ಬಿಸಿ ಬಿಸಿ ಸುದ್ದಿ

ನಗರಸಭೆ ಕಾರ್ಯಾಚರಣೆ: ಬೀದಿ ದನಗಳು ಕಲಬುರ್ಗಿ ಗೋಶಾಲೆಗೆ ಸಾಗಣೆ

ಸುರಪುರ: ನಗರದಲ್ಲಿ ಅಡ್ಡಾದಿಡ್ಡಿಯಾಗಿ ಎಲ್ಲೆಂದರಲ್ಲಿ ಮಲಗುವ ಮೂಲಕ ಸಾರ್ವಜನಿಕರಿಗೆ ಹಾಗು ವಾಹನಗಳ ಓಡಾಟಕ್ಕೆ ತೊಂದರೆ ಕೊಡುತ್ತಿರುವ ಜಾನುವಾರುಗಳನ್ನು ಕಟ್ಟಿ ಹಾಕಿಕೊಳ್ಳುವಂತೆ ಜಾನುವಾರುಗಳ ಮಾಲೀಕರಿಗೆ ಕಳೆದ ಅನೇಕ ದಿನಗಳಿಂದ ನಗರದ ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸಿದ್ದ ನಗರಸಭೆ ಅಧಿಕಾರಿಗಳು ಕೊನೆಗೆ ಶುಕ್ರವಾರ ರಾತ್ರಿಯಿಂದ ಬೀದಿ ದನಗಳ ಹಿಡಿಯುವ ಕಾರ್ಯಾಚರಣೆ ಆರಂಭಿಸಿದರು.

ನಗರದ ಎಪಿಎಂಸಿ ಗಂಜ್ ಹಾಗು ಬಸ್ ನಿಲ್ದಾಣದಲ್ಲಿ ಸದಾಕಾಲ ರಸ್ತೆಗೆ ಅಡ್ಡಲಾಗಿ ಮಲಗುವ ಮೂಲಕ ವಾಹನಗಳ ಓಡಾಟಕ್ಕೆ ತುಂಬಾ ತೊಂದರೆಯಾಗುತ್ತಿದನ್ನು ಅನೇಕಬಾರಿ ಪತ್ರಿಕೆಯಲ್ಲಿ ಸುದ್ದಿ ಮಾಡುವ ಮೂಲಕ ನಗರಸಭೆಯ ಗಮನಕ್ಕೂ ತರಲಾಗಿತ್ತು.ಇದರಿಂದ ಎಚ್ಚೆತ್ತುಕೊಂಡು ನಗರಸಭೆ ಅಧಿಕಾರಿಗಳು ಶುಕ್ರವಾರ ರಾತ್ರಿ ಹನ್ನೆರಡು ಗಂಟೆಯ ವೇಳೆಗೆ ಲಾರಿಯಲ್ಲಿ ಬೀದಿ ದನಗಳನ್ನು ತುಂಬವ ಕೆಲಸಕ್ಕೆ ಮುಂದಾಗಿ ಗಂಜ್ ಬಳಿಯಲ್ಲಿ ಎರಡು ಹಾಗು ಬಸ್ ನಿಲ್ದಾಣದಲ್ಲಿನ ಮೂರು ಒಟ್ಟು ಐದು ಜಾನುವಾರುಗಳನ್ನು ಕಲಬುರ್ಗಿಯಲ್ಲಿರುವ ಗೋಶಾಲೆಗೆ ಸಾಗಿಸಿದ್ದಾರೆ.

ಈಗ ಬರೀ ಐದು ಜಾನುವಾರುಗಳು ಸಿಕ್ಕಿವೆ,ಈಗಲೆ ದನಗಳ ಮಾಲೀಕರು ತಮ್ಮ ಜಾನುವಾರುಗಳ ಕಟ್ಟಿಕೊಂಡರೆ ಸರಿ ಇಲ್ಲವಾದರೆ ಮತ್ತೆ ಬೀದಿಯಲ್ಲಿ ಸಿಗುವ ದನಗಳನ್ನು ಹಿಡಿದು ಗೋಶಾಲೆಗೆ ಕಳುಹಿಸಲಾಗುವುದು.                                                           – ಸುನೀಲ ನಾಯಕ ಪರಿಸರ ಅಭಿಯಂತರ ನಗರಸಭೆ ಸುರಪುರ

ಇದರಿಂದ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಾಗಿದೆ.ಒಂದು ತಿಂಗಳ ಹಿಂದೆಯೆ ಬೀದಿ ದನಗಳ ಹಿಡಿಯುವ ಕೆಲಸ ನಗರಸಭೆ ಆರಂಭಿಸಿತ್ತು.ಆಗ ಕೆಲ ಸಂಘಟನೆಗಳವರು ಮತ್ತು ಸಾರ್ವಜನಿಕರು ಒಂದು ಬಾರಿ ಅವಕಾಶ ನೀಡಿ,ಜಾನುವಾರುಗಳ ಮಾಲೀಕರು ದನಗಳನ್ನು ತಮ್ಮ ಮನೆಗಳಲ್ಲಿ ಕಟ್ಟಿಕೊಳ್ಳುತ್ತಾರೆ ಎಂದು ಹೇಳಿದ್ದರಿಂದ ಬಿಟ್ಟಿದ್ದ ಅಧಿಕಾರಿಗಳು ಅನೇಕ ಬಾರಿ ಧ್ವನಿವರ್ಧಕದ ಮೂಲಕ ನಗರದಲ್ಲಿ ಪ್ರಕಟಣೆಯನ್ನೂ ಹೊರಡಿಸಿ ಜಾಗೃತಿ ಮೂಡಿಸಲಾಗಿತ್ತು.ಆದರೂ ನಿರ್ಲಕ್ಷ್ಯ ತೋರಿದ್ದ ಜಾನುವಾರುಗಳ ಮಾಲೀಕರು ಈಗ ತಮ್ಮ ದನಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಗುವ ಪರಸ್ಥಿತಿ ನಿರ್ಮಿಸಿಕೊಂಡಿದ್ದಾರೆ.

ಕಾರ್ಯಾಚರಣೆ ಕುರಿತು ನಗರಸಭೆಯ ಪರಿಸರ ಅಭಿಯಂತ ಸುನೀಲ ನಾಯಕರಿಗೆ ಮಾತನಾಡಿಸಿದಾಗ, ’ಅನೇಕ ಬಾರಿ ಜನರಲ್ಲಿ ಜಾಗೃತಿ ಮೂಡಿಸಿದ್ದೆವೆ ಆದರೂ ಎಚ್ಚರವಹಿಸಿಲ್ಲವಾದ್ದರಿಂದ ಬೇಸತ್ತು ಇಂದು ಕಾರ್ಯಾಚರಣೆ ನಡೆಸಬೇಕಾಯಿತು.ಈ ದನಗಳನ್ನು ಕಲಬುರ್ಗಿಯ ಗೋಶಾಲೆಗೆ ಕಳುಹಿಸಲಾಗುತ್ತದೆ.ಅಲ್ಲಿಗೆ ಹೋದ ದನಗಳನ್ನು ಗೋಶಾಲೆಯವರು ಮತ್ತೆ ಮರಳಿ ಕೊಡುವುದಿಲ್ಲ.ಇದರಿಂದ ಜಾನುವಾರುಗಳ ಮಾಲೀಕರು ನಷ್ಟ ಅನುಭವಿಸುತ್ತಾರೆ ನಾವೇನು ಮಾಡಲಾಗದು’ ಎಂದರು.

ಕಾರ್ಯಾಚರಣೆಯಲ್ಲಿ ಎಸ್.ಐಗಳಾದ ಲಕ್ಷ್ಮಣ ಕಟ್ಟಿಮನಿ,ಶಿವಪುತ್ರ,ಸಿಎಒ ಓಂಕಾರ ಪೂಜಾರಿ,ಅಂಬ್ಲಪ್ಪ ದಪೇದಾರ ಪೌರಕಾರ್ಮಿಕರಾದ ಜಗದೀಶ ಶಾಖನವರ್,ನಾಗೇಶ್,ಹಣಮಂತ,ಬೆನಕಪ್ಪ,ಮಹಾಂತೇಶ,ಲಕ್ಷ್ಮಣ ದೊರೆ ಇತರರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

3 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

3 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

3 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

20 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

22 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago