ಬಿಸಿ ಬಿಸಿ ಸುದ್ದಿ

ಮಾನವೀಯತೆ ಮರೆತ ರಾಜ್ಯ ಸರಕಾರ: ಮಾನ್ಪಡೆ ಆರೋಪ

ಕಲಬುರಗಿ: ಪೌರತ್ವ ಕಾಯ್ದೆ ವಿರೋಧಿ ದೇಶವ್ಯಾಪಿ ಡಿ. ೧೯ ರಂದು ನಡೆದ ಮುಷ್ಕರ ಬೆಂಬಲಿ ಶಾಂತಿಯುತ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯನ್ನು ಹತ್ತಿಕ್ಕಲು ಕೇಂದ್ರ ಹಾಗೂ ರಾಜ್ಯ ಕಾನೂನು ತಮ್ಮ ವಿವೇಚನೆಯಂತೆ ಬಳಸಿಕೊಂಡು ಅಮಾಯಕ ಕಾರ್ಮಿಕರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಲಾಯಿತು. ಮೃತ ಕುಟುಂಬಕ್ಕೆ ಪರಿಹಾರ ಧನ ಹಿಂದಕ್ಕೆ ಪಡೆದ ರಾಜ್ಯ ಸರ್ಕಾರ ಮಾನವೀಯತೆಯನ್ನೆ ಮರೆತಿದೆ ಎಂದು ಪೀಪಲ್ಸ್ ಫೋರಂ ಕಲಬುರಗಿಯ ಮುಖಂಡ ಮಾರುತ್ತಿ ಮಾನ್ಪಡೆ ಆರೋಪಿಸಿದರು.

ಅವರು ಪತ್ರಿಕಾ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪೊಲೀಸರು ಉದ್ದೇಶಪೂರಕವಾಗಿ ಶಾಂತಿಯುತ ಪ್ರತಿಭಟನೆ ನಡೆಯುವ ಜನರ ಮೇಲೆ ಮೊದಲು ಲಾಠಿ ಬಲ ಪ್ರಯೋಗ ಮಾಡಿದರು. ನಂತರ ಅಮಾಯಕರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಗೋಲಿಯನ್ನು ಹಾರಿಸಿದ ಪೊಲೀಸ್ ಅಧಿಕಾರಿಯು ಇನ್ನೂ ಸತ್ತಿಲ್ಲವೇ ಎಂದು ಇನ್ನೊಬ್ಬ ಪೊಲೀಸ್ ಅಧಿಕಾರಿಗೆ ಕೇಳುವ ವಿಡಿಯೋ ವೈರಲ್ ಆಗಿದೆ. ಅದನ್ನು ಮುಚ್ಚಿ ಹಾಕಲು ವಿಡಿಯೋ ಎಡಿಟ್ ಮಾಡಿದ ಇತರೆ ವಿಡಿಯೋಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಬಿಟ್ಟು ತೆಪೆ ಹಚ್ಚು ಕೆಲಸ ಮಂಗಳೂರು ಪೊಲೀಸರು ಮಾಡಿದ್ದಾರೆ ಎಂದು ಕೀಡಿಕಾರಿದರು.

ಘಟನೆಯಲ್ಲಿ ಮೃತ ಪಟ್ಟ ಇಬ್ಬರು ಯುವಕರು ಕೂಲಿ ಕಾರ್ಮಿಕರಾಗಿದ್ದಾರೆ. ಅವರುದುಡಿದ ತಂದ ಹಣದಲ್ಲಿ ಮನೆಯವರ ಜೀವನ ಸಾಗಿಸುತ್ತಿದ್ದರು. ಮನೆಗೆ ಆಧಾರ ಸ್ತಂಭವಾಗಿದ್ದವರೇ ಮೃತ ಪಟ್ಟಮೇಲೆ ಆ ಮನೆಗಳಿಗೆ ಆಸರೆ ಇಲ್ಲದಂತಾಗಿದೆ. ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳ ಮುಖಾಂತರ ತನಿಖೆ ನಡೆಸಲು ಆದೇಶಿಸಿದ್ದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಇದಕ್ಕೆ ಸ್ಥಳಿಯ ಬಿಜೆಪಿ ನಾಯಕರ ಕುಮ್ಮಕ್ಕು ಇದೆ ಎಂದು ಆರೋಪಿಸಿದ ಅವರು ನ್ಯಾಯಂಗ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಎನ್‌ಆರ್‌ಸಿಯನ್ನು ನಡೆಸುವದಿಲ್ಲ ಎಂದು ಒಂದು ಕಡೆ ಹೇಳಲಾಗುತ್ತಿದೆ. ಇನ್ನೊಂದು ಅದನ್ನು ಜಾರಿಗೆ ಮಾಡಲು ಚಿಂತನೆ ನಡೆದಿದೆ ಎಂದು ಇನ್ನೊಬ್ಬ ನಾಯಕ ಹೇಳುತ್ತಾನೆ. ಇಲ್ಲಿ ತಮ್ಮ ಹಿರಿಯ ವಯಸ್ಸು ಮತ್ತು ಅವರ ಈ ದೇಶದ ನಾಗರಿಕರು ಎಂದು ಹೇಳುವದಕ್ಕೆ ಪ್ರಮಾಣ ಪತ್ರ ತಂದು ಕೊಡಬೇಕು ಅದನ್ನು ಎಲ್ಲಿಂದ ತರಬೇಕು ಎನ್ನುದೇ ಒಂದು ಗೊಂದಲವಾಗಿದೆ ಎಂದು ಮುಖಂಡರಾದ ನಾಸೀರ ಹುಸೇನ್ ಉಸ್ತಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪ್ರಶ್ನಿಸಿದ ಅವರು ತಕ್ಷಣ ಎನ್‌ಆರ್‌ಸಿ ತಡೆಯಬೇಕು ಎಂದು ಒತ್ತಾಯಿಸಿದರು.

ಪೌರತ್ವ ಕಾಯ್ದೆಯು ಕೇವಲ ಮುಸ್ಲಿಂರಿಗೆ ಏಕೆ? ನೆರೆಯ ಪಾಕಿಸ್ತಾನ, ಅಫಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬರುವ ವಲಸಿಗರನ್ನು ತಗೆಯಲು ಪೌರತ್ವ ಕಾಯ್ದೆ ತರಲಾಗಿದೆ. ಆ ದೇಶಗಳಿಂದ ಬರುವ ಹಿಂದು, ಕ್ರಿಶ್ಚಿಯನ್, ಇತರೆ ಧರ್ಮಿಯರು ಬಂದರೆ ಅವರಿಗೆ ಪೌರತ್ವ ನೀಡಲಾಗುತ್ತದೆ. ಕೇವಲ ಮುಸ್ಲಿಂರು ಬಂದರೆ ಅವರಿಗೆ ನೀಡಲು ನಿರಾಕರಣೆ ಮಾಡುತ್ತಿರುವದು ಧರ್ಮವನ್ನು ವಿಭಜಿಸಿ ದೇಶದಲ್ಲಿ ಆಶಾಂತಿ ಮೂಡಿಸುವದು ಕೇಂದ್ರ ಬಿಜೆಪಿ ಸರಕಾರದ ಉದ್ಧೆಶವಾಗಿದೆ ಎಂದು ಇನ್ನೊಬ್ಬ ಮುಖಂಡ ಅಸಗರ್ ಚುಲಬುಲ್ ಅವರು ಬೇಸರ ವ್ಯಕ್ತ ಪಡಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

9 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

19 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

19 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

19 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago