ಬಿಸಿ ಬಿಸಿ ಸುದ್ದಿ

ಜಿಲ್ಲೆಯಲ್ಲಿ 150 ತೊಗರಿ ಖರೀದಿ ಕೇಂದ್ರ ಸ್ಥಾಪನೆ: ಹೆಸರು ನೋಂದಣಿಗೆ ರೈತರಲ್ಲಿ ಜಿಲ್ಲಾಧಿಕಾರಿ ಮನವಿ

ಕಲಬುರಗಿ: ಕೇಂದ್ರ ಸರ್ಕಾರದ ೨೦೧೯-೨೦ನೇ ಸಾಲಿನ ಬೆಂಬಲ ಬೆಲೆ ಯೋಜನೆ ಹಾಗೂ ರಾಜ್ಯ ಸರ್ಕಾರದ ಪ್ರೋತ್ಸಾಹ ಧನ ಸೇರಿ ಪ್ರತಿ ಕ್ವಿಂಟಲ್‌ಗೆ ೬೧೦೦ ರೂ.ಗಳ ದರದಲ್ಲಿ ರೈತರಿಂದ ತೊಗರಿ ಖರೀದಿಸಲು ಕಲಬುರಗಿ ಜಿಲ್ಲೆಯಲ್ಲಿ ಒಟ್ಟು ೧೫೦ ತೊಗರಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ತೊಗರಿ ಬೆಳೆದ ರೈತರು ಅವಶ್ಯಕ ದಾಖಲಾತಿಗಳೊಂದಿಗೆ ತಮ್ಮ ಹತ್ತಿರದ ಯಾವುದೇ ತೊಗರಿ ಖರೀದಿ ಕೇಂದ್ರಕ್ಕೆ ತೆರಳಿ ಆನ್‌ಲೈನ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಕಲಬುರಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿಯ ಅಧ್ಯಕ್ಷ ಶರತ್ ಬಿ. ಅವರು ಮನವಿ ಮಾಡಿಕೊಂಡಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತದ ೧೧೨ ಮತ್ತು ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತದ ೩೮ ಸೇರಿ ಒಟ್ಟು ೧೫೦ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಪ್ರತಿ ಎಕರೆಗೆ ೫ ಕ್ವಿಂಟಲ್ ಗರಿಷ್ಟ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿಷ್ಟ ೧೦ ಕ್ವಿಂಟಲ್ ತೊಗರಿ ಉತ್ಪನ್ನ ಮಾತ್ರ ಖರೀದಿಸಲಾಗುತ್ತದೆ.

ನೊಂದಣಿಗೆ ೨೦ ದಿನ ಮತ್ತು ಖರೀದಿಗೆ ೩೦ ದಿನಗಳ ಅವಕಾಶ ನೀಡಲಾಗಿದ್ದು, ಈ ಅವಧಿಯಲ್ಲಿ ರೈತರು ನೊಂದಣಿ ಮತ್ತು ತೊಗರಿ ಮಾರಾಟ ಮಾಡುವ ಮೂಲಕ ಸಹಕರಿಸಬೇಕು.

ತೊಗರಿ ಖರೀದಿ ಕೇಂದ್ರಗಳಲ್ಲಿ ತೊಗರಿ ಉತ್ಪನ್ನವನ್ನು ಖರೀದಿಸುವ ಪೂರ್ವದಲ್ಲಿ ರೈತರು ನೀಡುವ ವಿವರವನ್ನು ನ್ಯಾಫೆಡ್ ಸಂಸ್ಥೆಯ ತಂತ್ರಾಂಶದೊಂದಿಗೆ ಭೂಮಿ UIDAI ಮತ್ತು ಬೆಳೆ ಸಮೀಕ್ಷೆ ದತ್ತಾಂಶಗಳೊಂದಿಗೆ ತಾಳೆ ಮಾಡಿ ಪರಿಶೀಲಿಸಿ ನಂತರ ನೋಂದಾಯಿಸಿಕೊಳ್ಳಲಾಗುತ್ತದೆ. ಒಂದು ವೇಳೆ ಬೆಳೆ ದರ್ಶಕದಲ್ಲಿ ಬೆಳೆ ಬೆಳೆಯದೆ ಇರುವುದು ಕಂಡು ಬಂದಲ್ಲಿ ಅಂತಹ ರೈತರಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಧೃಢೀಕೃತ ಪಹಣಿ ಪತ್ರ ನೀಡಬೇಕು. ದೃಢೀಕೃತ ಪಹಣಿ ಪತ್ರ ನೀಡುವಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿಗಳು ಸುಳ್ಳು ದಾಖಲಾತಿ ಹಾಗೂ ಅವ್ಯವಹಾರ ಕಂಡುಬಂದಲ್ಲಿ ಶಿಸ್ತಿನ ಕ್ರಮ ಅನಿವಾರ್ಯ ಎಂದು ಜಿಲ್ಲಾಧಿಕಾರಿ ಶರತ್ ಬಿ. ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಪಹಣಿಯಲ್ಲಿರುವ ರೈತರ ಹೆಸರಿನ ಆಧಾರ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಉತ್ಪನ್ನದ ಮೌಲ್ಯವನ್ನು ಂAadhar Enabled Payment System ಮೂಲಕ ಜಮಾ ಮಾಡಲಾಗುವುದು ಎಂದಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತದ ೧೧೨ ಖರೀದಿ ಕೇಂದ್ರಗಳು ಇಂತಿವೆ. ಕಲಬುರಗಿ ತಾಲೂಕು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಭೀಮಳ್ಳಿ, ಬೇಲೂರ(ಕೆ), ಅವರಾದ(ಬಿ), ಹಾಗರಗಾ, ಫಿರೋಜಾಬಾದ, ಹರಸೂರ, ಕುಮಸಿ, ಡೊಂಗರಗಾಂವ್, ಸಾವಳಗಿ(ಬಿ), ನಂದೂರ(ಬಿ), ಕವಲಗಾ(ಬಿ), ಶರಣಸಿರಸಗಿ(ಹಡಗಿಲ್ ಹಾರುತಿ), ಹೊನ್ನಕಿರಣಗಿ, ಜಂಬಗಾ ಹಾಗೂ ಪಟ್ಟಣ. ಸೇಡಂ ತಾಲೂಕು: ಕಾನಾಗಡ್ಡಾ, ಕುಕ್ಕುಂದಾ, ಕೋಲಕುಂದಾ, ಮಳಖೇಡ್, ಸಿಂಧನಮಡು, ಮೋತಕಪಲ್ಲಿ, ಕುರಕುಂಟಾ, ನಾಡೆಪಲ್ಲಿ, ಮೇದಕ್, ಹಾಬಾಳ(ಟಿ) ಹಾಗೂ ರಂಜೋಳ.
ಅಫಜಲಪೂರ ತಾಲೂಕು: ಮಣ್ಣೂರ, ಮಾಶಾಳ, ಅತನೂರ, ಕಲ್ಲೂರ್(ಡಿ), ದೇವಲ ಗಾಣಗಾಪುರ, ಭೈರಾಮಡಗಿ, ಬಂದರವಾಡ, ಗೊಬ್ಬೂರ್(ಬಿ), ಮಲ್ಲಾಬಾದ, ಭೋಸಗಾ, ಗೌರ(ಬಿ) ಹಾಗೂ ಬಳ್ಳೂರಗಿ. ಆಳಂದ ತಾಲೂಕು: ಕಡಗಂಚಿ, ನಿಂಬಾಳ, ಮುನ್ನಳ್ಳಿ, ಕಮಲಾನಗರ, ಖಜೂರಿ, ಯಳಸಂಗಿ, ಅಂಬಲಗಾ, ರುದ್ರವಾಡಿ, ಸನಗುಂದ (ಬೆಳಮಗಿ), ಜಂಬಗಾ(ಜೆ), ಮಾದನಹಿಪ್ಪರಗಾ, ಪಡಸಾವಳಗಿ, ಆಳಂದ ಪ್ಯಾಕ್ಸ್ ಸಂಗೋಳಗಿ(ಬಿ), ಹೀರೊಳ್ಳಿ, ಹೊದಲೂರ, ವಿ.ಕೆ.ಸಲಗರ, ನರೋಣಾ, ಏಲೆನಾವದಗಿ ಮತ್ತು ಕೊಡಲಹಂಗರಗಾ.
ಚಿಂಚೋಳಿ ತಾಲೂಕು: ನಿಡಗುಂದಾ, ಸುಲೇಪೇಟ್, ಗಡಿಕೇಶ್ವರ, ಕನಕಪುರ, ಶಾದಿಪುರ, ಸಾಲೆಬೀರನಳ್ಳಿ, ಚಂದನಕೇರಾ, ಪೋಲಕಪಳ್ಳಿ, ಕೋಡ್ಲಿ, ಚೇಂಗಟಾ, ಚಿಂತಪಲ್ಲಿ, ಗರಗಪಳ್ಳಿ, ಮಿರಿಯಾಣ, ರಟಕಲ್, ಕೊಳ್ಳೂರ, ಕುದನೂರ, ಕೆರೊಳ್ಳಿ ಹಾಗೂ ಗಾರಂಪಳ್ಳಿ. ಚಿತ್ತಾಪೂರ ತಾಲೂಕು: ಕೊಳ್ಳೂರ, ಭೀಮನಳ್ಳಿ, ರಾವೂರ, ಗುಂಡಗುರ್ತಿ, ದಂಡೋತಿ, ಮರತೂರ, ಟೆಂಗಳಿ, ಭಂಕೂರ, ಅಳ್ಳೋಳಿ, ಪೇಟಶಿರೂರ್, ಕಮರವಾಡಿ, ಕುಂದನೂರ್, ಬಾಗೋಡಿ, ದಿಗ್ಗಾಂವ್, ಹಲಚೇರಾ, ಕೊಡದೂರ, ಗೋಟೂರ್, ಆಲೂರ ಹಾಗೂ ಹೆಬ್ಬಾಳ. ಜೇವರ್ಗಿ ತಾಲೂಕು: ನೆಲೋಗಿ, ಮಳ್ಳಿ, ಬಳಬಟ್ಟಿ, ಕಲ್ಲೂರ್(ಕೆ), ಮುತ್ತಕೋಡ, ಮಂದೇವಾಲ್, ಗುಡೂರ್ ಎಸ್.ಎ, ಸುಂಬಡ್, ಕೋಳಕೂರ್(ಜೇವರ್ಗಿ), ಅಂಕಲಗಾ, ಹರನೂರ್, ಇಜೇರಿ(ಯಾಳವಾರ), ಆಲೂರು, ಗಂವ್ಹಾರ, ಹರವಾಳ, ಕುಕನೂರ, ನರಿಬೋಳಿ ಹಾಗೂ ಯಡ್ರಾಮಿ.
ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ದಿ ಮಂಡಳಿ ನಿಯಮಿತದ ಖರೀದಿ ಕೇಂದ್ರಗಳು. ಕಲಬುರಗಿ ತಾಲೂಕು: ಮಹಾಗಾಂವ, ಓಕಳಿ, ಮಿಣಜಗಿ, ಸಣ್ಣೂರ ಹಾಗೂ ಹಾಗರಗುಂಡಗಿ. ಸೇಡಂ ತಾಲೂಕು: ಚಂದಾಪೂರ, ಮುಧೋಳ, ಯಡಗಾ, ಹಂದರಕಿ, ಅಡಕಿ ಹಾಗೂ ಕೋಡ್ಲಾ. ಅಫಜಲಪೂರ ತಾಲೂಕು: ಚಿಣಮಗೇರಾ, ಕರಜಗಿ, ಹಸರಗುಂಡಗಿ ಹಾಗೂ ತೆಲ್ಲೂರ. ಆಳಂದ ತಾಲೂಕು: ನಿಂಬರ್ಗಾ, ಸರಸಂಬಾ, ತಡಕಲ್, ಕವಲಗಾ ಹಾಗೂ ಮೋಘಾ (ಕೆ). ಚಿಂಚೋಳಿ ತಾಲೂಕು: ಐನಾಪೂರ, ಐನೊಳ್ಳಿ, ಚಿಮ್ಮನಚೋಡ್. ಹಸರಗುಂಡಗಿ ಹಾಗೂ ಮೋಘಾ. ಚಿತ್ತಾಪೂರ ತಾಲೂಕು: ಅರಣಕಲ್, ಹಲಕಟ್ಟಾ, ಕಾಳಗಿ, ನಾಲವಾರ, ಹೆರೂರ, ಮಂಗಲಗಿ, ಕರದಾಳ, ಅಲೂರ(ಬಿ) ಹಾಗೂ ಡೋಣಗಾಂವ. ಜೇವರ್ಗಿ ತಾಲೂಕು: ಅರಳಗುಂಡಗಿ, ಆಂದೊಲಾ, ಜೇರಟಗಿ ಹಾಗೂ ಅಂಬರಖೇಡ್.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

9 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

11 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

18 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

18 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

19 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago