ಕಲಬುರಗಿ: ಇಲ್ಲಿನ ಜನರಿಗೆ ಹರಟೆ ಹೊಡೆಯುದಕ್ಕೆ ಸದಾವಕಾಶ ಒದಗಿ ಬಂದಿದೆ. ಜೀವನಾನುಭವಕ್ಕೆ ಹಾಸ್ಯದ ಲೇಪನ ಹಚ್ಚಿ ಸಂವಾದಕ್ಕೆ ಅವಕಾಶ ಮಾಡಿಕೊಟ್ಟು ಟಿ.ವಿ.ಯ ಕಾರ್ಯಕ್ರಮಕ್ಕೆ ಮಾತ್ರ ಮನೆ ಮಾತಾಗಿದ್ದ ‘ಹರಟೆ’ ಕಾರ್ಯಕ್ರಮ ಇಲ್ಲಿನ ಸಹೃದಯಿ ಸ್ನೇಹ ಬಳಗದ ವತಿಯಿಂದ ಡಿ.೨೯ ರಂದು ಸಾಯಂಕಾಲ ೫ ಗಂಟೆಗೆ ನಗರದ ಸಂಗಮೇಶ್ವರ ಕಾಲೋನಿಯಲ್ಲಿರುವ ಸಂಗಮೇಶ್ವರ ಮಹಿಳಾ ಮಂಡಳದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಬಳಗದ ಸದಸ್ಯರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾತುಗಾರಿಕೆ ಎಂಬುದು ಒಂದು ಕಲೆ. ಈ ಕಲೆಯ ಮುಂದುವರಿದ ಭಾಗವೇ ಹರಟೆ. ಆದರೆ ಹರಟೆ ಎಂದರೆ ಕೇವಲ ಹಾಸ್ಯವಲ್ಲ. ಬದಲಾಗಿ ಅಲ್ಲಿ ಒಂದು ವಿಷಯದ ಕುರಿತು ಅರ್ಥಗರ್ಭಿತವಾದ ಚರ್ಚೆಯ ಮುಖಾಂತರ ವಿಮರ್ಶಿಸುವುದೇ ‘ಹರಟೆ’ಯಾಗಿರುತ್ತದೆ. ಜೊತೆಗೆ ಹರಟೆಯ ಮುಖೇನ ವಿಷಯದ ಕುರಿತ ಜ್ಞಾನವನ್ನು ವ್ಯಕ್ತಿಗೆ ಅಥವಾ ಸಮಾಜಕ್ಕೆ ನೀಡಿದಂತಾಗುತ್ತದೆ.
ಮನುಷ್ಯ ಸಮಾಜಮುಖಿಯಾದಷ್ಟು ಬದುಕಿನ ಬೇರೆ ಬೇರೆ ಮಜಲುಗಳನ್ನು ಅರಿಯುತ್ತಾ ಹೋಗುತ್ತಾನೆ. ಜನರೊಂದಿಗೆ ಬೆರೆತಾಗ ಮನಸ್ಸು ನಿರಾಳವಾಗುತ್ತದೆ. ಜೊತೆಗೊಂದಿಷ್ಟು ಹಾಸ್ಯ ಪ್ರಜ್ಞೆಯೂ ಇದ್ದರೆ ಅದು ನಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂಬ ಆಶಯದೊಂದಿಗೆ ಇದೊಂದು ವಿಶಿಷ್ಟ ಪ್ರಯೋಗವೆಂಬಂತೆ ಸ್ಥಳೀಯ ಅನುಭವಿ ಕಲಾವಿದರಿಂದ ಹರಟೆ ಕಾರ್ಯಕ್ರಮವೊಂದನ್ನು ರೂಪಿಸಲಾಗಿದೆ ಎಂದು ಅವರು ವಿವರಿಸಿದರು.
ಅಂದು ಹಮ್ಮಿಕೊಂಡ ವಿಶೇಷ ಕಾರ್ಯಕ್ರಮಕ್ಕೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹೆಚ್.ಎಂ.ಮಹೇಶ್ವರಯ್ಯ ಚಾಲನೆ ನೀಡಲಿದ್ದು, ಶ್ರೀನಿವಾಸ ಸರಡಗಿಯ ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ಡಾ.ರೇವಣಸಿದ್ಧ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಜೆಸ್ಕಾಂನ ಪ್ರಧಾನ ವ್ಯವಸ್ಥಾಪಕಿ ಪ್ರಮೀಳಾ ಎಂ.ಕೆ., ನ್ಯಾಯವಾದಿಗಳ ಸಂಘದ ಅಧ್ಯಕ್ಷ ಅರುಣಕುಮಾರ ಕಿಣ್ಣಿ, ಸಹೃದಯಿ ಸ್ನೇಹ ಬಳಗದ ಸದಸ್ಯರಾದ ಅಣವೀರಯ್ಯ ಪ್ಯಾಟಿಮನಿ, ಸವಿತಾ ಎಸ್.ನಾಸಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಸಂಗಮೇಶ್ವರ ಮಹಿಳಾ ಮಂಡಳದ ಅಧ್ಯಕ್ಷೆ ವೈಶಾಲಿ ದೇಶಮುಖ ಅಧ್ಯಕ್ಷತೆ ವಹಿಸಲಿದ್ದಾರೆ.
ನೆಮ್ಮದಿಯ ಜೀವನಕ್ಕೆ ಲವ್ ಮ್ಯಾರೇಜೋ ಅಥವಾ ಅರೇಂಜ್ ಮ್ಯಾರೇಜೋ ಎಂಬ ವಿಶೇಷ ಜುಗಲ್ ಬಂದಿಯಲ್ಲಿ ಸೂತ್ರದಾರರಾಗಿ ಹಿರಿಯ ಹಾಸ್ಯ ಸಾಹಿತಿ ಪ್ರೊ.ಹೇಮಂತ ಕೊಲ್ಹಾಪುರೆ ನಡೆಸಿಕೊಡಲಿದ್ದು, ಲವ್ ಮ್ಯಾರೇಜ್‌ನಿಂದ ನೆಮ್ಮದಿಯ ಜೀವನ ಎಂಬುದರ ಪರವಾಗಿ ಕಲಾವಿದರಾದ ರಾಜಕುಮಾರ ಬಿ.ಉದನೂರ, ಮಧುಮತಿ ಪಾಟೀಲ, ಗಣೇಶ ಕೆ.ಪಾಟೀಲ ಮತ್ತು ಅರೇಂಜ್ ಮ್ಯಾರೇಜ್ ಪರವಾಗಿ ಹಿರಿಯ ಕಲಾವಿದರಾದ ಶೋಭಾ ರಂಜೋಳಕರ್, ಡಾ.ವಾಸುದೇವ ಸೇಡಂ, ಗುಂಡಣ್ಣ ಡಿಗ್ಗಿ ಹರಸೂರ ಜುಗಲ್ ಬಂದಿ ನಡೆಸಲಿದ್ದಾರೆ.
ಭಾಗವಹಿಸುವ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದ್ದು, ಸಾರ್ವಜನಿಕರು ಕುಟುಂಬ ಸಮೇತರಾಗಿ ಆಗಮಿಸಿ ‘ಹರಟೆ’ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಸಹೃದಯಿ ಸ್ನೇಹ ಬಳಗದ ವಿಜಯಕುಮಾರ ತೇಗಲತಿಪ್ಪಿ, ಸುರೇಶ ಡಿ.ಬಡಿಗೇರ, ಶಿವರಂಜನ್ ಸತ್ಯಂಪೇಟೆ, ನಾಗಲಿಂಗಯ್ಯಾ ಮಠಪತಿ, ಹಣಮಂತರಾಯ ಅಟ್ಟೂರ, ಸವಿತಾ ನಾಸಿ, ರಾಜಕುಮಾರ ಉದನೂರ, ರವಿಕುಮಾರ ಶಹಾಪುರಕರ್, ಅಣವೀರಯ್ಯ ಪ್ಯಾಟಿಮನಿ, ಶರಣರಾಜ್ ಛಪ್ಪರಬಂದಿ, ಸಂಗಮೇಶ ಶಾಸ್ತ್ರಿ ಮಾಶಾಳ, ಶಿವಾನಂದ ಮಠಪತಿ, ಗುಂಡಣ್ಣ ಡಿಗ್ಗಿ ಹರಸೂರ, ಶ್ರವಣಕುಮಾರ ಮಠ ಅವರು ಜಂಟಿಯಾಗಿ ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ಮೊ. ನಂ.೯೪೪೯೭ ೩೨೨೯೭, ೯೯೪೫೫ ೭೦೨೩೪, ೯೯೪೫೫೭೧೦೩೬ ಗೆ ಸಂಪರ್ಕಿಸಲು ಕೋರಲಾಗಿದೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…