ಸುರಪುರ: ಇಂದು ಎಲ್ಲೆಡೆ ಮೂಢನಂಬಿಕೆ ಅಂಧಕಾರ ತಾಂಡವವಾಡುತ್ತಿದೆ.ಆದರೆ ತನ್ನ ಬದುಕಿನುದ್ದಕ್ಕು ವಿಚಾರಗಳ ಮೂಲಕ ಜಗತ್ತಿಗೆ ಬೆಳಕು ಕೊಟ್ಟಾತ ಡಾ:ಬಾಬಾ ಸಾಹೇಬ ಅಂಬೇಡ್ಕರರು ಎಂದು ಶರಣ ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ ಮಾತನಾಡಿದರು.
ನಗರದ ಕುಂಬಾರಪೇಟೆಯ ಸ್ಮಶಾನದಲ್ಲಿ ದಲಿತ ಸೇನೆ ಹಾಗು ಮಾನವ ಬಂಧುತ್ವ ವೇದಿಕೆಯಿಂದ ಹಮ್ಮಿಕೊಂಡಿದ್ದ ಡಾ: ಬಾಬಾ ಸಾಹೇಬ ಅಂಬೇಡ್ಕರರ ೬೩ನೇ ಮಹಾ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿ,ಬದುಕಿನುದ್ದಕ್ಕೂ ದೇಶದ ಜನರ ಒಳಿತಿಗಾಗಿ ಚಿಂತನೆ ನಡೆಸಿದಾತ ಅಂಬೇಡ್ಕರ,ಅಂತಹ ಅಂಬೇಡ್ಕರರ ಜಯಂತಿಯಂದು ನಾವುಗಳು ಕುಡಿದು ಕುಣಿದು ಆಚರಿಸುವುದಲ್ಲ ಅವರ ಚಾರಗಳನ್ನು ತತ್ವಾದರ್ಶಗಳನ್ನು ನಮ್ಮೊಳಗೆ ಅಳವಡಿಸಿಕೊಂಡಾಗ ನಿಜವಾದ ಜಯಂತಿ ಆಚರಣೆ ಆಗಲಿದೆ ಎಂದರು.
ಅಂಬೇಡ್ಕರರು ಕೊಟ್ಟ ಸಂವಿಧಾನದ ಕಾನೂನುಗಳಿಂದ ನಾವೆಲ್ಲ ಇಂದು ಸಮಾನರಾಗಿ ಬಾಳುವಂತಾಗಿದೆ.ಆದರೆ ಇದನ್ನು ಮರೆತು ನಾವುಗಳು ಜ್ಯೋತಿಷ್ಯ ಪಂಚಾಂಗ ಶಾಸ್ತ್ರಗಳ ಹಿಂದೆ ಬಿದ್ದರೆ ಅದು ಅಂಬೇಡ್ಕರರಿಗೆ ಮಾಡುವ ಅವಮಾನವಾಗಲಿದೆ ಎಂದರು.ಇಂದು ಸನಾತನ ಪರಂಪರೆಯವರ ಮೆದುಳು ಕೊಳೆತಿದೆ,ಅದು ಜಂಗಿಡಿದ ಕಬ್ಬಿಣದಂತೆ ಅದು ನಮಗೆ ಚುಚ್ಚಿದರೆ ನಂಜಾಗಲಿದೆ,ಆದ್ದರಿಂದ ನಾವು ಈ ಮೂಢನಂಬಿಕೆಗಳಿಂದ ಹೊರಬರುವುದು ಅವಶ್ಯವಾಗಿದೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಡಾ:ಬಾಬಾ ಸಾಹೇಬರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕ್ಯಾಂಡಲ್ ಹಚ್ಚಿ ಎರಡು ನಿಮಿಷಗಳ ಮೌನಾಚರಣೆ ಮಾಡಲಾಯಿತು.
ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಗುರುಮಿಠಕಲ್ ಖಾಸಾ ಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ವಹಿಸಿದ್ದರು,ದೇವಿಂದ್ರಪ್ಪಗೌಡ ಗೌಡಗೇರಾ ಉದ್ಘಾಟಿಸಿದರು,ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಅನಕಸುಗೂರ ಅಧ್ಯಕ್ಷತೆ ವಹಿಸಿದ್ದರು,ಬುದ್ದಘೋಷ್ ದೇವಿಂದ್ರ ಹೆಗ್ಗಡೆ ಅಂಬೇಡ್ಕರರ ಕುರಿತು ಮಾತನಾಡಿದರು.
ವೇದಿಕೆ ಮೇಲೆ ಸೇನೆ ಜಿಲ್ಲಾಧ್ಯಕ್ಷ ಅಶೋಕ ಹೊಸ್ಮನಿ,ರೈತ ಹೋರಾಟಗಾರ ಮಲ್ಲಿಕಾರ್ಜುನ ಸತ್ಯಂಪೇಟೆ,ವಕೀಲ ಎಂ.ಎಸ್.ಹಿರೇಮಠ,ಮಾಜಿ ನಗರಸಭೆ ಸದಸ್ಯ ವೆಂಕಟೇಶ ಹೊಸ್ಮನಿ,ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಸಯ್ಯದ್ ಹುಸೇನ ಖಾಲಿದ್,ಸಾಹಿತಿ ಶಿವಣ್ಣ ಇಜೇರಿ,ರಾಹುಲ್ ಹುಲಿಮನಿ,ಮಾಳಪ್ಪ ಕಿರದಳ್ಳಿ,ಯಲ್ಲಪ್ಪ ಚಿಂಚೋಳಿ ಸೇರಿದಂತೆ ಅನೇಕರಿದ್ದರು.ಜಿಲ್ಲಾಧ್ಯಕ್ಷ ಅಶೋಕ ಹೊಸ್ಮನಿ ಸ್ವಾಗತಿಸಿದರು,ಬಸವರಾಜ ಸಿನ್ನೂರ ನಿರೂಪಿಸಿದರು, ತಾಲೂಕು ಅಧ್ಯಕ್ಷ ನಿಂಗಣ್ಣ ಗೋನಾಲ ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…