ಬಿಸಿ ಬಿಸಿ ಸುದ್ದಿ

ಡಿ.10 ರಂದು ಒಂದು ದಿನದ ವೈಚಾರಿಕ ಚಿಂತನಾ ಸಮಾವೇಶ

ಕಲಬುರಗಿ: ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಮನುಷ್ಯರ ಜವಾಬ್ದಾರಿಗಳನ್ನು ಪುನರ್ಜ್ಞಾನಿಪಿಸುವ ಮತ್ತು ಆ ಮೂಲಕ ಮಾನವ ಬಂಧುತ್ವವನ್ನು ಏರ್ಪಡಿಸುವ ಆಶಯದೊಂದಿಗೆ ಸಮೃದ್ಧಿಯ ಸವಿನೆನಪಿನಲ್ಲಿ ಇಲ್ಲಿನ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ವತಿಯಿಂದ ಡಿಸೆಂಬರ್ ೧೦ ರಂದು ಬೆಳಗ್ಗೆ ೧೦.೩೦ ಕ್ಕೆ ನಗರದ ಗೋದುತಾಯಿ ನಗರದಲ್ಲಿರುವ ಮದರ್ ತೆರೆಸಾ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ‘ಸಹಸ್ರಮಾನದ ಶರಣ’ ಎನ್ನುವ ವಚನಾಂತರಂಗದ ಅವಲೋಕನ ಎಂಬ ಒಂದು ದಿನದ ವೈಚಾರಿಕ ಚಿಂತನಾ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷರೂ ಆದ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

ಪ್ರಸ್ತುತ ಸಾಮಾಜಿಕ ಸಂದರ್ಭದಲ್ಲಿ ಮನುಷ್ಯ ಸಂಬಂಧಗಳು ಜಟಿಲವೆನಿಸಿದಾಗ, ಕುಟಿಲವೆನಿಸಿದಾಗ ಸರ್ವಜನಾಂಗದ ಲೇಸನ್ನೇ ಬಯಸಿದ ಬಸವಾದಿ ಶರಣರ ವಚನಗಳು ಆತ್ಮಾವಲೋಕನದಂತೆ ಪುನರಾವಲೋಕನ ಮಾಡಬೇಕಾಗಿದೆ.  ಸಾಮಾಜಿಕ ಜೀವನ ಪ್ರತಿಕೂಲಗಳನ್ನು ಪರಿಹರಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿರುತ್ತದೆ. ಪೂಜ್ಯರಂತೆ ಇರುವ ಪೂರ್ವಜರ ಸಂದೇಶಗಳು ಪುನರ್‌ಮನನ ಮಾಡಿಕೊಳ್ಳುವದು ಇಂದಿನ ಅಗತ್ಯವಾದಂತೆ ಅನಿವಾರ್ಯವೂ ಆಗಿದೆ ಎಂದು ವಿವರಿಸಿರುವ ತೇಗಲತಿಪ್ಪಿ ಅವರು, ಸಾವಿರಾರು ವರ್ಷಗಳಿಂದಲೂ ಸಾಮಾಜಿಕ ಸಂದರ್ಭದ ಮನುಷ್ಯ ಜೀವನದ ಏರಿಳಿತಗಳು, ತಾರತಮ್ಯಗಳು ಸರಿದೂಗಿಸಲು ವಚನ ಸಾಹಿತ್ಯ, ಮಹಾತ್ಮರ ಚಿಂತನೆಗಳಂಥ ಅರಿವಿನಧಾರೆಗಳು ಈ ನೆಲದ ವೈಚಾರಿಕ ಸಂಪತ್ತಾಗಿವೆ.

ಅಂದು ಬೆಳಗ್ಗೆ ೧೦.೩೦ ನಡೆಯುವ ಜನೋದ್ಧಾರವೇ ಜಗದೋದ್ಧಾರ ಮತ್ತು ಮಾನವೀಯತೆಯೇ ವಚನದ ಸಾರ ಎಂಬ ಮಹತ್ವದ ವಿಷಯಗಳನ್ನೊಳಗೊಂಡಿರುವ ಸಮಾರಂಭವನ್ನು ಶರಣ ಸಾಹಿತಿ ಡಾ.ಈಶ್ವರಯ್ಯ ಮಠ ಉದ್ಘಾಟಿಸಲಿದ್ದು, ವಚನಾಧರಿತ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ನಾಡಿನ ಪ್ರಸಿದ್ಧ ಸಾಹಿತಿ ಡಾ.ಬಸವರಜ ಸಬರದ ಪ್ರಶಸ್ತಿ ಪತ್ರ ವಿತರಿಸಲಿದ್ದಾರೆ. ಶಾಸಕ ಎಂ.ವೈ.ಪಾಟೀಲ ಅಧ್ಯಕ್ಷತೆ ವಹಿಸಲಿದ್ದು, ಶ್ರವಸ್ಥಿ ಟ್ರಸ್ಟ್ ಅಧ್ಯಕ್ಷ ಡಾ.ಕಿರಣ ದೇಶಮುಖ, ಪ್ರಾಚಾರ್ಯ ಡಾ.ವನೀತಾ ಜಾಧವ ಉಪಸ್ಥಿತರಿರುವರು.

ಅಪರಾಹ್ನ ೧೨.೪೫ ಕ್ಕೆ ನಡೆಯುವ ಮೊದಲ ಗೋಷ್ಠಿಯಲ್ಲಿ ಸ್ತ್ರೀ ಉದ್ಧಾರವೇ ಸಮಾಜೋದ್ಧಾರ ಕುರಿತು ಶರಣ ಲೇಖಕಿ ಡಾ.ಇಂದುಮತಿ ಪಿ.ಪಾಟೀಲ ಅನುಭಾವ ನೀಡಲಿದ್ದು, ಹಿರಿಯ ಕವಯತ್ರಿ ಶಕುಂತಲಾ ಪಾಟೀಲ ಜಾವಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಪ್ರತಿಮಾ ಕಾಮರೆಡ್ಡಿ, ಮಾಲತಿ ರೇಷ್ಮಿ, ಜಗದೇವಿ ಚೆಟ್ಟಿ, ವಿಜಯಲಕ್ಷ್ಮೀ ಪಾಟೀಲ ಬಿರಾಳ ಉಪಸ್ಥಿತರಿರುವರು.

ಮಧ್ಯಾಹ್ನ ೨ ಗಂಟೆಗೆ ನಡೆಯುವ ವಚನ ಗಾಯನದಲ್ಲಿ ಸಂಗೀತ ಕಲಾವಿದರಾದ ವಿಜಯಲಕ್ಷ್ಮೀ ಕೆಂಗನಾಳ ಹಾಗೂ ತಂಡದವರಿಂದ ವಚನಗಳು ಪ್ರಸ್ತುತಪಡಿಸಲಿದ್ದಾರೆ. ಸಾಹಿತ್ಯ ಪ್ರೇಮಿ ಜಗದೀಶ ಮರಪಳ್ಳಿ ಚಿಮ್ಮನಚೋಡ ಅಧ್ಯಕ್ಷತೆ ವಹಿಸಲಿದ್ದು, ರವೀಂದ್ರಕುಮಾರ ಭಂಟನಳ್ಳಿ, ಎಸ್.ಎಂ.ಪಟ್ಟಣಕರ್, ಶಿವರಾಜ ಅಂಡಗಿ, ಡಾ.ಕೆ.ಗಿರಿಮಲ್ಲ, ಹಣಮಂತರಾಯ ಅಟ್ಟೂರ, ಪರಮೇಶ್ವರ ಶಟಕಾರ, ಬಿ.ಎಂ.ಪಾಟೀಲ ಕಲ್ಲೂರ, ಶಿವಾನಂದ ಮಠಪತಿ, ಶರಣರಾಜ ಛಪ್ಪರಬಂದಿ, ನಾಗೇಂದ್ರಪ್ಪ ಮಾಡ್ಯಾಳೆ, ವಿದ್ಯಾಸಾಗರ ದೇಶಮುಖ, ಪ್ರಬುಲಿಂಗ ಮೂಲಗೆ ಉಪಸ್ಥಿತರಿರುವರು.
ಇಳಿಹೊತ್ತು ೩ ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸರ್ವೋದಯವೇ ಶರಣರ ಮಂತ್ರ ವಿಷಯದ ಕುರಿತು ಸಾಹಿತಿ-ಪತ್ರಕರ್ತ ಜಗನ್ನಾಥ ಎಲ್.ತರನಳ್ಳಿ ಅನುಭಾವ ನೀಡಲಿದ್ದು, ಮದರ್ ತೆರೆಸಾ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಶಿವಪುತ್ರಪ್ಪ ಡೆಂಕಿ ಅಧ್ಯಕ್ಷತೆ ವಹಿಸಲಿದ್ದಾರೆ. ಹೆಚ್.ಕೆ.ಸಿ.ಸಿ.ಐ. ಉಪಾಧ್ಯಕ್ಷ ಶರಣು ಪಪ್ಪಾ, ಅಫಜಲಪುರಿನ ಬಸಣ್ಣಾ ಗುಣಾರಿ, ಅಶೋಕ ಘೂಳಿ, ದಿನೇಶ ದೊಡ್ಮನಿ ಉಪಸ್ಥಿತರಿರುವರು.

ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಹಣಮಂತ ಗುಡ್ಡಾ, ದೀಪಾಲಿ ಬಿರಾದಾರ, ಸಂಗಮೇಶ ಶಾಸ್ತ್ರಿ ಮಾಶಾಳ, ಬಸವರಾಜ ಜನಕಟ್ಟಿ, ಜಗನ್ನಾಥ ರಾಚೋಟಿ, ಸವಿತಾ ಎಸ್.ಕುಂಬಾರ, ಕಮಲಾ ಶಿವಗೊಂಡಪ್ಪ ಪಾಟೀಲ, ನಾಗರಾಜ ಕಾಮಾ, ಮಲ್ಲಿನಾಥ ಪಾಟೀಲ ಕಾಳಗಿ, ಪ್ರಭುದೇವ ಯಳವಂತಗಿ ಅವರನ್ನು ಇದೇ ಸಂದರ್ಭದಲ್ಲಿ ವಿಶೇಷವಾಗಿ ಗೌರವಿಸಲಾಗುವುದು.

ಸ್ವಾಗತ ಸಮಿತಿಯ ಅಧ್ಯಕ್ಷ ಡಾ.ಸುರೇಶ ಶರ್ಮಾ ಹಾಗೂ ಕಾರ್ಯಾಧ್ಯಕ್ಷ ಡಾ.ರಾಘವೇಂದ್ರ ಚಿಂಚನಸೂರ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇದರಂಗವಾಗಿ ಸಮೃದ್ಧಿ ಫೌಂಡೇಶನ್ ವತಿಯಿಂದ ನಡೆಸಿದ ವಚನಾಧರಿತ ಸ್ಪರ್ಧೆಗಳಲ್ಲಿ ಭಾಗವಹಿಸಿ ೧೫೬ ವಚನಗಳು ಬಾಯಿಪಾಠವಾಗಿ ಹೇಳಿ ಪ್ರಥಮ ಸ್ಥಾನ ಗಳಿಸಿದ ತಾಲೂಕಿನ ಕವಲಗಾ ಗ್ರಾಮದ ಬಸವಗಂಗಾ ಶಾಲೆಯ ವಿದ್ಯಾರ್ಥಿನಿಯರಾದ ಲಕ್ಷ್ಮೀ ತಂದೆ ಪರ್ವತರೆಡ್ಡಿ, ೧೩೬ ವಚನಗಳು ಹೇಳಿ ದ್ವಿತೀಯ ಸ್ಥಾನ ಗಳಿಸಿದ ಕು.ಪೂಜಾ ಸುಭಾಷ ಮತ್ತು ೧೦೯ ವಚನಗಳು ಹೇಳಿ ತೃತೀಯ ಸ್ಥಾನ ಗಳಿಸಿದ ಸರಡಗಿ (ಬಿ) ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಭಾಗಮ್ಮ ಮಲ್ಲಪ್ಪ ಅವರಿಗೆ ನಗದು ಬಹುಮಾನದೊಂದಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದೆಂದು ತಿಳಿಸಿದ್ದಾರೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

13 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

23 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

23 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

23 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago