ಕಲಬುರಗಿ/ಶಹಾಬಾದ: ಪಟ್ಟಣದಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಸೇರಿದಂತೆ ಮುಂತಾದ ಮಹಿಳಾ ಸಂಘಟನೆಗಳು ನೆಹರು ಚೌಕ್ ಹತ್ತಿರ ಡಾ. ಪ್ರಿಯಾಂಕ ರೆಡ್ಡಿ ಸೇರಿದಂತೆ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಇಂದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಉದ್ದೆಶಿಸಿ AIMSS ಮಹಿಳ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಗುಂಡಮ್ಮ ಮಡಿವಾಳ ರವರು ಮಾತನಾಡುತ್ತ ಈ ಘಟನೆಯು ಇಡಿ ನಾಗರಿಕ ಸಮಾಜವೆ ತಲೆ ತಗ್ಗಿಸು ವಿಷಯವಾಗಿದೆ. ನಮ್ಮ ದೇಶ ಉನ್ನತ ಸಾಂಸ್ಕೃತಿಕ ನಾಡು ಸ್ತ್ರೀ ಯರಿಗೆ ಪೂಜ್ಯನೀಯ ಸ್ಥಾನಮಾನ ನೀಡಿದೆ ಎಂದು ಹೇಳುತ್ತಾರೆ. ಆದರೆ ಸರ್ಕಾರಗಳು ಈ ದೇಶದಲ್ಲಿ ಸ್ತ್ರೀಯರಿಗೆ ಸೂಕ್ತ ಭದ್ರತೆ ಇಲ್ಲಾ 6 ತಿಂಗಳ ಹಸು ಮಗುವನಿಂದ ಹಿಡಿದು ವಯಸ್ಸಾದ ಮಹಿಳೆಯರ ಮೇಲೆ ಅತ್ಯಾಚಾರ ನಡಿತಾಯಿದೆ. ಅಶ್ಲೀಲ ಸಿನಿಮಾ ಸಾಹಿತ್ಯ, ಮಾದಕ ವಸ್ತುಗಳನ್ನು ಹರಿಬಿಟ್ಟು ಯುವಜನರನ್ನ ದಾರಿ ತಪ್ಪಿಸುತ್ತ ಮಹಿಳಯನ್ನು ಬೊಗದ ವಸ್ತುವನ್ನಾಗಿ ರೂಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ವಿಕೃತಿಯನ್ನು AIMSS, AIDSO, AIDYO ಸಂಘಟನೆಗಳು ತಿವ್ರಾವಾಗಿ ಖಂಡಿಸಿ. ಡಾ. ಪ್ರಿಯಾಂಕ ರೆಡ್ಡಿ ಹಾಗೂ ಇತರೆ ಅತ್ಯಾಚಾರ ಹಾಗೂ ಕೊಲೆಯನ್ನು ಮಾಡಿರು ಅಪಾರಾದಿಗಳನ್ನು ಈ ಕೂಡಲೆ ಕಠಿಣ ಶಿಕ್ಷೆ ವಿದಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ನಂತರ ಉದ್ದೆಶಿಸಿ AIMSS ಶಹಾಬಾದ ಉಪಾಧ್ಯಕ್ಷರಾದ ಕೀರ್ತಿ ಎಸ್.ಎಮ್. ,AIDSO ಶಹಾಬಾದ ಉಪಾಧ್ಯಕ್ಷರಾದ ರಮೇಶ ದೇವಕರ್, ರಾಜೆಂದ್ರ ಅತೂನುರ ಮಾತನಾಡಿದರು. ಶಹಾಬಾದ AIDSO ಅಧ್ಯಕ್ಷರಾದ ತುಳಜರಾಮ ಎನ್.ಕೆ. ನಿರುಪಿಸಿದರು.
ಈ ಪ್ರತಿಭಟನೆಯಲ್ಲಿ AIDYO ಜಿಲ್ಲಾ ಕಾರ್ಯದರ್ಶಿ ಜಗನ್ನಾಥ ಎಸ್. ಹೆಚ್ AIDYO ಶಹಾಬಾದ ಉಪಾಧ್ಯಕ್ಷರಾದ ತಿಮ್ಮಾಯ್ಯ ಮಾನೆ, AIDSO ಶಹಾಬಾದ ಕಾರ್ಯದರ್ಶಿ ರಘು ಜಿ ಮಾನೆ, ಮಾಹದೇವಿ ಅತೂನುರು, ಶಿಲ್ಪಾ.ಎನ್.ಹುಲಿ, ರಾಧಿಕ ಚೌದರಿ ಸೇರಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…