ಬಿಸಿ ಬಿಸಿ ಸುದ್ದಿ

ಮೌಢ್ಯ ಮೀರಿದ ಬದುಕು ನಮ್ಮದಾಗಲಿ: ಪೂಜ್ಯ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿ

ಕಲಬುರಗಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದಂಗವಾಗಿ ಶುಕ್ರವಾರದಂದು ಸಿದ್ಧಾರ್ಥ ನಗರದ ಸ್ಮಶಾನ ಭೂಮಿ ಪರಿಸರದಲ್ಲಿ ಇಲ್ಲಿನ ವಿದ್ಯಾರ್ಥಿ ಬಂಧುತ್ವ ವೇದಿಕೆ ವತಿಯಿಂದ ಮೌಢ್ಯ ವಿರೋಧಿ ಸಂಕಲ್ಪ ದಿನ ಕಾರ್ಯಕ್ರಮ ವಿಶೇಷ ರೀತಿಯಲ್ಲಿ ಜರುಗಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಾರಂಗಮಠದ ಜಗದ್ಗುರು ಪೂಜ್ಯ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು, ಸಾಮಾಜಿಕ ಸುಧಾರಕರಾದ ಬುದ್ಧ, ಬಸವ, ಡಾ.ಅಂಬೇಡ್ಕರ್ ಈ ಮೂರು ರತ್ನಗಳು ಭಾರತ ಬೆಳಗಿದ ಮಹಾತ್ಮರು. ದೆವ್ವ, ಭೂತ, ಪಿಶಾಚಿಗಳು ಇವು ನಮ್ಮ ಮಾನಸಿಕ ದೌರ್ಬಲ್ಯಗಳಾಗಿವೆ ಮೂಢನಂಬಿಕೆಗಳು, ಕಂದಾಚಾರಗಳು, ಅನಾಚಾರಗಳಿಂದ ಈ ಸಮಾಜವನ್ನು ಪಾರು ಮಾಡಬೇಕಾಗಿದೆ ಎಂದು ನುಡಿದರು.

ಬೀದರಿನ ಲಿಂಗಾಯತ ಮಹಾಮಠದ ಪೂಜ್ಯ ಶ್ರೀ ಅಕ್ಕ ಅನ್ನಪೂರ್ಣ ತಾಯಿ ಮಾತನಾಡಿ, ಜ್ಞಾನದಿಂದ ಈ ಜಗತ್ತನ್ನು ಆಳಬಹುದು. ಆ ಕಾರಣಕ್ಕಾಗಿಯೇ ಡಾ.ಅಂಬೇಡ್ಕರ್ ಅವರನ್ನು ವಿಶ್ವಜ್ಞಾನಿ ಎಂದು ಕರೆಯುತ್ತೇವೆ. ಮಹಿಳೆಯರ ಸಮಾನತೆಗಾಗಿ ತಮಗಿದ್ದ ಮಂತ್ರಿ ಪದವಿಗೆ ರಾಜೀನಾಮೆ ನೀಡಿದ ಏಕೈಕ ವ್ಯಕ್ತಿ. ಡಾ.ಅಂಬೇಡ್ಕರ್ ಅವರ ಸಂವಿಧಾನ ಭಾರತದ ನಿಜವಾದ ಗ್ರಂಥವಾಗಿದೆ ಎಂದು ಮಾರ್ಮಿಕವಾಗಿ ನುಡಿದರು.

ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಇಂದಿನ ವೈಜ್ಞಾನಿಕ ಯುಗದಲ್ಲಿ ಮಾನವ ಅನ್ಯ ಗ್ರಹದ ಮೇಲೆ ಕಾಲಿಟ್ಟರೂ ನಮ್ಮ ಮನದ ಗ್ರಹಗತಿ ಇಂದಿಗೂ ಮಾಯವಾಗಿಲ್ಲ. ಮೂಢನಂಬಿಕೆ, ಕಂದಾಚಾರಗಳು ಕಂಡು ಬರುತ್ತಲೇ ಇವೆ. ಹಾಗಾಗಿ, ವೈಚಾರಿಕ, ವೈಜ್ಞಾನಿಕ ಚಿಂತನೆ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಜಗದೀಶ ಚೌರ ಮಾತನಾಡಿ, ಅನಾವಶ್ಯಕವಾಗಿ ಭಯ, ಗೊಂದಲಗಳಿಗೆ ಈಡಾಗುತ್ತಿರುವ ಇಂದಿನ ಜನತೆಗೆ ವೈಜ್ಞಾನಿಕ, ವೈಚಾರಿಕತೆಯ ಸ್ಪರ್ಶ ನೀಡಬೇಕಾಗಿದೆ ಎಂದರು.
ಹಿರಿಯ ಮುಖಂಡ ಡಾ.ವಿಠಲ ದೊಡ್ಮನಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಪೂಜ್ಯ ಸಂಘಾನಂದ ಬಂತೇಜಿ ಸಾನಿಧ್ಯ ವಹಿಸಿದ್ದರು.
ಜಿಪಂ ಉಪಾಧ್ಯಕ್ಷೆ ಶೋಭಾ ಸಿರಸಗಿ, ಬಸವಾ ಸೇವಾ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಯಂಕಂಚಿ, ಪ್ರಮುಖರಾದ ಶ್ಯಾಮ ನಾಟಿಕಾರ, ಸುರೇಶ ಬಡಿಗೇರ, ಪ್ರಭು ಖಾನಾಪುರೆ, ಸಂತೋಷ ಮೇಲಿನಮನಿ, ರಾಜೀವ ಜಾನೆ, ಹಣಮಂತ ಇಟಗಿ, ಡಾ . ಅನೀಲ ಟೆಂಗಳಿ, ಸಂತೋಷಕುಮಾರ ಮೇಲ್ಮನಿ, ವೇದಿಕೆ ಅಧ್ಯಕ್ಷ ದಿನೇಶ ದೊಡ್ಮನಿ, ವಿದ್ಯಾಸಾಗರ ದೇಶಮುಖ, ಶಿವಾನಂದ ಮಠಪತಿ, ನಾಗೇಂದ್ರ ಜವಳಿ, ಪ್ರಕಾಶ ಕಪನೂರ, ಎಸ್.ಎಂ.ಪಟ್ಟಣಕರ್, ಧರ್ಮಣ್ಣ ಕೋನೆಕರ್ ಸೇರಿದಂತೆ ಅನೇಕ ಸಾಹಿತಿಗಳು, ಪ್ರಗತಿಪರ ಚಿಂತಕರು ಭಾಗವಹಿಸಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

9 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

9 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

9 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago