ಬಿಸಿ ಬಿಸಿ ಸುದ್ದಿ

ಕಾಯಕ ದಾಸೋಹ ಪ್ರಜ್ಞೆ ತಂದು ಕೊಟ್ಟ ಬಸವಣ್ಣನವರು

ಶಹಾಪುರ: ಬಸವಾದಿ ಶರಣರು ಜಗತ್ತಿಗೆ ಕಾಯಕ ದಾಸೋಹ ಹಾಗೂ ಇಷ್ಟಲಿಂಗದ ಪ್ರಜ್ಞೆಯನ್ನು ತಂದುಕೊಟ್ಟದ್ದರಿಂದಲೆ ಮನುಷ್ಯರೆಲ್ಲರು ಸ್ವಾಭಿಮಾನದಿಂದ ಬದುಕಲು ಸಾಧ್ಯವಾಯಿತು ಎಂದು ಪೂಜ್ಯ ಶ್ರೀ. ಡಾ. ತೋಟೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿಗಳು ಸ್ಥಳೀಯ ಬಸವಮಾರ್ಗ ಪ್ರತಿಷ್ಠಾನ ಏರ್ಪಡಿಸಿದ್ದ ತಿಂಗಳ ಬಸವ ಬೆಳಕು -೯೪ ಸಭೆಯಲ್ಲಿ ಅನುಭಾವಿಗಳಾಗಿ ಭಾಗವಹಿಸಿ ಮಾತನಾಡಿದರು.

ಮುಂದುವರೆದು ಮಾತನಾಡಿದ ಅವರು , ಬಿಜ್ಜಳ ಆಳ್ವಿಕೆಯಲ್ಲಿ ಸಮಾಜ ಸುಸ್ಥಿರವಾಗಿತ್ತು. ಇದಕ್ಕೆ ಕಾರಣ ಬಸವಣ್ಣನವರು . ಬಿಜ್ಜಳನ ಆಡಳಿತದಲ್ಲಿ ಪ್ರಧಾನಿಯಾಗಿದ್ದ ಬಸವಣ್ಣನವರು ತಮ್ಮ ರಾಜ್ಯದಲ್ಲಿಯ ಎಲ್ಲರಿಗೂ ಕಾಯಕ ದೀಕ್ಷೆಯನ್ನು ಕೊಟ್ಟರು. ಕಾಯಕದಲ್ಲಿ ನಿರತನಾದ ವ್ಯಕ್ತಿ ಗುರು-ಲಿಂಗ- ಜಂಗಮ ಮುಂದಿದ್ದರೂ ಹಂಗು ಹರಿಯಬೇಕೆಂದು ಮನವರಿಕೆ ಮಾಡಿಕೊಟ್ಟರು. ಸ್ವತಃ ದೇವರೆ ಬಂದರೂ ಕಾಯಕವನ್ನು ಮರೆಯಬಾರದು. ಆ ದೇವರ ಕಾಣಬೇಕಾದರೂ ಕಾಯದಲ್ಲಿಯೆ ಕಾಯಬೇಕು ಎಂಬುದನ್ನು ಒತ್ತಿ ಹೇಳಿದರು. ಪ್ರಾಮಾಣಿಕ ಕಾಯಕದ ಮೂಲಕ ಬಂದ ಆರ್ಥಿಕ ಶಕ್ತಿಯನ್ನು ಯಾವ ಹಮ್ಮು ಇಲ್ಲದೆ ಜಂಗಮಕ್ಕೆ ಅರ್ಪಿಸುವುದೆ ದಾಸೋಹವೆಂದು ಬದುಕಿ ತೋರಿದರು. ಶರಣರು ನಡೆದ ದಾರಿ, ನಮಗೆಲ್ಲ ಹೆದ್ದಾರಿಯಾಗಬೇಕೆಂದು ಅಪೇಕ್ಷಿಸಿದರು.ಕಾಯಕದೊಳಗೆ ಲಿಂಗಪೂಜೆಯನ್ನು ಮಾಡಬೇಕೆಂಬುದನ್ನು ತಿಳಿಸಿಕೊಟ್ಟರು.

ಜಾರ್ಜ ಬರ್ನಾಡ ಷಾ ಮಹಾತ್ಮಗಾಂಧೀಜಿಯ ವ್ಯಕ್ತಿತ್ವವನ್ನು ನೋಡಿ: ಗಾಂಧೀಜಿ ನಿಜಕ್ಕೂ ನಮ್ಮ ನಿಮ್ಮಂತೆ ಮಾಂಸ,ಮೂಳೆ, ರಕ್ತ, ಚರ್ಮವನ್ನು ಹೊದ್ದುಕೊಂಡ ಬದುಕಿದರೆ ? ಎಂದು ಆಶ್ಚರ್ಯ ವ್ಯಕ್ತ ಪಡಿಸಿರುವಂತೆ ಬಸವಣ್ಣನವರ ವ್ಯಕ್ತಿತ್ವವೂ ಸಹ ಇಂಥ ಬೆರಗನ್ನು ನಮಗೆ ಉಂಟು ಮಾಡುತ್ತದೆ ಎಂದವರು ಶರಣರ ವ್ಯಕ್ತಿತ್ವವನ್ನು ಮೌಲ್ಯಯುತ ಜೀವನವನ್ನು ಸಭೆಗೆ ವಿವರಿಸಿದರು. ಮಂಡೆ ಮಾಸಿದೊಡೆ ಮಹಾಮಜ್ಜನವ ಮಾಡುವಂತೆ, ವಸ್ತ್ರ ಮಾಸಿದೊಡೆ ಮಡಿವಾಳಂಗಿಕ್ಕುವಂತೆ ಮನ ಮಾಸಿದೊಡೆ ಶರಣರ ಸಂಗವ ಮಾಡುವುದು ಎಂಬುದನ್ನು ಸಮಾಜ ಮರೆಯಬಾರದು ಎಂದು ಎಚ್ಚರಿಸಿದರು.

ಅತಿಥಿಗಳಾಗಿ ಭಾಗವಹಿಸಿದ್ದ ಗುರುಮಿಠಕಲ್ ನ ಪೂಜ್ಯ ಶ್ರೀ ಶಾಂತವೀರ ಸ್ವಾಮೀಜಿಗಳು ಮಾತನಾಡಿ : ಬಸವಾದಿ ಶರಣರ ಅರಿವು ಆಚಾರ ಅನುಭಾವವನ್ನು ಮರೆತಿದ್ದರಿಂದ ನಮ್ಮ ಇಂದಿನ ಸಮಾಜದಲ್ಲಿ ಮೌಢ್ಯ ಕುಣಿಯುತ್ತಿದೆ. ಸ್ವತಂತ್ರ ತಲೆ ಕುತಂತ್ರಿಗಳ ಕೈಯಲ್ಲಿ ಸಿಕ್ಕು ಅತಂತ್ರ ತಲೆಯಾಗಿದೆ. ಯಾವ ದಾರಿದ್ರ್ಯವನ್ನಾದರೂ ಸಹಿಸಬಹುದು. ಆದರೆ ಬೌದ್ಧಿಕವಾದ ದಾರಿದ್ರ್ಯ ಸಹಿಸಲು ಸಾಧ್ಯವಿಲ್ಲ. ಬೌದ್ಧಿಕ ದಾರಿದ್ರ್ಯ ಮಾನಸಿಕ ಗುಲಾಮಗಿರಿಗೆ ತಳ್ಳುತ್ತದೆ. ಜೇಬು ಖಾಲಿಯಾದರೆ ಸಹಿಸಬಹುದು. ಮಿದುಳು ಖಾಲಿಯಾದರೆ ಸಹಿಸಲಾಗದು.ಬಸವಾದಿ ಶರಣರ ವಚನಗಳ ಓದು ನಮ್ಮನ್ನು ಜಾಗ್ರನನ್ನಾಗಿ ಮಾಡುತ್ತದೆ ಎಂದು ತಿಳಿಸಿದರು.

ಭಾಲ್ಕಿಯ ಸಿದ್ಧಲಿಂಗಪ್ಪ ಕಾಕನಾಳೆ ಶ್ರೀಸಾಮಾನ್ಯರೆ ಆಗಿದ್ದರು ಸಮಾಜ ಮುಖಿಯಾಗಿ ಕೆಲಸ ಮಾಡಿದ್ದಾರೆ. ಬಸವ ಬುದ್ಧ ಅಂಬೇಡ್ಕರರ ತತ್ವಗಳನ್ನು ಅಳವಡಿಸಿಕೊಂಡು ಸಮಾಜದಕ್ಕೆ ಮಾದರಿಯಾಗಿ ಬದುಕಿ ಕಣ್ಮರೆಯಾಗಿದ್ದಾರೆ. ರಾಜಕೀಯ ಸಾಮಾಜಿಕ ಧಾರ್ಮಿಕ ಕ್ಷೇತ್ರದಲ್ಲಿದ್ದರೂ ಎಲ್ಲಿಯೂ ಕೊಳೆಯನ್ನು ಅಂಟಿಸಿಕೊಳ್ಳದೆ ಬದುಕಿದ ಶರಣರ ಸ್ಮರಣೆ ತುಂಬಾ ಅವಶ್ಯಕವಾಗಿದೆ ಎಂದು ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಲಿಂಗಣ್ಣ ಸತ್ಯಂಪೇಟೆ ವೇದಿಕೆಯನ್ನು ಶಾಂತಾ ಗಿರೀಶ್ ಕಾಕನಾಳೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಶಿವಣ್ಣ ಇಜೇರಿ ಸಂಚಾಲನೆ ಮಾಡಿದರು. ರಾಜು ಕುಂಬಾರ ಸ್ವಾಗತಿಸಿದರು. ಚಂದ್ರಶೇಖರ ಗೋಗಿ, ಚೆನ್ನಮಲ್ಲಿಕಾರ್ಜುನ ಗುಂಡಾನೋರ, ಅಲ್ಲಮಪ್ರಭು ವಚನ ಗಾಯನ ಮಾಡಿದರು. ಬಸವರಾಜ ಸಿನ್ನೂರ ವಂದನೆಗಳನ್ನು ತಿಳಿಸಿದರು.

ಸಭೆಯಲ್ಲಿ ಚೇತನ ಮಳಗ, ಬಸವರಾಜ ಅರುಣಿ, ಚಂದ್ರಶೇಖರ ಮಸ್ಕಿ, ವಿಜಯ ಲಕ್ಷ್ಮಿ, ಗೋದಾವರಿ ಕೋರಿ, ಮಹಾದೇವಿ ಕುಂಬಾರ, ಸಂಗಮ್ಮ ಮುಡಬೂಳ, ಗುಂಡಪ್ಪ ತುಂಬಗಿ, ಶಾಂತಗೌಡ ಆಲಭಾವಿ, ಮಾನಪ್ಪ ಶಿರವಾಳ, ಬಸವರಾಜ ಹುಣಸಗಿ, ಸಾಯಿಕುಮಾರ ಇಜೇರಿ, ಚಂದ್ರಶೇಖರ ಜಾಕಾ, ಅಡಿವೆಪ್ಪ ಜಾಕ, ಬಸವರಾಜ ಮುಂಡಾಸ, ಕಾವೇರಿ ಲಾಳಸಂಗಿ, ಕವಿತಾ ಕರುಣಾ, ನಾಗರತ್ನ ಜಾಲವಾದಿ , ಶರಣಪ್ಪ ಮುಂಡಾಸ , ಗುಂಡಣ್ಣ ಕಲಬುರ್ಗಿ, ಭೀಮರಾಯ ಲಿಂಗೇರಿ, ಯಂಕಪ್ಪ ಅಲೆಮನಿ, ಸುಧಾಕರ ಕುಲ್ಕರ್ಣಿ, ಭೀಮನಗೌಡ ಶಿಕ್ಷಕರು, ಮುಂತಾದವರು ಭಾಗವಹಿಸಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

26 mins ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

28 mins ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

30 mins ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

17 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

19 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago