ಬಿಸಿ ಬಿಸಿ ಸುದ್ದಿ

ಸಿ.ಪಿ.ಐ. ಪಕ್ಷದ ಕಚೇರಿಗೆ ಬೆಂಕಿ ಹಚ್ಚಿದ ಆರೋಪಿಗಳ ಬಂಧನಕ್ಕೆ ಆಗ್ರಹ: ಬಿಜೆಪಿ ಸರಕಾರದ ವಿರುದ್ಧ ಕಾರ್ಯಕರ್ತರ ಆಕ್ರೋಶ

ಕಲಬುರಗಿ: ಕಳೇದ ಮಧ್ಯರಾತ್ರಿ ಭಾರತ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಮಂಡಳಿ ಕಚೇರಿಗೆ ಬೆಂಕಿ ಹತ್ತಿರುವವರನ್ನು ಖಂಡಿಸಿ, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸುವಂತೆ ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಪಕ್ಷ ಜಿಲ್ಲಾ ಮುಖಂಡರಾದ ಮಾರುತಿ ಮಾನ್ಪಡೆ ಅವರು ಪ್ರತಿಭಟನೆ ನಡೆಸಿ ಆಗ್ರಹಿಸಿದರು.

ಇಂದು ನಗರಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಕೇಂದ್ರ ಸರಕಾರ ತಂದಿರುವ ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ದೇಶದಾದ್ಯಂತ ಎನ್.ಆರ್.ಸಿ ನಡೆಸಲು ಉದ್ದೇಶಿಸಿರುವದು ನಮ್ಮ ದೇಶದ ಸಂವಿಧಾನ ವಿರೋಧಿ, ಜಾತ್ಯಾತೀತ, ಧರ್ಮನಿರಪೇಕ್ಷ ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ಇದನ್ನು ಬಳಸಿಕೊಂಡು ದೇಶದಲ್ಲಿ ಹಿಂದೂ-ಮುಸ್ಲಿಂ ಎನ್ನುವ ದೃವೀಕರಣ ಮಾಡುವದು ಆರ್.ಎಸ್.ಎಸ್.ನ ಉದ್ದೇಶವಾಗಿದ್ದು, ಇದನ್ನು ಜನರು ಅರ್ಥಮಾಡಿಕೊಂಡು ಮತೀಯ ಸಾಮರಸ್ಯವನ್ನು ಕಾಪಾಡಬೇಕೆಂದು ದೇಶದ ಜನರಲ್ಲಿ ಭಾರತದ ಎಡ ಪಕ್ಷಗಳು ಮನವಿ ಮಾಡಿಕೊಳ್ಳುತ್ತಿವೆ ಹಾಗೂ ಜನರು ಅದಕ್ಕೆ ಸ್ಪಂದಿಸುತ್ತಿದ್ದು, ಬಿಜೆಪಿ ತನ್ನ ದುರುದ್ದೇಶದಲ್ಲಿ ಸೋಲುವ ಹತಾಶೆಯಿಂದಾಗಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಕಮ್ಯೂನಿಸ್ಟ್ ಪಕ್ಷದ ಮೇಲೆ ದಾಳಿ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.

ಅದರ ಭಾಗವಾಗಿಯೇ ಭಾರತ ಕಮ್ಯೂನಿಸ್ಟ್ ಪಕ್ಷದ ‘ಕರ್ನಾಟಕ ರಾಜ್ಯ ಮಂಡಳಿ ಕಚೇರಿಗೆ ಬೆಂಕಿ ಹಚ್ಚಿರುವದೇ ಸಾಕ್ಷಿಯಾಗಿದ್ದು, ಇದಕ್ಕೆ ಭಾಜಪ ಹಾಗೂ ಸಂಘ ಪರಿವಾರವೇ ಕಾರಣವಾಗಿರಬಹುದು ಎನ್ನುವ ಬಗ್ಗೆ ಅನುಮಾನವಿದ್ದು, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಂಗಳೂರಿನಲ್ಲಿ ಸಿ.ಎ.ಎ.ಮತ್ತು ಎನ್.ಆರ್.ಸಿ. ವಿರುದ್ದ ನಡೆಸುತ್ತಿರುವ ಹೋರಾಟವನ್ನು ಶಾಂತ ರೀತಿಯಿಂದ ನಡೆಸಲು ಅವಕಾಶ ಕೊಡದೇ ಅಲ್ಲಿ ಗಲಾಟೆಗೆ ಪ್ರಚೋದಿಸಿ ಇಬ್ಬರು ಅಮಾಯಕರ ಹತ್ಯೆ ಮಾಡಿರುವ ಘಟನೆಯನ್ನು ಹಾಗೂ ಅದರ ನಂತರ ಮಂಗಳೂರಿನಲ್ಲಿ ಹಾಕಿರುವ ಕರ್ಫ್ ಅನ್ನೂ ಲೆಕ್ಕಿಸದೇ

ರಾಜ್ಯದ ಪ್ರತಿದಲ್ಲಿ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲಿ ರಾಜ್ಯ ಸರಕಾರಿ ಕಮ್ಯೂನಿಸ್ಟರನ್ನು ಮಾತ್ರಾ ಟಾರ್ಗೆಟ್ ಮಾಡಿ ಬಂಧಿಸುತ್ತಿದ್ದು, ಸಂಘ ಪರಿವಾರಕ್ಕೆ ಕಮ್ಯೂನಿಸ್ಟರನ್ನು ತಾತ್ವಿಕವಾಗಿ ಎದುರಿಸಲು ಆಗದೇ ಅಧಿಕಾರ ದುರುಪಯೋಗ ಪಡಿಸಿಕೊಂಡು ಪೋಲಿಸರ ಬಲದಿಂದ ಮತ್ತು ಗೂಂಡಾಗಿರಿಯ ಮೂಲಕ ಹೆದರಿಸಲು ಪ್ರಯತ್ನಿಸುತ್ತಿರುವದು ಸ್ಪಷ್ಟವಾಗುತ್ತದೆ. ಅದಕ್ಕೆ ಕಮ್ಯೂನಿಸ್ಟ್ ಕಾರ್ಯಕರ್ತರು ಹೆದರುವದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಕಾಂ, ಭೀಮಾಶಂಕರ ಮಾಡಿಯಾಳ, ಜಿಲ್ಲಾ ಕಾರ್ಯದರ್ಶಿ ಕಾಂ. ಶರಣಬಸಪ್ಪ ಮಮಶೇಟ್ಟಿ, ಸಿ.ಪಿ.ಎಂ, ಜಿಲ್ಲಾ ಕಾರ್ಯದರ್ಶಿ ಕಾಂ. ಹೆಚ್.ಎಸ್.ಪತಕಿ, ನಗರ ಕಾರ್ಯದರ್ಶಿ ಕಾಂ. ಮಹೇಶಕುಮಾರ ರಾಠೋಡ, ಕಾಂ, ಮೌಲಾ ಮುಲ್ಲಾ, ಎಸ್.ಎಫ್.ಐ ಸಿದ್ದಲಿಂಗ್ ಪಾಳಾ, ಪ್ರಾಂತ್ಯ ರೈತ ಸಂಘದ ಶಾಂತಪ್ಪ ಪಾಟೀಲ್, ಸೇರಿದಂತೆ ಮುಂತಾದವರು ಇದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 hour ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 hour ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 hour ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

18 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

20 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago