ಕಲಬುರಗಿ,ವಾಡಿ: ಕೇಂದ್ರ ಬಿಜೆಪಿ ಸರಕಾರ ಜಾರಿಗೆ ತರಲು ಮುಂದಾಗಿರುವ ಎನ್‌ಆರ್‌ಸಿ ಕಾಯ್ದೆ ಕೇವಲ ಮುಸಲ್ಮಾನರ ಕೊರಳ ಉರುಳು ಎಂದು ಭಾವಿಸುದು ತಪ್ಪು. ಅದು ಭಾರತದ ಪ್ರತಿಯೊಬ್ಬ ನಾಗರಿಕನ ಸಂಕಟ ಎಂದು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿ ಸದಸ್ಯ ಕಾಮ್ರೇಡ್ ಎಚ್.ವಿ.ದಿವಾಕರ ಎಚ್ಚರಿಸಿದರು.
ಪೌರತ್ವ ತಿದ್ದುಪಡಿ ಮಸೂಧೆ (ಸಿಎಎ) ಮತ್ತು ಎನ್‌ಆರ್‌ಸಿ ಕಾಯ್ದೆಗಳನ್ನು ವಿರೋಧಿಸಿ ಎಐಡಿಎಸ್‌ಒ ಹಾಗೂ ಎಐಡಿವೈಒ ವತಿಯಿಂದ ರವಿವಾರ ಪಟ್ಟಣದ ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಏರ್ಪಡಿಸಲಾಗಿದ್ದ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು. ಎಲ್ಲಾ ಜಾತಿ ವರ್ಗದ ಜನರು ಸರತಿಯಲ್ಲಿ ನಿಂತು ಪೌರತ್ವ ಸಾಭೀತು ಮಾಡಬೇಕಾದ ಪರಸ್ಥಿತಿ ಎದುರಾಗುತ್ತದೆ. ಇದನ್ನು ನಾವು ಒಪ್ಪಿಕೊಳ್ಳಬೇಕಾ? ಸಿಎಎ ಕಾಯ್ದೆ ಬಡ ಜನ ವಿರೋಧಿಯಾಗಿದೆ. ಬಹುಸಂಖ್ಯಾತ ಜನರ ವಿರೋಧದ ನಡುವೆಯೂ ಗ್ರಹಮಂತ್ರಿ ಎನ್‌ಆರ್‌ಸಿ ನಡೆಸಲಾಗುವುದು ಎಂದು ಘೋಷಿಸಿದ್ದಾರೆ. ಬಿಜೆಪಿ ಎಲ್ಲಾ ರಂಗದಲ್ಲೂ ಸೋತಿರುವುದನ್ನು ಮರೆಮಾಚಲು ಈ ಕಾಯ್ದೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ದೂರಿದರು.
ಅತೀವ ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ, ಬಡತನ, ಬೆಲೆ ಏರಿಕೆ, ಉದ್ಯೋಗ ನಾಶ, ರೈತರ ಆತ್ಮಹತ್ಯೆಗಳು, ಜಿಡಿಪಿ ಕುಸಿತ, ಮಹಿಳೆಯರ ಮೇಲಿನ ಪಾತಕಗಳು, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಇವು ಜನಾಕ್ರೋಶಕ್ಕೆ ಕಾರಣವಾಗಿದ್ದು, ಇವುಗಳಿಂದ ಜನರ ಗಮನ ಬೇರೆಡೆ ಸೆಳೆಯುವ ಹುನ್ನಾರವಾಗಿದೆ. ಕೋಮುವಾದಿ ರಾಜಕಾರಣ ಮುನ್ನೆಡಸಲು ಬಿಜೆಪಿಗೆ ಈ ಕಾಯ್ದೆ ಅಪಾರ ಅವಕಾಶ ಕಲ್ಪಿಸಿಕೊಟ್ಟಿದೆ. ಬಿಜೆಪಿ ಜಾರಿಗೊಳಿಸುತ್ತಿರುವ ಜನವಿರೋಧಿ ಕಾನೂನುಗಳ ಹಿಂದೆ ಶೋಷಕ ಬಂಡವಾಳಿಗರಿದ್ದಾರೆ. ಧರ್ಮದ ಆಧಾರದ ಮೇಲೆ ಜನರ ಐಕ್ಯತೆ ಮುರಿಯುವ ಷಢ್ಯಂತ್ರದ ಹಿಂದೆ ಮುಖೇಶ ಅಂಬಾನಿ ಮತ್ತು ಗೌತಮ ಅಧಾನಿ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾಮ್ರೇಡ್ ದಿವಾಕರ, ಸಿಎಎ-ಎನ್‌ಆರ್‌ಸಿ ಕಾಯ್ದೆ ಹಿಮ್ಮೆಟ್ಟಿಸಲು ಜನರು ಜಾತಿ ಧರ್ಮಗಳ ಚೌಕಟ್ಟು ಮೀರಿ ಒಕ್ಕೂಟ ಹೋರಾಟಗಳನ್ನು ಕಟ್ಟಬೇಕು ಎಂದು ಕರೆ ನೀಡಿದರು.
ಎಸ್‌ಯುಸಿಐ (ಸಿ) ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಕಾ.ವೀರಭದ್ರಪ್ಪ ಆರ್.ಕೆ ಮಾತನಾಡಿ, ಪೊಲೀಸ್ ಬಲದಿಂದ ಭುಗಿಲೆದ್ದ ಜನ ಹೋರಾಟಗಳನ್ನು ದಮನ ಮಾಡಲು ಸಾಧ್ಯವಿಲ್ಲ. ಸುಳ್ಳುಗಳನ್ನು ಹರಿಬಿಡುವ ಮೂಲಕ ಬಿಜೆಪಿ ಜನರನ್ನು ಎಷ್ಟು ದಿನ ಮೋಸ ಮಾಡಲು ಸಾಧ್ಯ. ಕಾಯ್ದೆಗಳು ವಾಪಸ್ಸಾಗದಿದ್ದರೆ ಜನರು ದಂಗೆ ಎಳುತ್ತಾರೆ ಎಂದರು.
ಮಹಾತ್ಮಾ ಗಾಂಧಿ ಶಾಲೆಯ ಕಾರ್ಯದರ್ಶಿ ಶೇಖ ಅನ್ವರ್, ಎಐಡಿವೈಒ ಕಾರ್ಯದರ್ಶಿ ಮಲ್ಲಿನಾಥ ಹುಂಡೇಕಲ್, ಎಐಡಿಎಸ್‌ಒ ಕಾರ್ಯದರ್ಶಿ ವೆಂಕಟೇಶ ದೇವದುರ್ಗಾ, ಮಹೇಶ ಎಸ್.ಜಿ, ಮಲ್ಲಣ್ಣ ದಂಡಬಾ, ಯೇಶಪ್ಪಾ ಕೇದಾರ, ಶರಣು ಹೇರೂರ, ಮಲ್ಲಿಕಾರ್ಜುನ ಗಂದಿ, ಗೌತಮ ಪರತೂರಕರ, ವಿಠ್ಠಲ ರಾಠೋಡ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು. ನಂತರ ಎನ್‌ಆರ್‌ಸಿ ಮತ್ತು ಸಿಎಎ ಕಾಯ್ದೆಗಳ ಕುರಿತು ಆರೋಗ್ಯಕರ ಸಂವಾದ ನಡೆಯಿತು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…