ಬಿಸಿ ಬಿಸಿ ಸುದ್ದಿ

ಚಿರಂಜೀವಿ ಪೂಜ್ಯ ದೊಡ್ಡಪ್ಪ ಅಪ್ಪ ಅವರಿಗೆ ಶರಣಬಸವೇಶ್ವರ ಮಹಾ ಸಂಸ್ಥಾನದ ೯ನೇ ಪೀಠಾಧಿಪತಿಯಾಗಿ ಅಭಿಷೇಕ

ಕಲಬುರಗಿ: ಚಿರಂಜೀವಿ ಪೂಜ್ಯ ದೊಡ್ಡಪ್ಪ ಅಪ್ಪ ಅವರನ್ನು ಶರಣಬಸವೇಶ್ವರ ಮಹಾ ಸಂಸ್ಥಾನದ ೯ನೇ ಪೀಠಾಧಿಪತಿಯಾಗಿ ಅಭಿಷೇಕ ಮಾಡಲಾಯಿತು. ಮತ್ತು ೮ನೇ ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿಯವರ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನಗಳ ಸ್ತೋತ್ರಗಳನ್ನು ಪಠಿಸುವ ಮೂಲಕ ದಾಕ್ಷಾಯಿಣಿ ಅವ್ವಾಜಿ ಮತ್ತು ಧಾರ್ಮಿಕ ವೀರಶೈವ ವಿವಿಧ ಮಠಗಳ ಮುಖ್ಯಸ್ಥರ ಮಧ್ಯದಲ್ಲಿ ೧೮ನೇ ಶತಮಾನದ ಸಂತ ಶ್ರೀ ಶರಣಬಸವೇಶ್ವರ ಅವರಿಂದ ಬೆಳಗಿದ ಪವಿತ್ರ ದೀಪವಾದ ನಂದಾ ದೀಪದ ಎದುರು ಪೂಜ್ಯ ದೊಡ್ಡಪ್ಪ ಅಪ್ಪಾಜಿಯವರ ಅಭಿಷೇಕ ಮತ್ತು ಉತ್ತರಾಧಿಕಾರವನ್ನು ಸಾಕಾರಗೊಳಿಸಲಾಯಿತು.

ಶ್ರೀ ಶರಣಬಸವೇಶ್ವರರು ತಮ್ಮ ಕೊನೆಯ ದಿನಗಳನ್ನು ಕಳೆದ ಕೋಣೆಯ ಪಕ್ಕದಲ್ಲಿದ್ದ ಪೂಜಾ ಕೋಣೆಯನ್ನು ಪವಿತ್ರ ಸ್ಥಳವೆಂದು ಪರಿಗಣಿಸಿಲಾಗಿದ್ದು, ಪೂಜ್ಯ ಅಪ್ಪಾಜೀ ಅವರು ತಮ್ಮ ದಿನಚರಿಯನ್ನು ಪ್ರಾರಂಭಿಸುವ ಮೊದಲು ಬೆಳಿಗ್ಗೆ ನಂದಾ ದೀಪಕ್ಕೆ ಪೂಜೆ ಸಲ್ಲಿಸುತ್ತಾರೆ. ಇದರಿಂದ ಈ ಸ್ಥಳಕ್ಕೆ ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ.

ಇದೇ ಪವಿತ್ರ ಸ್ಥಳದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ ಮತ್ತು ಉತ್ತರಾಧಿಕಾರತ್ವ ಪ್ರಕ್ರಿಯೆಯನ್ನು ಸಾಕಾರಗೊಳಿಸಿದ ಧಾರ್ಮಿಕ ಮಠಾಧೀಶರಲ್ಲಿ ಪ್ರಮುಖರಾದ ಬೀದರ್ ಜಿಲ್ಲೆಯ ಹಾರಕೂಡ ಸಂಸ್ಥಾನ ಮಠದ ಮುಖ್ಯಸ್ಥ ಡಾ. ಚೆನ್ನವೀರ ಶಿವಾಚಾರ್ಯರು, ಆಂಧ್ರಪ್ರದೇಶದ ಶ್ರೀಶೈಲಂ ಮಠದ ಶ್ರೀ ಜಗದ್ಗುರು ಸಾರಂಗಧರ ದೇಶಿಕೇಂದ್ರ ಸ್ವಾಮಿಗಳು, ಸುಲಫಲ ಮಠ, ಚೌಡಾಪುರ ಮಠದ ಶ್ರೀ ರಾಜಶೇಖರ ಸ್ವಾಮಿಗಳು, ಕಲಬುರಗಿ, ಮುಗಳನಾಗಾಂವ ಕಟ್ಟಿಮನಿ ಹಿರೇಮಠ ಸಂಸ್ಥಾನದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯರು, ಬೆಳಗುಂಪಿಯ ಶ್ರೀ ಅಭಿನವ ಮುನೀಂದ್ರ ಸ್ವಾಮಿಗಳು, ಶ್ರೀ ಸಿದ್ದಲಿಂಗ ಶಿವಾಚಾರ್ಯರು ಮಡಕಿ ಹಾಗೂ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರ ಸಹೋದರಿಯರಾದ ಕುಮಾರಿ ಶಿವಾನಿ, ಕುಮಾರಿ ಕೋಮಲ ಮತ್ತು ಕುಮಾರಿ ಮಹೇಶ್ವರಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಅದರಂತೆ ವಿಧಾನ ಪರಿಷತ್ ಸದಸ್ಯರಾದ ಬಿ.ಜಿ ಪಾಟೀಲ, ತಿಪ್ಪಣ್ಣಪ್ಪ ಕಮಕನೂರು, ಕಲಬುರಗಿ ಮಹಾನಗರ ಪಾಲಿಕೆ ಮಾಜಿ ಮೇಯರ್ ಶರಣು ಮೋದಿ, ನಂಜಂಡಪ್ಪ ಕಮಿಟಿಯ ಮಾಜಿ ಅಧ್ಯಕ್ಷರಾದ ಶಶೀಲ್ ನಮೋಶಿ, ನಿವೃತ ಪೊಲೀಸ್ ವರಿಷ್ಠಾಧಿಕಾರಿ ಬಸವರಾಜ, ವೀರಶೈವ ಸಮಾಜದ ಕಾರ್ಯಕಾರಿ ಸಮಿತಿಯ ಸದಸ್ಯ ಅರುಣಕುಮಾರ ಪಾಟೀಲ, ಶ್ರೀಶೈಲ್ ಗೂಳಿ, ಹಿರಿಯ ವಕೀಲರಾದ ಶ್ರೀ ಶರಣಬಸವಪ್ಪ ದೇಶಮುಖ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಪೂಜ್ಯ ಅಪ್ಪಾಜಿಯವರ ಹಿರಿಯ ಮಗಳಾದ ಡಾ.ಗಂಗಾಂಬಿಕ ನಿಷ್ಟಿ ಮತ್ತು ಕುಟುಂಬದ ಸದಸ್ಯರು ಇದ್ದರು.

ಅಭಿಷೇಕ ಸಮಾರಂಭಕ್ಕೆ ಮುಂಚಿತವಾಗಿ ಮಾತೋಶ್ರೀ ದಾಕ್ಷಾಯಿಣಿ ಅವ್ವಾಜಿ ಅವರು ಗಣೇಶ, ಶರಣಬಸವೇಶ್ವರ ಮತ್ತು ಇತರ ವಿಗ್ರಹಗಳಿಗೆ ಪೂಜೆ ಸಲ್ಲಿಸುವ ಮೂಲಕ ಧಾರ್ಮಿಕ ಆಚರಣೆಗಳನ್ನು ನೆರವೇರಿಸಿದರು. ಧಾರ್ಮಿಕ ವಚನಗಳು ಮತ್ತು ಸ್ತುತಿಗೀತೆಗಳನ್ನು ಪಠಿಸುವ ಮಧ್ಯೆ ಧಾರ್ಮಿಕ ಮುಖಂಡರು ಚಿರಂಜೀವಿ ಪೂಜ್ಯ ದೊಡ್ಡಪ್ಪ ಅಪ್ಪಾಜಿ ಅವರಿಗೆ ದೀಕ್ಷೆ ನೀಡಿದರು. ದೀಕ್ಷಾ ಸಮಾರಂಭದ ಪ್ರಕ್ರಿಯೆಯಾದ್ಯಂತ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿವರನ್ನು ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಅವರ ಮಡಿಲಲ್ಲಿ ಕೂರಿಸಲಾಗಿತ್ತು.

ನಂತರ ಪೀಠಾರೋಹಣ ಸಮಾರಂಭವು ದಾಸೋಹ ಮಹಾಮನೆ ಮುಖ್ಯ ಸಭಾಂಗಣದಲ್ಲಿ ನಡೆಯಿತು. ಮತ್ತು ಪ್ರಸ್ತುತ ಪೀಠಾಧಿಪತಿ ಪೂಜ್ಯ ಡಾ.ಅಪ್ಪಾಜಿ ಅವರ ಗದ್ದಿಗೆಯಲ್ಲಿ ಉತ್ತರಾಧಿಕಾರಿ ಚಿರಂಜೀವಿ ದೊಡ್ಡಪ್ಪ ಅಪ್ಪಾ ಅವರನ್ನು ಕೂಡಿಸಿ ಅವರನ್ನು ೯ನೇ ಪೀಠಾಧೀಪತಿ ಎಂದು ವಿವಿಧ ಮಠಾಧೀಶರು ಹಾಗೂ ಭಕ್ತ ಸಮೂಹದ ಮಧ್ಯೆ ಅಧಿಕೃತವಾಗಿ ಘೋಷಿಸಲಾಯಿತು. ಪೂಜ್ಯ ಅಪ್ಪಾಜಿಯವರ ಗೌರವವನ್ನು ಉತ್ತರಾಧಿಕಾರಿಗೆ ವಿಸ್ತರಿಸಬೇಕು ಎಂದು ಸಮಾರಂಭದಲ್ಲಿ ಬೋಧಿಸಲಾಯಿತು.

ಪೂಜ್ಯ ದೊಡ್ಡಪ್ಪ ಅಪ್ಪಾಜಿಯವರ ನಿಧನದ ನಂತರ ೩೬ ವರ್ಷಗಳ ಹಿಂದೆ ಸಂಸ್ಥಾನದ ೮ನೇ ಪೀಠಾಧಿಪತಿಯಾಗಿ ಅಭಿಷೇಕ ಮಾಡಿದ ದಿನವನ್ನು ಪೂಜ್ಯ ಡಾ.ಅಪ್ಪಾಜಿ ನೆನಪಿಸಿಕೊಂಡರು. ದೇವಸ್ಥಾನಕ್ಕೆ ಭೇಟಿ ನೀಡುವ ಎಲ್ಲರಿಗೂ ಅವರ ದಯೆ ಮತ್ತು ಕರುಣೆಯನ್ನು ಪ್ರದರ್ಶಿಸುವ ಮೂಲಕ ೭ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪಾಜಿಯ ಪುನರಜನ್ಮವಾಗಿದೆ ಮತ್ತು ಚಿಕ್ಕ ವಯಸ್ಸಿನಲ್ಲೇ ಚಿರಂಜೀವಿ ದೊಡ್ಡಪ್ಪ ಅಪ್ಪಾ ಅವರು ನನ್ನ ತಂದೆಯ ಎಲ್ಲಾ ಸದ್ಗುಣಗಳನ್ನು ಮೈಗೂಡಿಸಿಕೊಂಡಿರುವುದು ಹೆಮ್ಮೆಯ ವಿಷಯವೆಂದು ಡಾ.ಅಪ್ಪಾಜೀ ಸಂತಸ ಪಟ್ಟರು.

ಆಂಧ್ರಪ್ರದೇಶದ ಶ್ರೀಶೈಲಂ ಮತ್ತು ಜಗದ್ಗುರು ಶ್ರೀ ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಮಾತನಾಡಿ, ಈ ದಿನವನ್ನು ಕರ್ನಾಟಕದ ಇತಿಹಾಸದಲ್ಲಿ ಸುವರ್ಣ ಪದಗಳಲ್ಲಿ ಬರೆಯಲಾಗುವುದು ಮತ್ತು ಶರಣಬಸವೇಶ್ವರ ಸಂಸ್ಥಾನದ ೯ನೇ ಪೀಠಾಧಿಪತಿ ಅಭಿಷೇಕ ಸಮಾರಂಭಕ್ಕೆ ಸಾಕ್ಷಿಯಾಗಲು ನಾವು ಅದೃಷ್ಟಶಾಲಿಗಳು ಎಂದು ಹೇಳಿದರು. ಭಾರತದಾದ್ಯಂತ ಮತ್ತು ಹೊರಗಿನ ಲಕ್ಷಾಂತರ ಭಕ್ತರಿಂದ ಈ ಸಂಸ್ಥಾನ ಪೂಜಿಸಲ್ಪಟ್ಟಿದೆ ಎಂದರು.
ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನಿಲಕುಮಾರ ಬಿಡವೆ, ವಿವಿಯ ಮೌಲ್ಯಮಾಪನ ಕುಲಸಚಿವ ಲಿಂಗರಾಜ ಶಾಸ್ತ್ರಿ, ಡೀನ್ ಲಕ್ಷ್ಮಿ ಪಾಟೀಲ ಇದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

13 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

16 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

22 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

23 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

23 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago