ಬಿಸಿ ಬಿಸಿ ಸುದ್ದಿ

ಸಂವಿಧಾನ ಜಾತ್ಯಾತೀತ ಪ್ರಜಾಪ್ರಭುತ್ವ ವಿರೋಧಿ ಪೌರತ್ವ ಕಾಯ್ದೆ ವಿರೋಧಿಸಿ ಎಡ ಪಕ್ಷಗಳಿಂದ ಕಲಬುರಗಿಯಲ್ಲಿ ಪ್ರತಿಭಟನೆ ಸಿಪಿಐಎಂ ಮುಖಂಡರ ಬಂಧನ

ಕಲಬುರಗಿ: ಸಂವಿಧಾನ ವಿರೋಧಿ, ಜಾತ್ಯಾತೀತ ಪ್ರಜಾಪ್ರಭುತ್ವ ವಿರೋಧಿ ಪೌರತ್ವ (ತಿದ್ದುಪಡಿ) ಕಾಯ್ದೆ- ಸಿ.ಎ.ಎ ಮತ್ತು ರಾಷ್ಟ್ರೀಯ ಪೌಲತ್ತ ನೋಂದಣಿ-ಎನ್ ಆರ್ ಸಿ ವಿರೋಧಿಸಿ ಅಖಿಲ ಭಾರತ ಪ್ರತಿಭಟನಾ ದಿನವನ್ನಾಗಿ ಆಚರಿಸುತ್ತಿದ್ದು, ಪೌರತ್ವ (ತಿದ್ದುಪಡಿ) ಕಾಯ್ದೆ- ಸಿ.ಎ.ಎ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ -ಎನ್ ಆರ್ ಸಿ ವಿರುದ್ದ ಇಂದು ಡಿಸೆಂಬರ್ 19 ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ದೇಶದ ಎಡಪಕ್ಷಗಳು ಕರೆ ನೀಡಿರುವ ಹಿನ್ನಲೆಯಲ್ಲಿ ಕಲಬುರಗಿ ನಗರದ ಸರ್ದಾರ ವಲ್ಲಬ ಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಮೆರವಣಿಗೆ ನಡೆಸಿ  ಕಾಯ್ದೆ ಪ್ರತಿಗಳ ಪ್ರತಿಕೃತಿ ದಹನ ಮಾಡುವ ಮೂಲಕ ಪ್ರತಿಭಟನೆ ನಡೆಯಿತು.

ಸಂಸತ್ತಿನ ಎರಡೂ ಸದನಗಳಲ್ಲಿ ಈ ಸಿಎಬಿಯನ್ನು ಪಾಸು ಮಾಡಿವೆ. ಈ ಮಸೂದೆ ಭಾರತೀಯ ಸಂವಿಧಾನದ ಸಂಪೂರ್ಣ ಉಲ್ಲಂಘನೆಯಾಗಿದೆ, ಭಾರತೀಯ ಗಣತಣತ್ರದ ಪ್ರಜಾಸತ್ತಾತ್ಮಕ ಬುನಾದಿಯನ್ನು ನಾಶಪಡಿಸುವದೇ ಅದರ ಉದ್ದೇಶವಾಗಿದೆ. ಎಡಪಕ್ಷಗಳು ಮತ್ತು ಜಾತ್ಯಾತೀತ ಪ್ರಜಾಸತ್ತಾತ್ಮಕ ಸಂಘಟನೆಗಳು ಬಲವಾಗಿ ವಿರೋಧಿಸುತ್ತದೆ ಎಂದು ಸಿಪಿಐಎಂ ಜಿಲ್ಲಾ ಮುಖಂಡರಾದ ಸರಬಸಪ್ಪ ಮಮಶೇಟಿ ಹೇಳಿದರು.

ಪೌರತ್ವವನ್ನು ಒಬ್ಬ ವ್ಯಕ್ತಿಯ ಧಾರ್ಮಿಕ ನೆಲೆಯೊಂದಿಗೆ ಜೋಡಿಸುತ್ತದೆ, ಇದು ದೇಶದ ಜಾತ್ಯಾತೀತ ಪ್ರಜಾಪ್ರಭುತ್ವಕ್ಕೆ ತದ್ವಿರುದ್ದವಾಗಿದೆ. ದೇಶದಲ್ಲಿ ಕೋಮು ವಿಭಜನೆ ಮತ್ತು ಸಾಮಾಜಿಕ ದ್ರುವೀಕರಣವನ್ನು ಇನ್ನಷ್ಟು ತೀಕ್ಷಗೊಳಿಸುವದು ಈ ಕಾಯ್ದೆಯ ಉದ್ದೇಶವಾಗಿದೆ. ಇದು ನಮ್ಮ ದೇಶದ ಐಕ್ಯತೆ ಮತ್ತು ಸಮಗ್ರತೆಗೆ ಅತ್ಯಂತ ಅಪಾಯಕಾರಿಯಾಗಿದೆ. ಇಂತಹ ಮಸೂದೆ ಪಾಸಾಗಿರುವದು, ಮತ್ತು ಎನ್.ಆರ್.ಸಿ ಯನ್ನು ಇಡೀ ದೇಶಕ್ಕೆ ವಿಸ್ತರಿಸಲಾಗುವದು ಎಂದು ಮೋದಿ-ಶಾ ಸರಕಾರ ಸಾರಿರುವದು ಭಾರತೀಯ ಗಣತಂತ್ರದ ಸ್ವರೂಪವನ್ನೇ ಬದಲಿಸುವ ದುರುದ್ದೇಶ ಹೊಂದಿದೆ. ಇದು ನಮ್ಮ ಜಾತ್ಯಾತೀತ ಪ್ರಜಾಪ್ರಭುತ್ವ ಗಣತಂತ್ರವನ್ನು ಹಿಂದೂ ರಾಷ್ಟ್ರವಾಗಿ ಪರಿವರ್ತಿಸುವ ಆರ್.ಎಸ್.ಎಸ್.ನ ರಾಜಕೀಯ ಯೋಜನೆಯಾಗಿದೆ ಎಂದರು.

ಕಾಯ್ದೆ ಜಾರಿಯಾದರೆ ಈ ದೇಶದ ಮೂಲ ನೀವಾಸಿಗಳಾದ ಆದಿವಾಸಿ ಸಮುದಾಯವೇ ತಮ್ಮ ಪೌರತವನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ, ಏಕೆಂದರೆ ಅವರ ಬಳಿ ತಾವು ಈ ದೇಶದ ನಾಗರೀಕರೆಂದು ಹೇಳಿಕೊಳ್ಳಲು ಯಾವ ದಾಖಲೆಗಳೂ ಇರುವದಿಲ್ಲಾ, ಎರಡನೇ ಅತಿ ದೊಡ್ಡ ಹೊಡೆತ ಬೀಳುವದು ಈ ದೇಶದ ಅಲೆಮಾರಿ ಜನಾಂಗಗಳಿಗೆ ಹಾಗೂ ಯಾವದೇ ದಾಖಲಾತಿಗಳನ್ನು ಹೋದಿರದೇ ದುಡಿದು ತಿನ್ನುವ ಅತ್ಯಂತ ಕಡು ಬಡವರಿಗೆ ಮತ್ತು ಮುಸಲ್ಮಾನರಿಗೆ, ಈ ಕರಾಳ ಕಾಯ್ದೆಯನ್ನು ಈ ದೇಶದ ಬಹುಸಂಖ್ಯಾತರಿಗೆ ಇದು ಮುಸ್ಲಿಂ ವಿರೋಧಿಯೆಂಬ ಭ್ರಮೆಯನ್ನು ಹುಟ್ಟಿಸಿ ದೇಶವನ್ನು ಮತೀಯವಾಗಿ ವಿಭಜಿಸುವ ಆರ್.ಎಸ್.ಎಸ್.ನ ಹುನ್ನಾರವಾಗಿದೆ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಇದರ ವಿರುದ್ದ ಡಿಸೆಂಬರ್ 19, 2019 ರಂದು ಇ ದೇಶದ ಜನತೆ ನಡೆಸುತ್ತಿರುವ ತೀವ್ರ ಹೋರಾಟದೊಂದಿಗೆ ಕಲಬುರಗಿ ನಗರದ ಜನತೆಯ ಪರವಾಗಿ ಎಡಪಕ್ಷಗಳ ಪ್ರತಿನಿಧಿಗಳಾದ ನಾವು ಈ ಕರಾಳ ಮತ್ತು ಸಂವಿಧಾನ ವಿರೋಧಿ ಕಾಯ್ದೆಯ ಪ್ರತಿಯನ್ನು ಸುಡುವದರ ಮೂಲಕ ಇದನ್ನು ನಾವು ಒಪ್ಪುವದಿಲ್ಲ ಎಂಬ ಸ್ಪಷ್ಟ ಸಂದೇಶ ನೀಡುತ್ತದೆ ಎಂದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

37 mins ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

38 mins ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

41 mins ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

17 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

19 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago