ಸುರಪುರ: ಬ್ಯಾಂಕ್‌ಗಳು ಇರುವುದೆ ಗ್ರಾಹಕರ ಸೇವೆಗೆ,ಗ್ರಾಹಕರಿಂದ ಹಣ ಕಟ್ಟಸಿಕೊಳ್ಳುವುದು ಮತ್ತು ನಗದು ನೀಡುವುದು ಸಿಬ್ಬಂದಿಗಳ ಕರ್ತವ್ಯ ಆದರೆ ಹಣ ಕಟ್ಟಿಸಿಕೊಳ್ಳುವುದಿಲ್ಲ ಎನ್ನಲು ಇವರಿಗೆ ಯಾವ ಅಧಿಕಾರವಿದೆ ಎಂದು ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿ,ನಗರದ ಶಾಖೆಯಲ್ಲಿನ ಸಿಬ್ಬಂದಿಗಳು ತಮ್ಮ ಖಾತೆಗೆ ಹಣ ಜಮೆ ಮಾಡಲು ಬರುವ ಗ್ರಾಹಕರಿಗೆ ನಿಮ್ಮ ಹಣ ಕಟ್ಟಿಸಿಕೊಳ್ಳುವುದಿಲ್ಲ.ಗ್ರಾಹಕರ ಸೇವಾ ಕೇಂದ್ರ (ಟಿನಿ ಬ್ಯಾಂಕ್)ಲ್ಲಿ ಹಣ ತುಂಬುವಂತೆ ಹೇಳಿ ಕಳುಹಿಸುತ್ತಾರೆ. ಇದರಿಂದ ಗ್ರಾಹಕರಿಗೆ ಟಿನಿ ಬ್ಯಾಂಕ್‌ಗಳ ಹುಡುಕಿಕೊಂಡು ಹೋಗುವ ಕಿರಿಕಿರಿ ಒಂದೆಡೆಯಾದರೆ. ಬೇರೆ ಕೆಡೆಯ ಬ್ಯಾಂಕಲ್ಲಿ ಖಾತೆಯುಳ್ಳ ಗ್ರಾಹಕರು ವಿನಾಕಾರಣವಾಗಿ ತಮ್ಮ ಹಣ ಕಳುಹಿಸಲು ಕಮಿಷನ್ ನೀಡಬೇಕಿದೆ. ಅಲ್ಲದೆ ಗ್ರಾಹಕರ ಸೇವಾ ಕೇಂದ್ರಗಳಲ್ಲಿ ನೆಟವರ್ಕ ಸಮಸ್ಯೆಯಿಂದಾಗಿ ಹೋದಕೂಡಲೆ ವ್ಯವಹಾರವು ಮುಗಿಯುವುದಿಲ್ಲ. ಗ್ರಾಮೀಣ ಪ್ರದೇಶದಿಂದ ಬರುವ ಗ್ರಾಹಕರು ಐದು ನಿಮಿಷದ ಬ್ಯಾಂಕ್ ಕೆಲಸಕ್ಕೆ ಇಡೀ ದಿನ ಸುತ್ತುವ ಪರಸ್ಥಿತಿಯನ್ನು ಶಾಖೆಯಲ್ಲಿ ಅಧಿಕಾರಿಗಳು ಮಾಡುತ್ತಿದ್ದಾರೆ.
ಇದರಿಂದ ಬೇಸತ್ತ ಗ್ರಾಹಕರು ಎಸ್.ಬಿ.ಐ ಶಾಖೆಗೆ ಹಿಡಿಶಾಪ ಹಾಕುವಂತ ಸ್ಥಿತಿ ನಿರ್ಮಾಣವಾಗಿದೆ.ಕೂಡಲೆ ಶಾಖೆಯಲ್ಲಿ ಎಲ್ಲಾ ಗ್ರಾಹಕರ ಹಣ ತುಂಬಿಸಿಕೊಳ್ಳಬೇಕು ಇಲ್ಲವಾದರೆ ಬರುವ ಹತ್ತನೆ ತಾರೀಖಿನಿಂದ ಬ್ಯಾಂಕಿನ ಮುಂದೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.
ಪ್ರತಿಭಟನಾ ನಿರತರ ಬಳಿಗೆ ಆಗಮಿಸಿದ ಬ್ಯಾಂಕ್ ವ್ಯವಸ್ಥಾಪಕರು ಮನವಿ ಸ್ವೀಕರಿಸಿ ಮಾತನಾಡಿ,ಬ್ಯಾಂಕಲ್ಲಿ ತುಂಬಾ ಜನ ಗ್ರಾಹಕರು ತುಂಬುವುದರಿಂದ ಗದ್ದಲವುಂಟಾಗಲಿದೆ.ಆದ್ದರಿಂದ ನಮ್ಮದೇ ಶಾಖೆಗಳಿಗೆ ಸಬ್ಬಂದಿಸಿದ ಗ್ರಾಹಕರ ಸೇವಾ ಕೇಂದ್ರಕ್ಕೆ ಹೋಗಲು ತಿಳಿಸಿರುತ್ತಾರೆ.ಮುಂದಾ ಹಾಗಾಗದಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದ ನಂತರ ಪ್ರತಿಭಟನೆ ನಿಲ್ಲಿಸಿದರು.ಈ ಸಂದರ್ಭದಲ್ಲಿ ಉಸ್ತಾದ ವಜಾಹತ್ ಹುಸೇನ್,ಗೋಪಾಲ ಬಾಗಲಕೋಟೆ,ಮಾನಯ್ಯ ದೊರೆ,ಶರಣಪ್ಪಗೌಡ ಪೊಲೀಸ್ ಪಾಟೀಲ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…