ಸುರಪುರ: ಚಂದ್ರಕಾಂತ ಕರದಳ್ಳಿಯವರು ಕೇವಲ ಸಾಹಿತಿ ಮಾತ್ರವಾಗಿರದೆ ಅವರೊಳಗೊಬ್ಬ ಸಮಾಜಪರವಾದ ರೈತಪರವಾದ ಮನಸ್ಸಿತ್ತು ಎಂದು ಕರ್ನಾಟಕ ರಾಜ್ಯ ರೈತ ಸಂಘದ ವಿಭಾಗಿಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿದರು.
ನಗರದ ಗಾಂಧಿ ವೃತ್ತದಲ್ಲಿರುವ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ಕಚೇರಿಯಲ್ಲಿ ಹಿರಿಯ ಸಾಹಿತಿ ಚಂದ್ರಕಾಂತ ಕರದಳ್ಳಿಯವರಿಗೆ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ಕರದಳ್ಳಿಯವರು ಒಬ್ಬ ಸಾದಾ ಸೀದಾ ಪ್ರಾಮಾಣಿಕ ವ್ಯಕ್ತಿ.ಅವರ ನಡೆ ನುಡಿಗಳು ಅನೇಕರಿಗೆ ಮಾದರಿಯಾಗಿವೆ.ಅವರು ಕೇವಲ ಶಿಕ್ಷಕರಾಗಿದರೆ ಅವರೊಳಗೊಬ್ಬ ಹೋರಾಟಗಾರನಿದ್ದ.ಈ ಮುಂಚೆ ಪೇರಿಯಾರ ವೇದಿಕೆಯ ಮೂಲಕ ಹಾಗು ಕರ್ನಾಟಕ ರಾಜ್ಯ ರೈತ ಸಂಘದ ಹೋರಾಟದಲ್ಲಿ ಪ್ರೊ ನಂಜುಂಡಸ್ವಾಮಿ ಲಿಂಗಣ್ಣ ಸತ್ಯಂಪೇಟೆ,ಮೈಲಾರಪ್ಪ ಸಗರರಂತಹ ಅನೇಕರ ಒಡನಾಟದಲ್ಲಿ ರೈತ ಹೋರಾಟದಲ್ಲಿ ಭಾಗವಹಿಸಿದವರು.
ಅವರನ್ನು ಮಕ್ಕಳ ಸಾಹಿತಿ ಎಂದು ಜನತೆ ಪ್ರೀತಿಯಿಂದ ಕರೆಯುತ್ತಾರೆ ಆದರೆ ಅವರೊಬ್ಬ ಮಕ್ಕಳ ಸಾಹಿತ್ಯದ ಜೊತೆಗೆ ಸೃಜನಶೀಲ ಸಮಾಜಮುಖಿ ಬರಹಗಾರರು.ಅವರು ಬರೆದ ನಲವತ್ತಕ್ಕು ಹೆಚ್ಚಿನ ಕೃತಿಗಳಲ್ಲಿ ಇಪ್ಪತ್ತೈದಕ್ಕು ಹೆಚ್ಚಿನ ಕೃತಿಗಳು ಮಕ್ಕಳ ಸಾಹಿತ್ಯದ ಕುರಿತಾಗಿದ್ದರೆ.ಇನ್ನುಳಿದವು ಸಮಾಜಪರ ಚಿಂತನೆಯ ಕೃತಿಗಳಾಗಿವೆ.ಅಂತಹ ಮಹಾನ್ ಚೇತನ ಇಂದು ನಮ್ಮನ್ನೆಲ್ಲ ಅಗಲಿದ್ದು ಕಲ್ಯಾಣ ಕರ್ನಾಟಕ ಭಾಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ತಾಲೂಕು ಅಧ್ಯಕ್ಷ ರಾಜು ಕುಂಬಾರ ಮಾತನಾಡಿ,ಚಂದ್ರಕಾಂತ ಕರದಳ್ಳಿಯವರು ಅನೇಕರಿಗೆ ಶಿಕ್ಷಕರಾಗಿ ಸಾಹಿತಿಗಳಾಗಿ ಮಾತ್ರ ಗೊತ್ತಿದೆ.ಆದರೆ ಅವರೊಬ್ಬ ಪತ್ರಕರ್ತರಾಗಿದ್ದರು ಎನ್ನುವ ವಿಷಯ ಅನೇಕರಿಗೆ ತಿಳಿದಿಲ್ಲ.ವಿಶ್ವನಾಥರಡ್ಡಿ ಮುದ್ನಾಳರ ಜೊತೆಗೆ ವಿಶ್ವ ಕಲ್ಯಾಣ ಪತ್ರಿಕೆಯ ಸಹ ಸಂಪಾದಕರಾಗಿ ಕೆಲಸ ಮಾಡಿ ಸಮಾಜಕ್ಕೆ ದುಡಿಯದ ಮಹನಿಯರು.ಅವರ ಅಗಲಿಕೆಯಿಂದ ಸಾರಸ್ವತ ಲೋಕ ಬಡವಾಗಿದೆ ಎಂದರು.
ಸಭೆಯ ಆರಂಭದಲ್ಲಿ ಚಂದ್ರಕಾಂತ ಕರದಳ್ಳಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಹೂ ಮಾಲೆ ಹಾಕಿ ಎರಡು ನಿಮಿಷಗಳ ಮೌನಾಚರಣೆ ನಡೆಸಿ ಗೌರವ ನಮನ ಸಲ್ಲಿಸಲಾಯಿತು.ಸಭೆಯಲ್ಲಿ ಪತ್ರಕರ್ತರಾದ ಮಲ್ಲು ಗುಳಗಿ,ಸೋಮಶೇಖರ ನರಬೋಳಿ,ಮಹಾದೇವಪ್ಪ ಬೊಮ್ಮನಹಳ್ಳಿ,ಹೊನ್ನಪ್ಪ ತೇಲ್ಕರ್,ಮಲ್ಲಿಕಾರ್ಜುನ ತಳ್ಳಳ್ಳಿ ಹಾಗು ಮುಖಂಡರುಗಳಾದ ವಕೀಲ ಮಲ್ಲಿಕಾರ್ಜುನ ಹಿರೇಮಠ,ಶಿವರಾಜಕುಮಾರ ಪಾಣೆಗಾಂವ,ಬಸವರಾಜ ಮುದಗಲ್,ರಾಹುಲ್ ಹುಲಿಮನಿ,ಯಲ್ಲಪ್ಪ ಚಿನ್ನಾಕಾರ,ಆಸೀಫ್ ಯಾದಗಿರಿ,ತೋಫಿಕ್ ಅಹ್ಮದ್,ಭಾಗನಾಥ ನಾಯಕ,ಮಹ್ಮದ್ ಗೌಸ್ ಸಾಹುಕಾರ,ನಂದಪ್ಪ ಚಿಕ್ಕನಹಳ್ಳಿ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…