ಬಿಸಿ ಬಿಸಿ ಸುದ್ದಿ

ಭೀಮಾಕೊರೆಗಾಂವ ವಿಜಯೋತ್ಸವ ಸ್ವಾಭಿಮಾನದ ಸಂಕೇತ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಗಾಂಧಿ ಸಭಾಂಗಣದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳ ಒಕ್ಕೂಟ ವತಿಯಿಂದ ಹಮ್ಮಿಕೊಂಡ ಭೀಮಾಕೊರೆಗಾಂವ ವಿಜಯೋತ್ಸವ ಅಂಗವಾಗಿ ಕಾರ್ಯಕ್ರಮವನ್ನು ವಿಭಿನ್ನ ಮತ್ತು ವಿಶಿಷ್ಟವಾಗಿ ಭಾರತ ಸಂವಿಧಾನದ ಪ್ರಸ್ತಾವನೆ ವಾಚನೆ ಮಾಡುವುದರ ಮೂಲಕವಾಗಿ ಚಾಲನೆ ನೀಡಲಾಯಿತು.

ಪ್ರಾಸ್ತಾವಿಕವಾಗಿ ಪ್ರೊ. ಎಸ್.ಪಿ. ಮೇಲಕೇರಿಯವರು  ಮಾತನಾಡುತ್ತಾ ಯುವ ಪೀಳಿಗೆಗೆ ಈ ಭೀಮಾಕೊರೆಗಾಂವ ದಲಿತ ಸ್ವಾಭಿಮಾನದ ಸಂಕೇತ ಶಕ್ತಿ ಸಾಮರ್ಥ್ಯದ ವ್ಯಕ್ತಿತ್ವ ಎಂಬುದನ್ನು ಸಿದ್ಧನಾಕನ ತಂಡದ ಬಲಿಷ್ಟತೆ ಕುರಿತು ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂಬುದನ್ನು ತಿಳಿಸಿದರು.

ಭೀಮಾಕೊರೆಗಾಂವ ವಿಜಯೋತ್ಸವ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ, ಕಲಾ ನಿಕಾಯದ ಡೀನ್‌ರಾದ ಪ್ರೊ. ಎಚ್.ಟಿ. ಪೋತೆ ಅವರು ಮಾತನಾಡುತ್ತಾ, ಮಹಾರ್ ಬಟಾಲಿಯನ್, ಮಾಂಗ್ ಬಟಾಲಿಯನ್, ಚಮ್ಮಾರ ಬಟಾಲಿಯನ್, ಈಸ್ಟ ಇಂಡಿಯಾ ಕಂಪನಿ ಬಂದ ಮೇಲೆ ಸೈನ್ಯದಲ್ಲಿ ಸ್ಥಾನ ಪಡೆದರು. ಈ ದೇಶದಲ್ಲಿ ಜೀವಕ್ಕಿಂತಲೂ ಜಾತಿಯತೆಯೇ ಮೇಲು ಎಂಬ ನಿಲುವಿನಲ್ಲಿ ಭಾರತದ ಜಾತಿವಾದಿಗಳು ನಿರಂತರವಾಗಿ ದೌರ್ಜನ್ಯ ನಡೆಸುತ್ತಿದ್ದಾರೆ.

ಏಡ್ಸ ರೋಗಿಯೊಬ್ಬ ಏಡ್ಸ ಪೀಡಿತ ಮಹಿಳೆಯನ್ನು ಮದುವೆಯಾಗುತ್ತೇನೆ, ಆದರೆ ಅವಳು ಎಸ್ಸಿ ಎಸ್ಟಿಯಾಗಿರಬಾರದು ಎಂಬ ಜಾಹಿರತನ್ನು ಪತ್ರಿಕೆಗಳಲ್ಲಿ ಹಾಕುತ್ತಾನೆ. ಮನೆ ಬಾಡಿಗೆಗೆ ಇದೆ ಎಸ್ಸಿ, ಎಸ್ಟಿಯನ್ನು ಹೊರತು ಪಡಿಸಿ ಎಂಬ ಬೋರ್ಡ ನೇತುಹಾಕುತ್ತಾರೆ ಇವರಿಗೆಲ್ಲ ಜಾತಿಯೇ ಮುಖ್ಯವಾಗುತ್ತದೆ ಅಂತಹ ದೇಶ ಭಾರತ. ಅಸ್ಪೃಶ್ಯತೆ ಕೇವಲ ಮೇಲ್ವರ್ಗದವರಿಂದ ಜಾತಿಯತೆ ನಡೆಯುತ್ತಿಲ್ಲ ಇಂದು ಹಿಂದೂಳಿದ ವರ್ಗದವರಿಂದ ಇಂದು ದೌರ್ಜನ್ಯಗಳು ನಡೆಯುತ್ತಿವೆ, ಅಸ್ಪೃಶ್ಯತೆ ಆಚರಿಸುತ್ತಿದ್ದಾರೆ. ೮೦%ಕ್ಕೂ ಹೆಚ್ಚು ಶೂದ್ರರಿರುವ ಈ ದೇಶದಲ್ಲಿ ಹೊಂದು ಧರ್ಮದ ತತ್ವಗಳನ್ನು ಚಾಚು ತಪ್ಪದೆ ಪಾಲಿಸುತ್ತಾರೆ, ಆ ಕಾರಣಕ್ಕಾಗಿ ನೀವು ವೈಚಾರಿಕತೆಯಿಂದ ಮತ, ಅಧಿಕಾರ, ಚಿಂತನೆ ಅಕ್ಷರ ಮೂಡಿಸಿಕೊಳ್ಳಬೇಕಾದ ಅವಶ್ಯಕತೆಯಿದೆ ಎಂದು ಕಳವಳ ವ್ಯಕ್ತಪಡಿಸಿದರು. ಲಕ್ಷಾಂತರ ಸೈನ್ಯವಿರುವ ಪೇಶ್ವಗಳನ್ನು ಯುದ್ಧದಲ್ಲಿ ಕೇವಲ ೫೦೦ ಸೈನಿಕರಿರುವ ಮಹಾರ ಬಟಾಲಿಯನ್ನನ ಸಿದ್ಧನಾಕ್ ಪಡೆ ಪೇಶ್ವಗಳನ್ನು ಹೀನಾಯವಾಗಿ ಸೋಲಿಸಿ ಯುದ್ದದಲ್ಲಿ ಗೆದ್ದು, ಮಹಾರ್ ಸ್ವಾಭಿಮಾನ ಮೆರೆದರು. ಇದನ್ನು ಜಗತ್ತಿಗೆ ತಿಳಿಸಿಕೊಟ್ಟವರು ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರ ಕುಲಪತಿ ಡಾ. ದೇವಿದಾಸ ಮಾಲೆ ವಹಿಸಿದ್ದರು, ವೇದಿಕೆಯ ಮೇಲೆ ಪ್ರೊ. ಸಂಜುಕುಮಾರ, ಪ್ರೊ. ಬಿ. ವಿಜಯ್, ಪ್ರೊ. ಕೆ. ಸಿದ್ದಪ್ಪ, ಪ್ರೊ. ವ್ಹಿ.ಟಿ. ಕಾಂಬಳೆ, ಹಂಪಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಜೈಭೀಮ ಆರ್. ಕಟ್ಟಿ, ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಬಾಬುರಾವ್ ಬೀಳಗೆ  ಉಪಸ್ಥಿತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

2 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

11 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

11 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

11 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago