ಜೇವರ್ಗಿ: ಶೋಷಿತರಿಗೆ ಮತ್ತು ಮಹಿಳೆಯರಿಗೆ ಬೆಳಕನ್ನು ನೀಡಿದ ಮಹಾನ್‌ಕೃತಿ ಭಾರತದ ಸಂವಿಧಾನವಾಗಿದೆಎಂದು ಸೊನ್ನಎಸ್.ಜಿ.ಎಸ್.ವಿಕಾಲೇಜಿನಉಪನ್ಯಾಸಕನಿಜಲಿಂಗದೊಡ್ಮನಿಅಭಿಪ್ರಾಯಪಟ್ಟರು.
ಪಟ್ಟಣದಕದಂಬ ಪದವಿ ಪೂರ್ವಕಾಲೇಜಿನಲ್ಲಿ ಶನಿವಾರ ನಡೆದಡಾ.ಬಿ.ಆರ್.ಅಂಬೇಡ್ಕರ್‌ಅವರ ೬೩ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ದೇಶದ ಸಂವಿಧಾನ ಸಂಪೂರ್ಣವಾಗಿ ಜಾರಿಯಾಗಬೇಕು ಎಂಬುವುದು ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯವಾಗಿತ್ತು. ದೇಶದಜನರನ್ನು ಶೋಷಣಿ ಮುಕ್ತ, ವೈಚಾರಿಕ ನೆಲೆಗಟ್ಟಿನಲ್ಲಿ ಬೆಳೆಸಬೇಕು ಎಂಬ ನಿಲುವು ಅವರದ್ದಾಗಿತ್ತು. ಡಾ.ಅಂಬೇಡ್ಕರ್‌ಅವರು ಈ ದೇಶದಲ್ಲಿ ಹುಟ್ಟದೆ ಹೋಗಿದ್ದರೆಎಲ್ಲ ವರ್ಗದ ಮಹಿಳೆಯರು ಕತ್ತಲಿನಲ್ಲಿಯೇತಮ್ಮ ಬದುಕನ್ನು ಸವೆಸಬೇಕಾಗಿತ್ತು ಎಂದರು.
ಭಾರತದೇಶದ ಪ್ರಜಾಪ್ರಭುತ್ವಇಡೀ ವಿಶ್ವಕ್ಕೆ ಮಾದರಿಯಾಗಿದೆ. ವಿದ್ಯಾರ್ಥಿ ಸಮೂಹ ಡಾ. ಅಂಬೇಡ್ಕರ್‌ಅವರ ವಿಚಾರಗಳನ್ನು ಆಳವಡಿಸಿಕೊಂಡರೇ ಭಾರತದೇಶದ ವಿಶ್ವಗುರುವಾಗುವುದರಲ್ಲಿ ಸಂದೇಹವೇಇಲ್ಲಎಂದರು. ಬುದ್ಧ, ಬಸವ, ಗಾಂಧಿಜಿ, ಡಾ.ಅಂಬೇಡ್ಕರ್ ಚಿಂತನೆಗಳನ್ನು ಇಂದಿನ ಯುವಕರುಅನುಸರಿಸಬೇಕು. ವಿದ್ಯಾರ್ಥಿಜೀವನವನ್ನು ವ್ಯರ್ಥಮಾಡಿಕೊಳ್ಳದೆ ಓದಿನಲ್ಲಿ ಕಳೆಯುವುದರ ಮೂಲಕ ಪ್ರತಿಯೊಬ್ಬರು ಸಾಧಕರಾಗಬೇಕು. ಕದಂಬ ಕಾಲೇಜು ವಿದ್ಯಾರ್ಥಿಗಳಿಗೆ ಉತ್ತಮ ನೈತಿಕ ಮೌಲ್ಯ ಬೆಳೆಸುವ ಪರಿಸರ ನಿರ್ಮಿಸುತ್ತಿದೆ. ಸಾಮಾಜಿಕ, ವೈಚಾರಿಕ ಚಿಂತನೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಲು ಹಗಲಿರುಳು ಶ್ರಮಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ನಂತರಅಧ್ಯಕ್ಷತೆ ವಹಿಸಿದ ಮಾತನಾಡಿದ ಪ್ರಾಚಾರ್ಯ ಶ್ರೀಶೈಲ್ ಕಣದಾಳ, ಕಾಲೇಜಿನ ಮಕ್ಕಳು ನನ್ನ ಮಕ್ಕಳು ಎನ್ನುವ ಭಾವನೆಯಿಂದ ಕೆಲಸ ಮಾಡುತ್ತಿದ್ದೇನೆ. ಡಾ.ಅಂಬೇಡ್ಕರ್‌ಅವರಿಗೆ ಎಷ್ಠೇ ಕಷ್ಟ ಬಂದರೂಓದನ್ನು ನಿಲ್ಲಿಸದೆಅಪಾರಜ್ಞಾನಸಂಪತ್ತು ಪಡೆದುಕೊಂಡರು. ನಮ್ಮಕಾಲೇಜಿನ ವಿದ್ಯಾರ್ಥಿಗಳು ಸಹ ಬಾಬಾ ಸಾಹೇಬರ ಆದರ್ಶಗಳನ್ನು ಆಳವಡಿಸಿಕೊಂಡು ಕಾಲೇಜಿನಕೀರ್ತಿತರಬೇಕುಎಂದು ಹಾರೈಸಿದರು. ವಿದ್ಯಾರ್ಥಿಗಳಿಗೆ ಸಾಧಕರಜೀವನ ಮತ್ತು ಸಾಧನೆಯನ್ನು ತಿಳಿಸಲು ಇಂತಹಕಾರ್ಯಕ್ರಮಆಯೋಜಿಸುತ್ತಾ ಬರಲಾಗುತ್ತಿದೆ. ಮಕ್ಕಳು ನಾಳಿನ ಪ್ರಜಾಪ್ರಭುತ್ವದರಕ್ಷಕರುಎಂಬುವುದನ್ನು ಪ್ರತಿಯೊಬ್ಬ ವಿದ್ಯಾರ್ಥಿ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರೊಬೆಷನರಿ ಪಿಎಸ್.ಐಗಜಾನಂದ ಬಿರಾದಾರ, ಡಾ. ಧರ್ಮಣ್ಣ ಬಡಿಗೇರ, ಮಹಾದೇವಯ್ಯ ಹಿರೇಮಠ, ಮೇಲ್ವಿಚಾರಕಿ ಮಲ್ಕಮ್ಮ, ಸಂಗೀತಾ ಸುಬೇದಾರ, ಬಸವರಾಜಗೌಡಗೇರಿ ಸ್ವಾಗತಿಸಿದರು. ಅವ್ವಮ್ಮಯಲಗೋಡ ಪ್ರಾರ್ಥಿಸಿದರು. ಅಯ್ಯಣ್ಣ ಶಿವಪುರ ನಿರೂಪಿಸಿದರು. ದೇವಣಗೌಡ ಹಂದನೂರ ವಂದಿಸಿದರು.
ವಿದ್ಯಾರ್ಥಿಗಳಿಗೆ ಸನ್ಮಾನ:ಪದವಿ ಪೂರ್ವ ಪರೀಕ್ಷೆಯಲ್ಲಿಕಾಲೇಜಿಗೆಅತಿ ಹೆಚ್ಚು ಅಂಕಪಡೆದಕುಮಾರಿ ಶೃತಿಅವರಾದಿ, ಅಭಿಷೇಕ ಶಖಾಪುರಅವರನ್ನು ಸನ್ಮಾನಿಸಲಾಯಿತು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…