ಸುರಪುರ: ರಾಜ್ಯದಲ್ಲಿರುವ ಅನುದಾನಿತ ಶಾಲಾ ಕಾಲೇಜುಗಳಲ್ಲಿನ ನೌಕರರಿಗೂ ಸರಕಾರ ಪಿಂಚಣಿ ನೀಡಬೇಕು ಎಂದು ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಜಿಲ್ಲಾಧ್ಯಕ್ಷ ಚಂದಪ್ಪ ಯಾದವ್ ಸರಕಾರಕ್ಕೆ ಒತ್ತಾಯಿಸಿದರು.
ನಗರದ ತಹಸೀಲ್ ಕಚೇರಿ ಮುಂದೆ ಸಾಂಕೇತಿಕ ಹೋರಾಟ ನಡೆಸಿ ಮಾತನಾಡಿದ ಅವರು, ೦೧ ಏಪ್ರಿಲ್ ೨೦೦೬ರ ಮೊದಲು ನೇಮಕಗೊಂಡು ನಂತರ ೨೦೦೬ರ ಏಪ್ರಿಲ್ ೦೧ ರ ನಂತರ ಅನುದಾನಕ್ಕೊಳಪಟ್ಟು ವೇತನ ಪಡೆಯುತ್ತಿರುವ ಶಾಲಾ ಕಾಲೇಜುಗಳ ನೌಕರರಿಗೆ ಪಿಂಚಣಿ ನೀಡದೆ ಸರಕಾರ ಅನ್ಯಾಯ ಮಾಡುತ್ತಿದೆ.ಈಗಾಗಲೇ ನೌಕರಿಯಿಂದ ನಿವೃತ್ತಿ ಹೊಂದಿದ ಹಾಗು ಕೆಲಸದಲ್ಲಿರುವಾಗಲೆ ಮರಣ ಹೊಂದಿದೆ ಎಷ್ಟೊ ಕುಟುಂಬಗಳು ಇಂದು ಬದುಕಲು ಪರದಾಡಬೇಕಾದ ಸ್ಥಿತಿಗೆ ಬಂದಿವೆ.ಇದನ್ನು ಕುರಿತು ಈ ಹಿಂದೆ ಅನೇಕಬಾರಿ ಹೋರಾಟ ಮಾಡಿದರೂ ಪ್ರಯೋಜನೆಯಾಗುತ್ತಿಲ್ಲ ಸರಕಾರ ಈಗಲಾದರೂ ನಮ್ಮ ನ್ಯಾಯಯುತವಾದ ಬೇಡಿಕೆ ಈಡೇರಿಸಬೇಕು.
ನೌಕರರು ಅನುದಾನಕ್ಕೊಳಪಡುವ ಪೂರ್ವದಲ್ಲಿಯೇ ಸೇವೆಗೆ ಸೇರಿದ್ದ ದಿನಾಂಕದಿಂದಲೇ ವಿವಿಧ ಸೌಲಭ್ಯಗಳನ್ನು ನೀಡಬೇಕೆಂದು ಆದೇಶ ಮಾಡಿದೆ.ಆದರೆ ಸರಕಾರ ನೀಡುತ್ತಿಲ್ಲ.ಇತರೆ ರಾಜ್ಯಗಳಲ್ಲಿ ಅನುದಾನಿತ ನೌಕರರ ಪಾಲೀನ ಪಿಂಚಣಿ ವಂತಿಗೆ ಹಣವನ್ನು ಸರಕಾರಗಳೆ ಭರಿಸುತ್ತಿವೆ.ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ತಾರತಮ್ಯ ಮಾಡಲಾಗುತ್ತಿದೆ. ಇನ್ನು ಏಪ್ರಿಲ್ ೦೧ ೨೦೦೬ಕ್ಕಿಂತ ಮೊದಲು ಅನುದಾನಕ್ಕೊಳಪಟ್ಟು ನೌಕರರು ಪಿಂಚಣಿ ಪಡೆಯುತ್ತಿದ್ದಾರೆ.ಆದರೆ ನಮಗೇಕೆ ತಾರತಮ್ಯ,೧೨.೦೨.೨೦೧೪ರಂದು ಮಾಡಲಾದ ವಿಧೇಯಕದಲ್ಲಿ ಎಲ್ಲಾ ಆರ್ಥಿಕ ಸೌಲಭ್ಯಗಳನ್ನು ನೀಡಲಾಗುವುದೆಂದು ತಿಳಿಸಲಾಗಿದೆ.ಆದರೆ ೨೦೦೬ರ ಏಪ್ರಿಲ್ ೦೧ ನಂತರ ಅನುದಾನಕ್ಕೊಳಪಟ್ಟವರಿಗೆ ಸರಕಾರ ವಂಚನೆ ಮಾಡುತ್ತಿರುದೇಕೆ.
ನೂತನ ಪಿಂಚಣಿ ಕಾಯಿದೆಗೆ ಕೂಡಲೆ ತಿದ್ದುಪಡಿ ತಂದು ನೌಕರರ ಪಾಲಿನ ವಂತಿಗೆ ಪ್ರತಿಯಾಗಿ ನೇಮಕಾತಿ ಪ್ರಾಧಿಕಾರದ ಪಾಲಿನ ವಂತಿಗೆಯನ್ನು ಸರಕಾರಿ ನೌಕರರಿಗೆ ನೀಡುತ್ತಿರುವಂತೆ ಯಥಾವತ್ತಾಗಿ ಸರಕಾರವೇ ನೀಡಬೇಕೆಂದು ಒತ್ತಾಯಿಸುತ್ತೆವೆ.ಈ ನಮ್ಮ ಬೇಡಿಕೆಗೆ ಸರಕಾರ ಸ್ಪಂಧಿಸದಿದ್ದಲ್ಲಿ ಜನೆವರಿ ೧೦ ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಹೋ ರಾತ್ರಿ ಅನಿರ್ಧಿಷ್ಟಾವಧಿ ಉಪವಾಸ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ ನಿಂಗಣ್ಣ ಬಿರೆದಾರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ ಕಟ್ಟಿಮನಿ,ಕೋಶಾಧ್ಯಕ್ಷ ಸಾಹೇಬರಡ್ಡಿ ಇಟಗಿ,ದಿಗಂಬರ ಬಾಬರೆ,ಸಾಹೇಬಗೌಡ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…