಆಳುವ ಸರಕಾರಗಳು ಜನರ ಹೆಣಗಳ ಮೇಲೆ ರಾಜ್ಯಭಾರ ಮಾಡುತ್ತಿವೆ. ಮಹಿಳೆ ಮೇಲಿನ ಅತ್ಯಾಚಾರ, ಕೊಲೆ, ದೌರ್ಜನ್ಯ ಆರೋಪಿಗಳ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸಬೇಕಾದ ಕೇಂದ್ರ ಸರಕಾರ ಜನಪರ ಹೋರಾಟಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಪ್ರಿಯಾಂಕಾಳ ಸಾವಿನ ಕುರಿತು ಪ್ರಧಾನಿಗಳು ತುಟಿ ಬಿಚ್ಚಿಲ್ಲ. ಇತ್ತ ರಾಜ್ಯ ಸರಕಾರವೂ ಮಾತನಾಡುತ್ತಿಲ್ಲ ಎಂದು ದೂರಿದರು. ಪ್ರಿಯಾಂಕಾ ರೆಡ್ಡಿ ಸಾವಿಗೆ ಕಾರಣರಾದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಎಐಡಿವೈಒ ಅಧ್ಯಕ್ಷ ರಾಘವೇಂದ್ರ ಅಲ್ಲಿಪುರ, ಎಐಎಂಎಸ್‌ಎಸ್ ಮಹಿಳಾ ಸಂಘಟನೆ ಅಧ್ಯಕ್ಷೆ ಜಯಶ್ರೀ ಲಾಡ್ಲಾಪುರ, ಮುಖಂಡರಾದ ಮಹೆಬೂಬ ಖಾನ್ ರಾವೂರ, ವೆಂಕಟೇಶ ದೇವದುರ್ಗ ಮಾತನಾಡಿ ಪ್ರಿಯಾಂಕಾ ಅತ್ಯಾಚಾರ ಘಟನೆಯನ್ನು ಖಂಡಿಸಿದರು. ಶರಣು ಹೇರೂರ, ಶಿವುಕುಮಾರ ಆಂಧೋಲಾ, ಮಲ್ಲಿನಾಥ ಹುಂಡೇಕಲ, ಕೋಕಿಲಾ ಹೇರೂರ, ಯೇಶಪ್ಪ ಜಿ.ಕೆ, ವಿಠ್ಠಲ ರಾಠೋಡ, ಗೋವಿಂದ ಹೆಳವರ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

4 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

4 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

4 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

20 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

23 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago