ಸುರಪುರ: ಕಳೆದ ಒಂದುವರೆ ವರ್ಷದಲ್ಲಿ ಸುಮಾರು ಆರು ಏಳು ಕೊಲೆಗಳು ನಡೆದಿವೆ ಆದರೆ ಅವೆಲ್ಲವು ಅಸಹಜ ಸಾವುಗಳೆಂದು ಪೊಲೀಸರು ವರದಿ ಮಾಡಿ ಮುಚ್ಚಿ ಹಾಕುತ್ತಿದ್ದಾರೆ.ತಾಲೂಕಿನಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ನಿಷ್ಕ್ರೀಯಗೊಂಡಿದೆ ಹಾಗು ಕಾನೂನು ಸುವ್ಯವಸ್ಥೆಯು ಹದಗೆಟ್ಟಿದೆ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಆರೋಪಿಸಿದರು.
ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮಾರನಾಳ ಕ್ರಾಸ್‌ಲ್ಲಿ ಅಪ್ಪು ರಾಠೋಡ ಕೊಲೆಯಾಗಿದೆ,ಕುರೆಕನಾಳದಲ್ಲಿ ಜುಮ್ಮಣ್ಣ ಎಂಬುವರ ಕೊಲೆಯಾಗಿದೆ,ಬರದೇವನಾಳದಲ್ಲಿ ಒಂದು ಕುರುಬ ಸಮುದಾಯದ ಮತ್ತೊಂದು ವಾಲ್ಮೀಕಿ ಸಮುದಾಯದ ಎರಡು ಕೊಲೆಗಳಾಗಿವೆ,ಕೊರಟ್ಟಿಯಲ್ಲಿ ಒಂದು ಕೊಲೆಯಾಗಿದೆ,ನಾಲತವಾಡ ಮಾರ್ಗದ ಕೆನಾಲದಲ್ಲಿ ಹುಸೇನ ಎಂಬ ಯುವಕನ ಕೊಲೆ ಮಾಡಿ ಎಸೆಯಲಾಗಿತ್ತು ಇವೆಲ್ಲವನ್ನೂ ಅಸಹಜ ಸಾವುಗಳೆಂದು ಪೊಲೀಸರು ಷರಾ ಬರೆದಿದ್ದಾರೆ.ಅಲ್ಲದೆ ಬೊಮ್ಮನಹಳ್ಳಿ ಲಕ್ಷ್ಮೀಪುರದಲ್ಲಿ ನಡೆದ ೩೫೪ ಮತ್ತು ೩೦೭ ಕಲಂ ಕೇಸುಗಳಲ್ಲಿ ಪ್ರತಿ ದೂರು ದಾಖಲಿಸಿಕೊಂಡು ಇದುವರೆಗೂ ಒಬ್ಬ ಆರೋಪಿಯನ್ನೂ ಬಂಧಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ.ಇವೆಲ್ಲವನ್ನೂ ನೋಡಿದಾಗ ಪೊಲೀಸ್ ಇಲಾಖೆ ಹೇಗೆ ಕೆಲಸ ಮಾಡುತ್ತಿದೆ ಎಂಬುದಕ್ಕೆ ಉದಾಹರಣೆಗಳಾಗಿವೆ ಎಂದರು.
ಇನ್ನು ನವೆಂಬರ್ ೨೨ರ ರಾತ್ರಿ ಕೊಡೇಕಲ್‌ನಲ್ಲಿ ಹುಟ್ಟು ಹಬ್ಬದ ಬ್ಯಾನರ್ ಹಾಕುತಿದ್ದ ಯುವಕರ ಮೇಲೆ ಹಾಲಿ ಶಾಸಕರ ಸಹೋದರ ಹನುಮಂತ ನಾಯಕ(ಬಬ್ಲುಗೌಡ) ಕೆಲ ಯುವಕರೊಂದಿಗೆ ಸೇರಿ ಬ್ಯಾನರ್ ಕಟ್ಟುತ್ತಿದ್ದ ಯುವಕರ ಮೇಲೆ ಹಲ್ಲೆ ಮಾಡಿದ್ದಲ್ಲದೆ ಅವರ ಮೊಟರ್ ಬೈಕ್‌ಗಳನ್ನು ಸುಟ್ಟು ಕೆನಾಲಿಗೆ ಎಸೆಯಲಾಗಿದೆ.ಇದರಿಂದ ಯುವಕರು ಪ್ರಾಣ ಭಯದಿಂದ ನಮ್ಮ ಕಾರ್ಯಕರ್ತರು ಅಲ್ಲಿಯಿಲ್ಲಿ ಅವಿತು ಕುಳಿತವರನ್ನು ಪೊಲೀಸರು ರಕ್ಷಣೆ ಮಾಡಿ ಕರೆತಂದಿದ್ದಾರೆ.ಇದೆಲ್ಲವನ್ನು ತಿಳಿಸಿ ಪೊಲೀಸರಿಗೆ ದೂರು ನೀಡಿ ಇಪ್ಪತ್ತು ದಿನಗಳಾಗುತ್ತಿದ್ದರು ಇದುವರೆಗೆ ಯಾವ ಆರೋಪಿಗಳನ್ನೂ ಪೊಲೀಸರು ಬಂಧಿಸಿಲ್ಲ.ಇದನ್ನ ಕುರಿತು ಕೇಳಿದರೆ ಶಾಸಕರ ಸಹೋದರರು ಎಂದು ಸಬೂಬು ಹೇಳುತ್ತಾರೆ.ಇದರಿಂದ ನಮ್ಮ ಕಾರ್ಯಕರ್ತರಲ್ಲಿ ಪ್ರಾಣಭಯ ಉಂಟಾಗಿದೆ.ಈ ಪ್ರಕರಣ ಕುರಿತು ಅಲ್ಲಿಯ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠರಿಗೆ (ಎಸ್.ಪಿ) ಸುಳ್ಳು ಮಾಹಿತಿ ನೀತಿ ಕೇಸು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.ಆದ್ದರಿಂದ ಯಾದಗಿರಿ ಎಸ್.ಪಿಯವರಿಗೆ ಒತ್ತಾಯ ಮಾಡುತ್ತಿದ್ದು ಯಾರು ನಮ್ಮ ಕಾರ್ಯಕರ್ತರ ಮೇಲೆ ಗೂಂಡಾಗಿರಿ ಮಾಡಿದ್ದಾರೆ ಅವರೆಲ್ಲರನ್ನೂ ಕೂಡಲೆ ಬಂಧಿಸಬೇಕು.ಒಂದು ವಾರದೊಳಗೆ ಬಂಧಿಸುವಂತೆ ಒತ್ತಾಯಪಡಿಸಿದರು.
ಈ ಘಟನೆ ನಡೆದ ದಿನ ರಾತ್ರಿ ನನ್ನ ಮಗ ಸುರಪುರದಲ್ಲಿಯೇ ನಮ್ಮ ಮನೆಯಲ್ಲಿದ್ದು ಪೊಲೀಸರಿಂದ ನಿರಂತರವಾಗಿ ಘಟನೆಯ ಕುರಿತು ಮಾಹಿತಿ ಪಡೆದಿದ್ದಾರೆ.ಆದರೆ ಅಲ್ಲಿರುವ ಶಾಸಕರ ಸಹೋದರರು ನಮ್ಮ ಮಗ ರಾಜಾ ವೇಣುಗೋಪಾಲ ನಾಯಕರ ಮೇಲೆ ಸುಳ್ಳು ಪ್ರತಿದೂರು ನೀಡಿದ್ದಾರೆ.ನಮ್ಮ ಕಾರ್ಯಕರ್ತರು ಮತ್ತು ಮಗನ ಮೇಲೆ ದಾಖಲಿಸಲಾದ ಸುಳ್ಳು ದೂರನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು.
ಸುಮಾರು ಹದಿನೇಳು ವರ್ಷಗಳಿಂದ ಆ ಭಾಗದ ಜನರು ಭಯದಲ್ಲಿ ಕಾಲ ಕಳೆಯುವಂತಾಗಿದೆ.ಇದನ್ನು ತಡೆಯಲು ಎಸ್.ಪಿಯವರು ಕೂಡಲೆ ಕೊಡೇಕಲ್ ಪಿಎಸ್‌ಐಯವರನ್ನು ಅಮಾನತ್ತು ಮಾಡಬೇಕು.ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸಬೇಕು,ಈ ಪ್ರಕರಣವನ್ನು ಬೇರೆ ಕಡೆಯ ಅಧಿಕಾರಿಗಳಿಂದ ತನಿಖೆ ಮಾಡಿಸಬೇಕು.ಸ್ಥಳಿಯ ಅಧಿಕಾರಿಗಳಿಂದ ತನಿಖೆ ಮಾಡಿಸಿದರೆ ನಿಷ್ಪಕ್ಷಪಾತ ತನಿಖೆ ಅಸಾಧ್ಯವಾದ್ದರಿಂದ ಹೊರಗಿನ ಅಧಿಕಾರಿಗಳಿಂದ ತನಿಖೆ ಮಾಡಿಸುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ವಿಠ್ಠಲ ಯಾದವ್,ರಾಜಾ ವೇಣುಗೋಪಾಲ ನಾಯಕ,ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ ಇತರರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…