ಆಳಂದ: ತವರು ಮನೆ ಸಂಸ್ಕಾರ ಗಂಡನ ಮನೆಯ ಸಹಕಾರ ಇದ್ದರೆ ಮಹಿಳೆ ಏನು ಬೇಕಾದರೂ ಸಾಧಿಸಬಹುದು ಅದಕ್ಕಾಗಿ ರೈತ ಕುಲ ಯಾವುದಕ್ಕೂ ಕುಗ್ಗಬಾರದು ಈ ನಿಟ್ಟಿನಲ್ಲಿ ರೈತರು ಹೊಸ ಹೊಸ ವಿಧಾನಗಳನ್ನು ಪರಿಚಯಿಸಿಕೊಂಡು ಬೆಳೆ ಬೆಳೆಯಬೇಕು ಎಂದು ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಹೇಳಿದರು.
ತಾಲೂಕಿನ ತಡಕಲ ಗ್ರಾಮದಲ್ಲಿ ದಿ. ರುಕ್ಮಯ್ಯ ಗುತ್ತೇದಾರರ ೭ನೇ ಪುಣ್ಯಸ್ಮರಣೆ, ರೈತ ದಿನಾಚರಣೆ, ಧರ್ಮಸಭೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲ್ಯಾಣ ಕರ್ನಾಟಕ ಕೃಷಿ ಸಿರಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಋತು ಆಧಾರಿತ ಆದಾಯ ತರುವ ಬೆಳೆಗಳನ್ನು ರೈತರು ಬೆಳೆಯಲು ಮುಂದೆ ಬರಬೇಕು. ರೈತರಾದವರು ಮಳೆ, ಚಳಿ, ಗಾಳಿಗೆ ಹೆದರಬಾರದು ಅವುಗಳ ಜೊತೆ ನಿರಂತರ ಆಟವಾಡುತ್ತಿರಬೇಕು. ಪ್ರತಿ ಸುಖದ ಹಿಂದೆ ಸಾವಿರಾರು ಕಷ್ಟಗಳಿವೆ ಆ ಕಷ್ಟಗಳನ್ನು ಮೆಟ್ಟಿ ನಿಲ್ಲುವ ಛಾತಿ ರೈತ ಸಮೂಹ ಬೆಳಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಹಾರಕೂಡ ಹಿರೇಮಠ ಸಂಸ್ಥಾನದ ಚೆನ್ನವೀರ ಶಿವಾಚಾರ್ಯರು ಮಾತನಾಡಿ, ಭಕ್ತಿ ಎನ್ನುವುದು ಬಂಗಾರಕ್ಕಿಂತ ಅಮೂಲ್ಯವಾದುದ್ದು ಅದನ್ನು ಅತ್ಯಂತ ಜತನದಿಂದ ಪಡೆದು ಕಾಪಾಡಿಕೊಂಡು ಬರಬೇಕಾಗಿದೆ. ಭಾರತವು ಸಂತರ, ಶರಣರ ಶ್ರೇಷ್ಟ ನಾಡಾಗಿದೆ ಇಲ್ಲಿರುವ ಆಧ್ಯಾತ್ಮ ಜಗತ್ತಿಗೆ ಪರಿಚಯವಾಗಿದೆ ಹೀಗಾಗಿ ಆಧ್ಯಾತ್ಮಿಕವಾಗಿ ಜಾಗತಿಕ ಯುಗದಲ್ಲಿ ಭಾರತ ಪ್ರಕಾಶಿಸುತ್ತಿದೆ ಎಂದರು.
ಹಾರಕೂಡ ಹಿರೇಮಠದ ಚೆನ್ನವೀರ ಶಿವಾಚಾರ್ಯರಿಗೆ ಚಿನ್ನದ ಕೀರಿಟ ತೋಡಿಸಿ ಕಲ್ಯಾಣ ಕರ್ನಾಟಕದ ಆಧ್ಯಾತ್ಮ ಸಿರಿ ಹಾಗೂ ನಾಡಿನ ಕೃಷಿ ಕ್ಷೇತ್ರದಲ್ಲಿ ಅನುಪಮ ಸಾಧನೆ ಮಾಡಿದ ರೈತ ಮಹಿಳೆ ಕವಿತಾ ಮಿಶ್ರಾ ಅವರಿಗೆ ಕಲ್ಯಾಣ ಕರ್ನಾಟಕದ ಕೃಷಿ ಸಿರಿ ಪ್ರಶಸ್ತಿಯನ್ನು ಎಸ್‌ಆರ್‌ಜಿ ಫೌಂಡೇಶನ ವತಿಯಿಂದ ನೀಡಿ ಗೌರವಿಸಲಾಯಿತು
ತಾಲೂಕಿನಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ೨೧ ಜನ ಪ್ರಗತಿಪರ ರೈತರಿಗೆ ಆಳಂದ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ನೇತೃತ್ವವನ್ನು ನಂದಗಾಂವದ ರಾಜಶೇಖರ ಸ್ವಾಮೀಜಿ, ಮಾದನ ಹಿಪ್ಪರ್ಗಾದ ಅಭಿನವ ಶಿವಲಿಂಗ ಸ್ವಾಮೀಜಿ, ಕೇಸರ ಜವಳಗಾದ ಜಡಿ ಬಸವಲಿಂಗ ಸ್ವಾಮೀಜಿ, ಖಜೂರಿಯ ಮುರುಘೆಂದ್ರ ಸ್ವಾಮೀಜಿ, ಬಂಗರಗಾದ ಚರಂತೇಶ್ವರ ಸ್ವಾಮೀಜಿ, ಮಾಡ್ಯಾಳದ ಒಪ್ಪತ್ತೇಶ್ವರ ಸ್ವಾಮೀಜಿ, ಕಿಣ್ಣಿಸುಲ್ತಾನದ ಶಾಂತಲಿಂಗ ಸ್ವಾಮೀಜಿ, ಚಿಣಮಗೇರಾದ ಪೂಜ್ಯರು ವಹಿಸದ್ದರು.
ಸಮಾರಂಭದಲ್ಲಿ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ, ಜಿ,ಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾವ ಮಲಾಜಿ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ರಾಜು ತೆಗ್ಗಳ್ಳಿ, ಜಿ.ಪಂ ಸದಸ್ಯ ಹರ್ಷಾನಂದ ಗುತ್ತೇದಾರ, ಗುರುಶಾಂತ ಪಾಟೀಲ ನಿಂಬಾಳ, ಕೆಎಂಎಫ್ ನಿರ್ದೇಶಕ ಸಂತೋಷ ಗುತ್ತೇದಾರ, ತಹಸೀಲದಾರ ದಯಾನಂದ ಪಾಟೀಲ. ಪಿಎಸ್‌ಐ ಶರಣಗೌಡ, ಅರುಣ ವಿ ಗುತ್ತೇದಾರ, ದತ್ತರಾಜ ಗುತ್ತೇದಾರ, ಕುಪೇಂದ್ರ ಗುತ್ತೇದಾರ, ಆದರ್ಶ ಗುತ್ತೇದಾರ, ಅಶೋಕ ಗುತ್ತೇದಾರ, ಅಭಿಷೇಕ ಗುತ್ತೇದಾರ, ಅರುಣ ಗುತ್ತೇದಾರ, ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ಮುಖಂಡರಾದ ವೀರಣ್ಣ ಮಂಗಾಣೆ, ರಾಜಶೇಖರ ಮಲಶೆಟ್ಟಿ. ಕೃಷಿ ಇಲಾಖೆಯ ಶರಣಗೌಡ ಪಾಟೀಲ, ಮುಖ್ಯ ಗುರು ಚಂದ್ರಕಾಂತ ಕಲಶೆಟ್ಟಿ ಸೇರಿದಂತೆ ಗುತ್ತೇದಾರ ಪರಿವಾರದವರು ಮತ್ತು ತಾಲೂಕಿನ ಸಾವಿರಾರು ಜನ ಭಾಗವಹಿಸಿದ್ದರು.
ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳಲು ಎಸ್‌ಆರ್‌ಜಿ ಫೌಂಡೇಶನ್ ವತಿಯಿಂದ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಶಾಸಕ ಸುಭಾಷ್ ಆರ್ ಗುತ್ತೇದಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಪ್ಪಾಸಾಬ ಗುಂಡೆ ಕಾರ್ಯಕ್ರಮ ನಿರ್ವಹಿಸಿದರು.
ಬಾಕ್ಸ್: ಶ್ರಮ ಸಂಸ್ಕೃತಿಯ ಮೇಲೆ ದುಡಿದು ಬಂದಿರುವುದರಿಂದ ಇಂದು ನಾವು ತಾಲೂಕಿನಲ್ಲಿ ಗುರುತಿಸಿಕೊಂಡಿದ್ದೇವೆ. ನಮ್ಮ ಹಿರಿಯರ ಆಶಯದಂತೆ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದೆವೆ ಇದಕ್ಕೆಲ್ಲ ಗುರುಗಳ ಆಶೀರ್ವಾದವೇ ಕಾರಣವಾಗಿದೆ- ಸುಭಾಷ್ ಆರ್ ಗುತ್ತೇದಾರ, ಶಾಸಕರು, ಆಳಂದ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…