ಕಲಬುರಗಿ: ಮೂವರು ಮಕ್ಕಳೊಂದಿಗೆ ಮಹಿಳೆಯೊಬ್ಬಳು ನಾಪತ್ತೆಯಾದ ಘಟನೆ ಜಿಲ್ಲೆಯ ಚಿತ್ತಾಪೂರ್ ತಾಲ್ಲೂಕಿನ ವಾಡಿ ಪಟ್ಟಣದಲ್ಲಿ ವರದಿಯಾಗಿದೆ. ಸಿದ್ದಮ್ಮ ಗಂಡ ಚಂದ್ರಶೇಖರ್ ಬೆಣ್ಣೂರ್ (೩೦) ಹಾಗೂ ಆಕೆಯ ಪುತ್ರಿಯರಾದ ೮ ವರ್ಷದ ಗೌರಿ, ಒಂದು ವರ್ಷದ ಆರಾಧನಾ ಹಾಗೂ ಏಳು ವರ್ಷ ವಯಸ್ಸಿನ ಗಣೇಶ್ ಅವರೊಂದಿಗೆ ನಾಪತ್ತೆಯಾಗಿದ್ದಾಳೆ.
ಸಿದ್ದಮ್ಮಳ ಪತಿ ಚಂದ್ರಶೇಖರ್ ವಾಡಿ ಪಟ್ಟಣದ ಜಯಲಕ್ಷ್ಮೀ ಟ್ರಾನ್ಸ್‌ಪೋರ್ಟ್‌ನಲ್ಲಿ ನೌಕರಿ ಮಾಡುತ್ತಿದ್ದು, ಪತ್ನಿ, ಮೂವರು ಮಕ್ಕಳು ಹಾಗೂ ತಂದೆಯೊಂದಿಗೆ ವಾಡಿಯಲ್ಲಿಯೇ ವಾಸವಾಗಿದ್ದು, ಎಂದಿನಂತೆ ಕಳೆದ ೩ರಂದು ಕೆಲಸಕ್ಕೆ ಹೋಗುವಾಗ ಪುತ್ರಿ ಗೌರಿಗೆ ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಆಕೆಯನ್ನು ಆಸ್ಪತ್ರೆಗೆ ತೋರಿಸಿಕೊಂಡು ಬರಲು ಹೇಳಿ ಕೆಲಸಕ್ಕೆ ಹೋದ. ನಂತರ ವಾಡಿಯಿಂದ ವಿಜಯಪೂರಕ್ಕೆ ಕೆಲಸದ ಮೇಲೆ ಹೋಗಿ, ಪತ್ನಿಗೆ ಪುತ್ರಿಯನ್ನು ಆಸ್ಪತ್ರೆಗೆ ಕರೆದೊಯ್ದ ಕುರಿತು ಮೊಬೈಲ್ ಮೂಲಕ ಕೇಳಿದಾಗ, ತೋರಿಸಿಕೊಂಡು ಬಂದಿರುವೆ. ಮೊಬೈಲ್‌ನಲ್ಲಿ ಚಾರ್ಜ್ ಇಲ್ಲ. ಬಂದ್ ಆಗುತ್ತದೆ ಎಂದು ಹೇಳಿ ಪತ್ನಿಯು ಮೊಬೈಲ್ ಕರೆಯನ್ನು ಸ್ಥಗಿತಗೊಳಿಸಿದಳು.
ರಾತ್ರಿ ಮತ್ತೆ ಪತ್ನಿಗೆ ಮೊಬೈಲ್ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಇತ್ತು. ಅಣ್ಣನ ಪುತ್ರ ಸತೀಶ್ ಮೊಬೈಲ್‌ಗೆ ಕರೆ ಮಾಡಿ, ಕಾಕಿಗೆ ಫೋನ್ ಕೊಡು ಎಂದು ಹೇಳಿದಾಗ ಕಾಕಿ ಇನ್ನೂ ಆಸ್ಪತ್ರೆಯಿಂದ ಮನೆಗೆ ಬಂದಿಲ್ಲ ಎಂದು ಹೇಳಿದ. ಕೆಲಸ ಮುಗಿಸಿ ಮನೆಗೆ ಬಂದಾಗ ಮೂವರು ಮಕ್ಕಳು ಹಾಗೂ ಪತ್ನಿ ಇರಲಿಲ್ಲ.
ಈ ಕುರಿತು ತವರು ಮನೆ ನಾಲವಾರ್, ಜೈನಾಪೂರ್, ಕಲಬುರಗಿ, ಹಿಪ್ಪರಗಿ, ಗೋಳಾ, ಶಹಾಬಾದ್, ನಂದೂರ್ ಮುಂತಾದ ಕಡೆಗಳಲ್ಲಿ ಹುಡುಕಾಡಿದರೂ ಸಹ ಅವರು ಸುಳಿವು ಸಿಗಲಿಲ್ಲ. ಈ ಕುರಿತು ವಾಡಿ ಪೋಲಿಸ್ ಠಾಣೆಗೆ ಚಂದ್ರಶೇಖರ್ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…