ರಾಯಚೂರು/ಕವಿತಾಳ: ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಸದಸ್ಯರು ಮತ್ತು ಅಧಿಕಾರಿಗಳಿಂದ ಶೌಚಾಲಯ ನಿರ್ಮಾಣದಲ್ಲಾದ ಭ್ರಷ್ಟಾಚಾರವನ್ನು ಸೂಕ್ತ ತನಿಖೆಗೆ ಒತ್ತಾಯಿಸಿ ಹಾಗೂ ರಸ್ತೆ ಆಗಲೀಕರಣ ಕಾಮಗಾರಿ ಪ್ರಾರಂಭಕ್ಕೆ ಆಗ್ರಹಿಸಿ ಮತ್ತು ಪಟ್ಟಣಕ್ಕೆ ಇತರ ಆಗತ್ಯ ಮೂಲಭೂತ ಸಾರ್ವಜನಿಕ ಸೌಕರ್ಯಗಳ ಈಡೇರಿಕೆಗಾಗಿ ಕವಿತಾಳ ಪಟ್ಟಣ ಪಂಚಾಯತಿ ಮುಂಭಾಗದಲ್ಲಿ DYFI, SFI ಜೈ ಭಾರತ್ ಸಂಘ, ಕವಿತಾಳ ನವ ನಿರ್ಮಾಣ ವೇದಿಕೆ, ವಾಲ್ಮೀಕಿ ಸಂಘಟನೆ ಸೇರಿದಂತೆ ಇತರ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮಾಡುತ್ತಿರುವ ಹೋರಾಟ ವು ಮೂರನೇ ದಿನವನ್ನು ಪೂರ್ಣಗೊಳಿಸಿ ಸೋಮವಾರ ದಿಂದ ಉಪವಾಸ ಸತ್ಯಾಗ್ರಹಕ್ಕೆ ಮುಂದುವರೆದಿದ್ದು, ಸೋಮವಾರ ದಿಂದ ಉಪವಾಸ ಸತ್ಯಾಗ್ರಹಕ್ಕೆ ಮುನ್ನುಗಿದೆ ಎಂದು SFI ಸಂಘಟನೆ ಜಿಲ್ಲಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ತಿಳಿಸಿದ್ದಾರೆ.
ಹೋರಾಟದ ನೇತೃತ್ವವಹಿಸಿ ಮಾತನಾಡಿ ಪಟ್ಟಣವು ಶುದ್ಧ ಕುಡಿಯುವ ನೀರು, ರಸ್ತೆ ಅಗಲೀಕರಣ, ಶೌಚಾಲಯ, ಹಕ್ಕುಪತ್ರ, ಮುಟೇಷನ್ ಸಮಸ್ಯೆ, ವಿದ್ಯುತ್ ದೀಪ, ಜನತಾ ಮನೆ ಸೇರಿದಂತೆ ಹಲವಾರು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ಇದಕ್ಕೆ ಪರಿಹಾರ ಹುಡಕಬೇಕಾದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಮ್ಮ ಜವಾಬ್ದಾರಿ ಯನ್ನು ಮರೆತು ಭ್ರಷ್ಟಾಚಾರ ದಲ್ಲಿ ತೊಡಗಿದ್ದಾರೆ. ಇಂತಹ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಜನತೆ ಪಾಠ ಕಲಿಸಬೇಕಿದೆ ಶೌಚಾಲಯ ನಿರ್ಮಾಣದಲ್ಲಿ ಸ್ವತಃ ಸದಸ್ಯರೆ ನೇರ ಫಲಾನುಭವಿಗಳಾಗಿ ಮತ್ತು ಕುಟುಂಬಸ್ಥರನ್ನು ಬಳಕೆ ಮಾಡಿ ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡುವುದರ ಜೊತೆಗೆ ಇತರ ಕಾಮಗಾರಿಯಲ್ಲೂ ಸಾರ್ವಜನಿಕರ ಲಕ್ಷಾಂತರ ರೂಪಾಯಿ ಹಣವನ್ನು ಲಪಟಾಯಿಸಿದ್ದಾರೆ ಎಂದು ಆರೋಪಿಸಿದರು.
ಹೋರಾಟ ವನ್ನು ದಾರಿ ತಪ್ಪಿಸುವ ಕೆಲಸವನ್ನು ಈ ಕೂಡಲೇ ಅಧಿಕಾರಿಗಳು ಕೈ ಬಿಟ್ಟು ಸ್ಥಳಕ್ಕೆ ಬಂದು ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು. ಇಲ್ಲವಾದಲ್ಲಿ ಇಲ್ಲಿ ಆಗು ಹೋಗುವ ಎಲ್ಲಾ ಮುಂದಿನ ಕಾರ್ಯಗಳಿಗೆ ಮೇಲಾಧಿಕಾರಿಗಳೆ ಹೊಣೆಯಾಗುತ್ತಾರೆ. ಜೊತೆಗೆ ಇವರ ನಿರ್ಲಕ್ಷ್ಯ ವನ್ನು ಖಂಡಿಸಿ ಮುಂದೆ ಸೋಮವಾರ ದಿಂದ ಉಪವಾಸವನ್ನು ಆರಂಭಿಸಲಿದ್ದೇವೆ. ಅದಕ್ಕೂ ಸ್ಪಂದಿಸದ ಪಕ್ಷದಲ್ಲಿ ಮುಂದೆ ಕವಿತಾಳ ಬಂದ್ / ರಸ್ತೆ ತಡೆ ಮಾಡಬೇಕಾಗುತ್ತದೆ ಎಂದು ಆಗ್ರಹಿಸಿದರು.
ಈ ಸಂಧರ್ಭದಲ್ಲಿ, DYFI ಅಧ್ಯಕ್ಷರಾದ ರಫೀ ಬೋದೆಲ್, ಜೈ ಭಾರತ್ ಸಂಘಟನೆಯ ಅಧ್ಯಕ್ಷರಾದ ಜಹಾಂಗೀರ್ ಪಾಷ. ಪಟ್ಟಣದ ಮುಖಂಡರಾದ ಭೀಮನಗೌಡ ವಂದ್ಲಿ, ಹಿರಿಯ ಹೋರಾಟಗಾರರಾದ ರಾಮಣ್ಣ ಬಿ.ಎಡ್, ಶಿವಣ್ಣ ವಕೀಲ, ವಾಲ್ಮೀಕಿ ಸಂಘಟನೆಯ ಹನುಮನಗೌಡ ನಾಯಕ, ಜಾವೀದ್ ಎಂ.ಎಸ್, ಶೇಖರಪ್ಪ ಸಾಹುಕಾರ್, ಎಂ.ಡಿ ಮೈಬೂಬ್ ಸಾಬ್, ಕಿರಿಲಿಂಗ ಮ್ಯಾಗಳಮನಿ, ಪ್ರದೀಪ್ ಕುಮಾರ್ ಜಗ್ಲಿ,, ಸೈಯದ್ ಮುನ್ನಾವರ್, ಮಲ್ಲಪ್ಪ ಬಸ್ಸಾಪುರ, ಇರ್ಷಾದ್ ಅಂಜುಮನ್, ಸುರೇಶ, ಬಾಬು, ಮೈಬೂಬ್ ಪಾಷ, ಮೈಬೂಬ್ ಗಣದಿನ್ನಿ, ನಾಗರಾಜ ಸಾಹುಕಾರ್ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…