ಕಲಬುರಗಿ: ಪೌರತ್ವ ತಿದ್ದುಪಡಿ ಮಸೂದೆಯ ಹಿನ್ನೆಲೆಯಲ್ಲಿ ಕಾನೂನು ಹಾಗೂ ಸುವ್ಯವಸ್ಥೆಯನ್ನು ಎಲ್ಲರೂ ಕಾಪಾಡಿಕೊಂಡು ಹೋಗಬೇಕು. ಒಂದು ವೇಳೆ ಕಾನೂನು ಕೈಗೆತ್ತಿಕೊಂಡರೆ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಮೀಸಲು ಪಡೆಯ ಹೆಚ್ಚುವರಿ ಪೋಲಿಸ್ ಮಹಾನಿರ್ದೇಶಕ ಅಲೋಕಕುಮಾರ್ ಅವರು ಇಲ್ಲಿ ಎಚ್ಚರಿಸಿದರು.
ಪರಿಸ್ಥಿತಿಯ ಅವಲೋಕಿಸಲು ಶುಕ್ರವಾರ ನಗರಕ್ಕೆ ಆಗಮಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರವು ಕೋಮುಸಾರಸ್ಯಕ್ಕೆ ಹೆಸರಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸಲಾರವು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾನೂನಿನ ಪ್ರಕಾರ ಎಲ್ಲರೂ ನಡೆದುಕೊಳ್ಳಬೇಕು. ಪಿತೂರಿ ಮಾಡುವವರ ಮೇಲೆ ಹದ್ದಿನ ಕಣ್ಣಿಟ್ಟಿದ್ದೇವೆ. ಯಾರೂ ಕಾನೂನು ಕೈಗೊಳ್ಳುವಂತಿಲ್ಲ ಎಂದು ಅವರು ಹೇಳಿದರು.
ಕಳೆದ ಗುರುವಾರ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಸಹ ಬೃಹತ್ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಂಡಿರುವ ಕುರಿತು ನನಗೆ ಸರಿಯಾದ ಮಾಹಿತಿ ಇಲ್ಲ. ಸಹಸ್ರಾರು ಜನ ಹೋರಾಟದಲ್ಲಿ ಭಾಗವಹಿಸಿದ್ದರ ಹಿನ್ನೆಲೆಯಲ್ಲಿ ಹೋರಾಟನಿರತ ಮುಖಂಡರೊಂದಿಗೂ ಮಾತನಾಡುತ್ತೇನೆ. ಇನ್ನೊಮ್ಮೆ ಕಾನೂನು ಅಂತಹ ಘಟನೆಗಳು ಮರುಕಳಿಸಬಾರದು ಎಂದು ಅವರು ತಿಳಿಸಿದರು.
ವಿವಿಧೆಡೆ ಭೇಟಿ: ಅಲ್ಪಸಂಖ್ಯಾತ ಮುಸ್ಲಿಂರೇ ಹೆಚ್ಚು ವಾಸಿಸುತ್ತಿರುವ ಮುಸ್ಲಿಂ ಚೌಕ್, ದರ್ಗಾ ಪ್ರದೇಶ ಮುಂತಾದೆಡೆ ಅಲೋಕಕುಮಾರ್ ಅವರು ಭೇಟಿ ನೀಡಿ, ಅಲ್ಲಿನ ವರ್ತಕರನ್ನು ಹಾಗೂ ಸಾರ್ವಜನಿಕರನ್ನು ಆತ್ಮೀಯವಾಗಿ ಮಾತನಾಡಿದರು. ಹೇಗೆ ವ್ಯಾಪಾರ ನಡೆದಿದೆ. ಚೆನ್ನಾಗಿದ್ದೀರಾ ಎಂದು ವರ್ತಕರನ್ನು ಕೇಳಿದರು. ರಸ್ತೆ ಬದಿಯಲ್ಲಿನ ಟೀ ಸ್ಟಾಲ್‌ನಲ್ಲಿ ಚಹಾ ಕೂಡ ಕುಡಿದರು. ವರ್ತಕರೂ ಸಹ ಅಲೋಕಕುಮಾರ್ ಅವರೊಂದಿಗೆ ಆತ್ಮೀಯತೆಯಿಂದಲೇ ಮಾತನಾಡಿದರು. ವಿಚಾರಣೆಗೆಂದು ಬಂದರೂ ಸಹ ಅಲೋಕಕುಮಾರ್ ಅವರಿಗೆ ಮುಸ್ಲಿಂ ಸಮುದಾಯದ ವರ್ತಕರು ಸನ್ಮಾನಗಳನ್ನು ಮಾಡಿದ್ದು ವಿಶೇಷ ಗಮನಸೆಳೆಯಿತು.
ಅಲೋಕಕುಮಾರ್ ಅವರು ಈ ಹಿಂದೆ ಈಶಾನ್ಯ ಪೋಲಿಸ್ ಮಹಾನಿರೀಕ್ಷಕರಾಗಿ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದರು. ಅದರಲ್ಲಿಯೂ ಐಜಿಪಿಯಾಗಿ ಅಲೋಕಕುಮಾರ್ ಅವರು ಕೇವಲ ನಗರ ಅಷ್ಟೇ ಅಲ್ಲ, ಇಡೀ ಈಶಾನ್ಯ ವಲಯದಲ್ಲಿ ಸುರಕ್ಷಿತ ಸಾರಿಗೆ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಜನಸ್ನೇಹಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದ್ದರು.
ಅಷ್ಟೇ ಅಲ್ಲದೇ ಕೋಮು ಪ್ರಚೋದನೆ ಮಾಡುವ ಧರ್ಮ ಗುರುಗಳ ವಿರುದ್ಧವೂ ಒಂದು ಹಂತದಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮವನ್ನು ಜಾರಿಗೊಳಿಸುವ ಮೂಲಕ ಅಲೋಕಕುಮಾರ್ ಅವರು ಪೋಲಿಸ್ ಇಲಾಖೆಯಲ್ಲಿಯೇ ಖಡಕ್ ಅಧಿಕಾರಿ ಎಂದು ಕರೆಸಿಕೊಂಡಿದ್ದರು.
ಈ ಸಂದರ್ಭದಲ್ಲಿ ನಗರ ಪೋಲಿಸ್ ಆಯುಕ್ತ ಎಂ.ಎನ್. ನಾಗರಾಜ್ ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…