ಕಲಬುರಗಿ: ಇಂದಿನ ದಿನ ಸಂತಾಪದ ದಿನಾಚರಣೆ ಆಗದೆ ಪ್ರತಿಯೊಬ್ಬ ಭಾರತೀಯ ಅವಲೋಕನ ದಿನಾಚರಣೆ ಆಗಬೇಕು ಆಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಡಾ. ಜಗನ್ನಾಥ ಡಾಂಗೆ ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಮಹಾತ್ಮಗಾಂಧಿ ಸಭಾಂಗಣದಲ್ಲಿ ನಡೆದ ಡಾ. ಬಾಬಾಸಾಹೇಬ್ ಭೀಮರಾವ ಅಂಬೇಡ್ಕರ್ ಅವರ 63 ನೇ ಪರಿನಿಬ್ಬಾಣ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವಿದ್ವತ್ತು ಜ್ಞಾನ ಯಾರೊಬ್ಬರ ಸ್ವತ್ತಲ್ಲ ಅದು ಕಠಿಣ ಪರಿಶ್ರಮದಿಂದ ಮಾತ್ರ ಬರಲು ಸಾಧ್ಯವಾಗುತ್ತದೆ. ಇಡೀ ಮನುಕುಲಕ್ಕೆ ಬಹುದೊಡ್ಡ ಚೇತನವಾಗಿ ನಿಂತರು ಅಂಬೇಡ್ಕರ್. ಹೀಗಾಗಿ ಪ್ರತಿಯೊಬ್ಬ ಭಾರತೀಯು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ತಿದುಕೊಳ್ಳುವುದು ತುಂಬಾ ಅತ್ಯವಶ್ಯಕ ಇದೆ. ಅಂಬೇಡ್ಕರರು ತಮ್ಮ ಇಡೀ ಜೀವನವನ್ನು ಬರೀ ದಲಿತರ ಗೋಸ್ಕರ ಮುಡಿಪಾಗಿಡಲಿಲ್ಲ ಎಲ್ಲ ಭಾರತೀಯರ ಗೋಸ್ಕರ ಮುಡಿಪಾಗಿಟ್ಟ ಮಹಾನ್ ವ್ಯಕ್ತಿ ಅವರಾಗಿದ್ದರು. ಆದರೆ ಅವರು ಕಂಡ ಕನಸು ಇವತ್ತೀಗೂ ನನಸಾಗಿಲ್ಲ. ಇದು ದೊಡ್ಡ ದುರಂತ ಅನ್ಸುತ್ತೆ. ಡಾ. ಅಂಬೇಡ್ಕರ್ ರವರು ಸಮಸಮಾಜ ಕನಸು ಕಂಡಿದ್ದರು ಆದರೆ ಇಂದಿಗೂ ಸಮಾಜದಲ್ಲಿ ಸಮಾನತೆ ಮರೀಚಿಕೆ ಆಗಿದೆ.
ಇಲ್ಲಿ ಬಹಳ ಮುಖ್ಯವಾಗಿ ಎಲ್ಲರೂ ವಿಚಾರ ಮಾಡುವಂತದು ಏನೆಂದರೆ ಎಸ್ಸಿ ಎಸ್ ಟಿ ಮಾತ್ರ ದಲಿತರು ಅಲ್ಲ ಸಮಾಜದಲ್ಲಿ ತುಳಿತಕ್ಕೆ ಒಳಗಾದ ಎಲ್ಲಾ ಜಾತಿಯ ಮಹಿಳೆಯರು ಮತ್ತು ಪುರುಷರು ಎಲ್ಲರೂ ದಲಿತರೆ ಆಗಿದ್ದಾರೆ. ಇವತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಇಡೀ ಪ್ರಪಂಚ ಸ್ಮರಿಸುತ್ತದೆ ಎಂದು ಅವರು ಹೇಳಿದರು. ಪ್ರಭಾರಿ ಕುಲಪತಿ ಪ್ರೊ. ಲಕ್ಷ್ಮಣ್ ರಾಜನಳ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಎಲ್ಲರೂ ದೈಹಿಕವಾಗಿ ಬದಲಾಗಿದ್ದರೆ ಆದರೆ ಮಾನಸಿಕವಾಗಿ ಯಾರು ಬದಲಾಗಿಲ್ಲ.
ಯಾವಾಗ ಮಾನಸಿಕವಾಗಿ ಬದಲಾವಣೆ ಹೊಂದುತ್ತಾರೆ ಆಗ ಡಾ. ಅಂಬೇಡ್ಕರ್ ಅರ್ಥ ಆಗುತ್ತಾರೆ. ಜೀವನದಲ್ಲಿ ಗೆಲವು ಸಾಧಿಸಬೇಕು ಎಂದರೆ ಪರಿಶ್ರಮದಿಂದ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡಬೇಕು. ವಿದ್ಯಾರ್ಥಿಗಳು ಭಾಷಣ ಕೇಳಿ ಹೋಗದೆ ಉಪನ್ಯಾಸವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪ್ರೊ, ಎಸ್ ಪಿ ಮೇಲಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು, ವಿತ್ತಾಧಿಕಾರಿ ಮತ್ತು ಪ್ರಭಾರಿ ಕುಲಸಚಿವ ಪ್ರೊ, ವಿಜಯ, ಮೌಲ್ಯಮಾಪನ ಕುಲಸಚಿವ ಪ್ರೊ, ಸಂಜೀವಕುಮಾರ ಕೆ. ಎಂ, ಡಾ. ವಿ ಟಿ ಕಾಂಬಳೆ ಡಾ. ಎನ್ ಜಿ ಕಣ್ಣೂರ, ಡಾ. ಎಂ ಎಸ್ ಪಾಸೋಡಿ ಡಾ. ಹಣಮಂತ ಜಂಗೆ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…