ಬಿಸಿ ಬಿಸಿ ಸುದ್ದಿ

ಪುಸ್ತಕ ಓದು ಸಂವಾದ: ಸಾಹಿತ್ಯ ಓದುಗರ ಸಂಖ್ಯೆ ಕುಸಿತ: ಕತ್ನಳ್ಳಿ ಆತಂಕ

ವಾಡಿ: ಎಲ್ಲರಿಗೂ ಇಂಗ್ಲೀಷ್ ವ್ಯಾಮೋಹ ಹುಚ್ಚು ಹಿಡಿದಿದೆ. ಟಿವಿ ಮೋಬಾಯಿಲ್‌ಗಳ ಹಾವಳಿಯ ಮಧ್ಯೆ ಕನ್ನಡ ಸಾಹಿತ್ಯ-ಭಾಷೆ ಉಳಿಯುವುದೇ ಎಂಬ ಆತಂಕ ಎದುರಾಗಿದೆ. ಸಾಹಿತ್ಯ ಓದುಗರ ಸಂಖ್ಯೆ ದಿನದಿನಕ್ಕೂ ಕ್ಷಿಣಿಸುತ್ತಿದೆ ಎಂದು ಹಿರಿಯ ಸಾಹಿತಿ ಡಾ.ನೀಲಮ್ಮ ಕತ್ನಳ್ಳಿ ಕಳವಳ ವ್ಯಕ್ತಪಡಿಸಿದರು.

ಸಂಚಲನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಪಟ್ಟಣದ ವಿ.ಪಿ.ನಾಯಕ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಪುಸ್ತಕ-ಓದು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾಹಿತ್ಯಾಸಕ್ತರಿಗೆ ಅಭಿರುಚಿಗಳು ಬೇರೆ ಬೇರೆ ಇರಬಹುದು. ಓದುವ ಹವ್ಯಾಸ ಜೀವಂತವಾಗಿಟ್ಟರೆ ಮುಂದೊಂದು ದಿನ ಉತ್ತಮ ಸಾಹಿತ್ಯ ಹುಡುಕುವ ಹಂಬಲ ಹೆಚ್ಚಾಗುತ್ತದೆ. ಕಥೆ, ಕಾವ್ಯ, ಕಾದಂಬರಿಗಳನ್ನು ಓದುವ ಜತೆಗೆ ಚರ್ಚೆ ಮಾಡುವ ಚಟ ಬೆಳೆಸಿಕೊಳ್ಳಬೇಕು. ಉತ್ತಮ ವೈಚಾರಿಕ ಸಾಹಿತ್ಯ ಬರೆದುಕೊಟ್ಟ ಸಾಹಿತಿಗಳ ಬದುಕು ಬರಹದ ಕುರಿತು ಸಂವಾದಗಳು ನಡೆಯಬೇಕು. ಆದರೆ ಇಂದು ಸಾಹಿತ್ಯ ಚಟುವಟಿಕೆ ಸಂಘಟಿಸುವ ಸಂಘಗಳು ಬೆರಳೆಣಿಕೆಯಷ್ಟಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಅತ್ಯಂತ ಶ್ರೀಮಂತವಾಗಿದೆ. ಆದೂನಿಕ ವಚನಕಾರ ಸಿದ್ಧಯ್ಯ ಪುರಾಣಿಕರ ವಚನೋದ್ಯಾನ, ಡಿವಿಜಿಯವರ ಮಂಕುತಿಮ್ಮನ ಕಗ್ಗ, ಬಸವಾದಿ ಶರಣರ ವಚನ ಸಾಹಿತ್ಯ ಪುಸ್ತಕಗಳು ಓದಲೇಬೇಕು. ಪುಸ್ತಕಗಳೇ ನಮ್ಮ ಸಂಗಾತಿಗಳಾಗಬೇಕು. ಒಳ್ಳೆಯ ಪುಸ್ತಕಗಳು ಓದುತ್ತಾ ಹೋದಂತೆ ನಮಗರಿವಿಲ್ಲದಂತೆ ನಾವು ಬೆಳೆಯುತ್ತಾ ಹೋಗುತ್ತೇವೆ. ದಲಿತರು ಮತ್ತು ಮಹಿಳೆಯರ ಉದ್ಧಾರಕ್ಕಾಗಿ ಬಸವಣ್ಣನವರು ಸ್ವಜಾತಿಯ ಗೊಡ್ಡು ಆಚರಣೆಗಳ ವಿರುದ್ಧ ಹೋರಾಟಕ್ಕೆ ನಿಂತರು. ಒಂದು ಒಳ್ಳೆಯ ಪುಸ್ತಕ ಕಷ್ಟಕಾಲದಲ್ಲಿ ನಮ್ಮ ಸ್ನೇಹಿತನಾಗಿ ಜತೆಗೆ ನಿಲ್ಲುತ್ತದೆ. ನಮ್ಮ ಒಂಟಿತನವನ್ನು ದೂರ ಮಾಡುತ್ತದೆ. ನಮ್ಮನ್ನು ಮನುಷ್ಯರನ್ನಾಗಿ ರೂಪಿಸುತ್ತದೆ. ಆ ಕಾರಣಕ್ಕಾಗಿ ಪುಸ್ತಕ ಓದುವ ಹವ್ಯಾಸ ಜೀವಂತವಗಿಡಬೇಕು ಎಂದು ವಿವರಿಸಿದರು.

ಲೇಖಕ ಸೂರ್ಯಕಾಂತ ಸಸಾನೆ ಅವರ ಲೋಕ ಶಾಹೀರ್ ಕಾಮ್ರೇಡ್ ಅಣ್ಣಾಭಾವು ಸಾಠೆ ಕೃತಿ ಕುರಿತು ಉಪನ್ಯಾಸ ಮಂಡಿಸಿದ ಸಂಚಲನ ಸಾಹಿತ್ಯ ವೇದಿಕೆ ಉಪಾಧ್ಯಕ್ಷ ದೇವಿಂದ್ರ ಕರದಳ್ಳಿ, ಅಸ್ಪೃಶ್ಯತೆಯ ನೋವಿನೊಂದಿಗೆ ಕಷ್ಟದ ಬದುಕು ಸವೆಸಿದ ಮಹಾರಾಷ್ಟ್ರದ ಜನಪರ ಹೋರಾಟಗಾರ ಅಣ್ಣಾಭಾವು ಸಾಠೆ ಅವರ ಜೀವನ ಆದರ್ಶದಾಯಕವಾಗಿದೆ. ಶಾಲೆಯ ಶಿಕ್ಷಣದಿಂದ ವಂಚಿತರಾದ ಸಾಠೆಯವರು ನಿತ್ಯ ಶಾಲೆಗೆ ಹೋಗುವ ತಮ್ಮ ಸ್ನೇಹಿತನ ಮೂಲಕ ಶಿಕ್ಷಣ ಕಲಿಯುತ್ತಾರೆ.

ಇವರ ಆರು ಕಾದಂಬರಿಗಳಲ್ಲಿ ಫಕೀರಾ ಮತ್ತು ಸುಲ್ತಾನಾ ಎಂಬ ಎರಡು ಪ್ರಮುಖ ಕಾದಂಬರಿಗಳು ಚಲನಚಿತ್ರಗಳಾಗಿವೆ. ರಷ್ಯಾ ಪ್ರವಾಸ ಕಥನ ಹೆಚ್ಚು ಪರಿಣಾಮಕಾರಿಯಾಗಿದೆ. ಅಲ್ಲದೆ ಮಹಾರಾಷ್ಟ್ರದಲ್ಲಿ ನಡೆಯುತ್ತಿದ್ದ ಕಾರ್ಮಿಕ ಚಳುವಳಿಗಳ ಪ್ರಭಾವದಿಂದ ಮಾರ್ಕ್ಸ್‌ವಾದದ ಮತ್ತು ಅಂಬೇಡ್ಕರ್ ಚಿಂತನೆಗಳಿಗೆ ಆಕರ್ಷಿತರಾಗುತ್ತಾರೆ. ಜನರ ಮುಕ್ತಿಗಾಗಿ ಬದುಕು ಮೀಸಲಿಡುತ್ತಾರೆ. ಕಂಪನಿಗಳು ನಡೆಸುತ್ತಿದ್ದ ಕಾರ್ಮಿಕರ ದಬ್ಬಾಳಿಕೆಯ ವಿರುದ್ಧ ಅಣ್ಣಾಭಾವು ಸಾಠೆ ಸಿಡಿದೇಳುತ್ತಾರೆ. ಕೆಂಭಾವುಟ ಕಲಾಮಂಡಳಿ ಹುಟ್ಟುಹಾಕುವ ಮೂಲಕ ಸಾಂಸ್ಕೃತಿಕ ಚಳುವಳಿಗೆ ಚಾಲನೆ ನೀಡುತ್ತಾರೆ.

ಸಂಚಲನ ವೇದಿಕೆಯ ಪ್ರಧಾನ ಕಾರ್ಯದರ್ಶಿ ವೀರಣ್ಣ ಯಾರಿ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯ ಅಧ್ಯಕ್ಷ ಮಡಿವಾಳಪ್ಪ ಹೇರೂರ ಅಧ್ಯಕ್ಷತೆ ವಹಿಸಿದ್ದರು. ವಿ.ಪಿ.ನಾಯಕ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಸವರಾಜ ಕುಡಂಬಲ್, ಉಪನ್ಯಾಸಕರಾದ ಹೇಮಲತಾ ಶಾಸ್ತ್ರೀ, ವಿಜಯಕುಮಾರ ಪಟ್ಟಣಶೆಟ್ಟಿ, ಮುಖಂಡರಾದ ಟೋಪಣ್ಣ ಕೋಮಟೆ, ಕಾಶೀನಾಥ ಹಿಂದಿನಕೇರಿ, ಚಂದ್ರು ಕರಣಿಕ, ರವಿ ಕೋಳಕೂರ, ಖೇಮಲಿಂಗ ಬೆಳಮಗಿ, ಮಲ್ಲಿಕ್‌ಪಾಶಾ ಮೌಜನ್, ವಿಜಯಕುಮಾರ ಯಲಸತ್ತಿ, ಜಗನ್ನಾಥ ಹಂದರ್ಕಿ ಪಾಲ್ಗೊಂಡಿದ್ದರು. ಶ್ರವಣಕುಮಾರ ಮೌಸಲಗಿ ಸ್ವಾಗತಿಸಿದರು. ಸಿದ್ದಯ್ಯಶಾಸ್ತ್ರೀ ನಂದೂರಮಠ ನಿರೂಪಿಸಿದರು. ವಿಕ್ರಮ ನಿಂಬರ್ಗಾ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ಸಂವಾದ ನಡೆಯಿತು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

5 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

5 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

5 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

22 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

24 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago