ಸಕಲಬುರಗಿ: ಕುರಳಗೇರ ತಾಲೂಕ ಪಂಚಾಯತ ಸದಸ್ಶ ಮಲ್ಲಣಗೌಡ ಪಾಟೀಲ್ ಅವರ ಮೇಲೆ ದಲಿತ ದೌರ್ಜನ್ಶ ಪ್ರಕರಣದಡಿಯಲ್ಲಿ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಸಂಜೆ ಕೇಸ್ ದಾಖಲಿಸಲಾಗಿದೆ.
ಯಡ್ರಾಮಿ ಠಾಣೆಗೆ ಆಗಮಿಸಿದ ದಲಿತ ಮುಖಂಡರು ಮಲ್ಲನಗೌಡ ಪಾಟೀಲ್ ಮಾತನಾಡಿದ್ದಾರೆನ್ನಲಾದ ವಿಡಿಯೋ ತುಣುಕುಗಳನ್ನು ಪೊಲೀಸರಿಗೆ ನೀಡಿದರು. ಅಲ್ಲದೆ ಕೂಡಲೇ ಎಫ್.ಐ.ಆರ್ ದಾಖಲಿಸುವಂತೆ ಪಟ್ಟು ಹಿಡಿದರು.
ಠಾಣೆಗೆ ಭೇಟಿ ನೀಡಿದ ಸಿಪಿಐ ರೊಟ್ಟಿ ಅವರು ಕೂಡಲೇ ತಾಪಂ ಸದಸ್ಶ ಮಲ್ಲನಗೌಡ ಪಾಟೀಲ್ ಅವರ ಮೇಲೆ ಎಫ್.ಐ.ಆರ್ ದಾಖಲಿಸಲು ಠಾಣಾಧಿಕಾರಿಗಳಿಗೆ ಸೂಚಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಹಿನ್ನೆಲೆ: ತಾಪಂ ಕಾಂಗ್ರೆಸ್ ಸದಸ್ಶ ಮಲ್ಲನಗೌಡ ಪಾಟೀಲ್ ಅವರು ದಲಿತರ ಮನೆ ಹೊಕ್ಕು ಹೊಡೆಯುತ್ತೇನೆ. ದಲಿತರು ಒಲೆಗೆ ಬೆಂಕಿ ಹಾಕುವುದಕ್ಕು ನಾವು ಬಿಡುವುದಿಲ್ಲ ಎಂದು ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಶ ಚಂದ್ರಶೇಖರ ಹರನಾಳˌ ಮಲ್ಲಣ್ಣ ಕೊಡಚಿˌ ಭೀಮರಾಯ ನಗನೂರˌ ದವಲಪ್ಪ ಮದನˌ ಶ್ರೀಮಂತ ಧನಕರˌ ಶ್ರೀಹರಿ ಕರಕಿಹಳ್ಳಿˌ ರವಿ ಕುಳಗೇರಿˌ ಸಿದ್ದಪ್ಪ ಆಲೂರˌ ಸಿದ್ರಾಮ ಕಟ್ಟಿˌ ಸಂಗಣ್ಣ ಗುಡೂರˌ ದೇವೇಂದ್ರ ವರ್ಮಾˌ ಸಂಗು ಕಟ್ಟಿಸಂಗಾವಿˌ ಗುರಣ್ಣ ಐನಾಪುರˌ ಶ್ರೀಕುಮಾರ ಕಟ್ಟಿಮನಿˌ ರಾಜು ಹಾಲಗಡ್ಲಾˌ ಬಸವರಾಜ ಹೆಗಡೆˌ ಬಸವರಾಜ ಕೋಳಕೂರˌ ಮಹೇಶ ಕೋಕಿಲೆˌ ಮಹಾದೇವ ಕೋಳಕೂರˌ ಸಿದ್ದು ಶರ್ಮಾˌ ಭೀಮರಾಯ ಬಳಬಟ್ಟಿˌ ವಿಶ್ವರಾಧ್ಶ ಮಾಯಾˌ ಭಾಗಣ್ಣ ಸಿದ್ನಾಳˌ ಭಾಗಣ್ಣ ಕೋಳಕೂರ ಸೇರಿದಂತೆ ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…