ಕಲಬುರಗಿ: ಪ್ರಜ್ಞಾ ದಿ ಇನ್ಸ್‌ಟ್ಯೂಟ್ ಆಫ್ ಲರ್ನಿಂಗ್ ಕಲಬುರ್ಗಿ, ಚಾಮ್ಸ್ ಮೈಂಡ್ ಪಾವರ್ ಸಲುಷನ್ ಕಲಬುರ್ಗಿ ಇವರ ಸಹಯೋಗದಲ್ಲಿ ಕೌನ ಬನೆಗಾ ಜ್ಞಾನಪತಿ ಎನ್ನುವ ವಿನೂತನ ವಿಶಿಷ್ಠ ರಸಪ್ರಶ್ನೆ ಕಾರ್ಯಕ್ರಮ ಸಂಗೀತ ಕಲಾ ಮಂಡಳದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕಲಬುರ್ಗಿ ಜಿಲ್ಲಾ ಪಂಚಾಯತ್ ನ ವಿರೋಧ ಪಕ್ಷದ ನಾಯಕರಾದ ಶಿವಾನಂದ ಪಾಟೀಲ ಮರತೂರ ಮಾತನಾಡುತ್ತಾ ಒಟ್ಟಾರೆ ಕರ್ನಾಟಕದ ಪ್ರತಿ ವರ್ಷದ ಫಲಿತಾಂಶ ಗಮನಿಸಿದಾಗ ಕಲ್ಯಾಣ ಕರ್ನಾಟಕದ ಫಲಿತಾಂಶ ಕಡಿಮೆಯಿದೆ. ಸಾರ್ವಜನಿಕರು, ಶಿಕ್ಷಣ ಪ್ರೇಮಿಗಳು ಧನಾತ್ಮಕ ಮನಸ್ಸು ಮಾಡಿದರೆ ಫಲಿತಾಂಶ ಸುಧಾರಣೆಯಲ್ಲಿ ಕೈಜೋಡಿಸಬೇಕಾದ ಅತ್ಯಂತ ಅಗತ್ಯವಿದೆ. ಈ ಕೌನ ಬನೇಗಾ ಜ್ಞಾನಪತಿ ಕಾರ್ಯಕ್ರಮವು ವಿಧ್ಯಾರ್ಥಿಗಳ ಪಾಲಿಗೆ ಪರೀಕ್ಷಾ ದಾರಿದೀಪವಾಗಲಿದೆ. ನಮ್ಮ ವಿಧ್ಯಾರ್ಥಿಗಳಿಗೆ ಮಾತನಾಡುವ ಪರೀಕ್ಷೆ ಎದುರಿಸುವ ಧೈರ್ಯ ತುಂಬಬೇಕಿದೆ ಇದು ಈ ಕಾರ್ಯಕ್ರಮದ ಮೂಲ ನೆರವೇರುತ್ತದೆ ಎಂದು ಅಭಿಪ್ರಾಯ ಪಟ್ಟರು.
ಶಿಕ್ಷಣ ಪ್ರೇಮಿ ಅಜೀತ್ ಕುಮಾರ ಮಾತನಾಡಿ ಇಂತಹ ವಿಶೇಷಕಾರ್ಯಕ್ರಮಗಳು ನಮ್ಮ ಭಾಗಕ್ಕೆ ಅವಶ್ಯಕತೆಯಿವೆ. ಮಕ್ಕಳು ಹೆದರದೆ ಪರೀಕ್ಷೆ ಬರೆಯಲು ಪೂರಕವಾದ ಕಾರ್ಯಕ್ರಮವಿದು. ಇಂತಹ ಕೆಲಸಕ್ಕೆ ನಾವೆಲ್ಲರೂ ಕೈಜೋಡಿಸುವ ಮೂಲಕ ಮಕ್ಕಳಿಗೆ ಪರೀಕ್ಷೆಗೆ ತಯಾರಿಗೊಳಿಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದ ವಿಜಯಲಕ್ಷ್ಮಿ ಬಿ. ಅವರು ಕಲ್ಯಾಣ ಕರ್ನಾಟಕದ ಹತ್ತನೇಯ ತರಗತಿಯ ಫಲಿತಾಂಶ ಸುಧಾರಿಸುವುದಕ್ಕಾಗಿ ಸರಕಾರ ಅನೇಕ ಕೆಲಸಗಳನ್ನು ಮಾಡುತ್ತಿದೆ ಅದೇ ರೀತಿಯಲ್ಲಿ ಈ ಕಾರ್ಯಕ್ರಮವು ಮಕ್ಕಳಿಗೆ ಸಾಥ್ ನೀಡಲಿದೆ. ಭಾಗದ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು, ಸಭಾ ಕಂಪನ ಹೋಗಲಾಡಿಸುವುದು, ಈ ಕಾರ್ಯಕ್ರಮ ಸಹಕಾರವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಣ ತಜ್ಞ ಕೆ.ಎಂ.ವಿಶ್ವನಾಥ ಮರತೂರ. ಅವರು ಈ ಕಾರ್ಯಕ್ರಮದ ಮೂಲಕ ನಾವು ವಯಕ್ತಿಕವಾಗಿ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವುದು, ಪರೀಕ್ಷೆಯ ಬಗ್ಗೆ ಧೈರ್ಯ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಮೂಲಕ ಹತ್ತನೇಯ ತರಗತಿಯ ಮಕ್ಕಳಲ್ಲಿ ಓದುವ ಚಿಂತನೆಗೆ ಅವಕಾಶ ಮಾಡಿಕೊಡುವುದು. ಮಕ್ಕಳು ಧೈರ್ಯವಾಗಿ ಪರೀಕ್ಷೆ ಎದುರಿಸಲು ಆತ್ಮಸ್ಥೈರ್ಯ ಹೆಚ್ಚಿಸುವುದು. ಪರೀಕ್ಷಾ ಟಿಪ್ಸ್, ಮೌಲ್ಯಮಾಪನ, ಪರೀಕ್ಷಾ ಬ್ಲೂಪ್ರಿಂಟ್ ಅವಶ್ಯಕವಾದ ಅಧ್ಯಾಯಗಳು ಇತ್ಯಾದಿ ಮಾಹಿತಿಗಳತ್ತ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಚಾಮರಾಜ್ ದೊಡ್ಡಮನಿ ಮಾತನಾಡಿದರು. ಹಿರಿಯ ಸಾಹಿತಿ ಪಿ.ಎಂ.ಮಣ್ಣೂರು, ಇಮಾಮ್ ಪಟೇಲ್, ವಿಜಯಕುಮಾರ, ರಿಯಾಜ್ ಪಟೇಲ್, ಶಾಂತೇಶ,ಉಷಾದೇವಿ ಹಾಜರಿದ್ದರು. ಕಾಶಿನಾಥ ಮರತೂ ರನಿರೂಪಿಸಿದರೆ ಮಲ್ಲಿನಾಥ ವಂದಿಸಿದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…