ವಿಜಯಪುರ: ದೇಶದಲ್ಲಿ ಭಯ ಭೀತಿಯ ವಾತಾವರಣ ನಿರ್ಮಾಣವಾಗಿದೆ. ದಲಿತರು, ಅಲ್ಪಸಂಖ್ಯಾತರು, ಬಡವರು, ಶ್ರಮಿಕರು, ದುಡಿಯುವ ವರ್ಗದವರು ಭಯದಿಂದ ಬದುಕುವಂತಾಗಿದೆ. ವಿದ್ಯಾರ್ಥಿಗಳು ಇಂದು ಬೀದಿಗಿಳಿದು ಹೋರಾಟಕ್ಕಿಳಿದಿದ್ದಾರೆ. ಈ ದೇಶದಲ್ಲಿ ಯಾವ ಯಾವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹೋರಾಟಕ್ಕಿಳಿದಿದ್ದಾರೋ ಆಗೆಲ್ಲ ಒಂದು ಬದಲಾವಣೆ ಕಂಡಿದೆ ಎಂದು ಶಾಸಕರಾದ ಪ್ರಿಯಾಂಕ್ ಖರ್ಗೆ ಅವರು ಹೇಳಿದರು.
ಅವರು ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಓತಿಹಾಳ ಗ್ರಾಮದಲ್ಲಿ ನಿರ್ಮಿಸಲಾಗಿರುವ ವಿಶ್ವರತ್ನ ಡಾ ಬಾಬಾಸಾಹೇಬ ಅಂಬೇಡ್ಕರ ಅವರ ಪ್ರತಿಮೆ ಅನಾವರಣಗೊಳಿಸಿ ಮಾತನಾಡುತ್ತಿದ್ದರು.
ದೇಶದ ಇಂದಿನ ವಾತಾವರಣಕ್ಕೆ ಆಳುವವರು ತಮ್ಮ ನಿರ್ಧಾರಗಳನ್ನು ಒತ್ತಾಯದ ಮೂಲಕ ಹೇರುತ್ತಿರುವುದು ಕಾರಣವಾಗಿದ್ದು ಇದು ಸಂವಿಧಾನಕ್ಕೆ ವಿರುದ್ದವಾಗಿದೆ.
ಆದರೂ ‘ಅವರು’ ಸಂವಿಧಾನವನ್ನು ಪಾಲಿಸುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಸಂವಿಧಾನದ ನಿಜವಾದ ತತ್ವಗಳನ್ನು ಅವರೆಲ್ಲ ಎಷ್ಟು ಅಳವಡಿಸಿಕೊಂಡಿದ್ದಾರೆ. ಈ ದೇಶದ ಸ್ವಾತಂತ್ರ್ಯ ಹೋರಾಟ ಶುರುವಾದಾಗ ಎಲ್ಲಿದ್ದರು? ಈ ದೇಶದ ರಕ್ತ ಬಸಿಯುವುದು ಬಿಟ್ಟುಬಿಡಿ ಅವರು ಬೆವರು ಕೂಡಾ ಸುರಿಸಿಲ್ಲ ಎಂದ ಕಟುವಾಗಿ ಟೀಕಿಸಿದರು.
ಈ ದೇಶವನ್ನು ಬಿಜೆಪಿ ಆಳುತ್ತಿಲ್ಲ. ಮೋದಿ ಹಾಗೂ ಶಾ ಕೇವಲ ನೆಪ ಮಾತ್ರ ಆದರೆ ಈ ದೇಶ ಆಳುತ್ತಿರುವುದು ನಾಗ್ಪುರದಿಂದ ಎಂದು ಮಾರ್ಮಿಕವಾಗಿ ಹೇಳಿ ಶಾಸಕರು ಬಿಜೆಪಿ ಹಾಗೂ ಆರ್ ಎಸ್ ಎಸ್ ಗೆ ಈ ದೇಶದಲ್ಲಿ ಇತಿಹಾಸದಲ್ಲಿ ಜಾಗವಿಲ್ಲ. ಹಾಗಾಗಿ ಯಾರ್ಯರನ್ನೋ ಸೇರಿಸಿ ಇತಿಹಾಸ ನಿರ್ಮಿಸ ಹೊರಟಿದ್ದಾರೆ ಎಂದರು.
ಸಂವಿಧಾನ ರಚನೆ ಮಾಡುವ ಸಂದರ್ಭದಲ್ಲಿ ಡಾ. ಬಾಬಾಸಾಹೇಬರು ದೇಶದ ಎಲ್ಲ ವರ್ಗದ ಹಾಗೂ ಧರ್ಮದ ಜನರ ಒಳಿತನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನ ರಚನೆ ಮಾಡಿದ್ದರು. ಹಾಗಾಗಿ ಈ ದೇಶ ನಡೆಯುತ್ತಿರುವುದು ಸಂವಿಧಾನದ ಅಡಿಯಲ್ಲಿ ಹೊರತು,ಯಾವುದೇ ಧರ್ಮಗ್ರಂಥಗಳ ಅಡಿಯಲ್ಲಿ ಅಲ್ಲ ಎಂದು ಒತ್ತಿ ಹೇಳಿದರು.
ಮನುವಾದಿಗಳು ಹಾಗೂ ಆರ್ ಎಸ್ ಎಸ್ ನವರು ಸಂವಿಧಾನದ ಪ್ರಕಾರ ನೀಡಲಾಗುವ ಸಮಾನತೆಯನ್ನು ಒಪ್ಪುವುದಿಲ್ಲ. ಹಾಗಾಗಿ ಸಂಸದ ಅನಂತ್ ಕುಮಾರ್ ಹೆಗಡೆ ಸಂವಿಧಾನ ಬದಲಾಯಿಸುವ ಮಾತನಾಡುತ್ತಾರೆ. ಆದರೆ ಈ ಕುರಿತು ಮೋದಿ ಮಾತನಾಡುವುದಿಲ್ಲ. ಆಗ ಯಾವ ಮನ್ ಕಿ ಬಾತ್ ಇಲ್ಲ ತನ್ ಕಿ ಬಾತ್ ಇಲ್ಲ. ಮೋದಿಯವರ ಮೌನ ಇಂತಹ ಬೆಳವಣಿಗೆಗಳಿಗೆ ಸ್ಪೂರ್ತಿಯಾಗುತ್ತದೆ ಎಂದು ಖರ್ಗೆ ಹೇಳಿದರು.
ಸರಕಾರದ ಯೋಜನೆಗಳು ಸಮಾಜದ ಎಲ್ಲ ವರ್ಗದವರಿಗೆ ಮುಟ್ಟುವಲ್ಲಿ ಬಾಬಾಸಾಹೇಬರು ಪರಿಶ್ರಮಪಟ್ಟಿದ್ದಾರೆ. ಬಸವಣ್ಣವರು ಸೇರಿದಂತೆ ಹಲವಾರು ಶರಣರ ಬದುಕು ಹೇಗೆ ದಾರಿದೀಪವಾಗಿದೆಯೋ ಹಾಗೆ ಡಾ ಬಾಬಾಸಾಹೇಬರ ಜೀವನವೇ ಎಲ್ಲರಿಗೂ ದಾರಿದೀಪವಾಗಿದೆ ಎಂದರು.
ವೇದಿಕೆಯ ಮೇಲೆ ಪೂಜ್ಯ ಸಂಘಪಾಲ ಭಂತೇಜಿ, ಡಾ. ಶಾಂತಗಂಗಾಧರ ಸ್ವಾಮಿ, ಶಿವಾನಂದ ಸಾಲಿಮಠ, ಮಲ್ಲನಗೌಡ ಪಾಟೀಲ, ಗುರಣ್ಣಗೌಡ ಪಾಟೀಲ, ಸಿದ್ದರಾಮ ಪಾಟೀಲ,ಎಂ ಎನ್ ಪಾಟೀಲ, ಬಿ.ಆರ್.ಯಂಟಗಾನ, ಶಿವನಗೌಡ ಯಾತಗಿರಿ, ವೈ.ಸಿ.ಮಯೂರ, ಚಂದ್ರಕಾಂತ ಸಿಂಗೆ, ಪರಶುರಾಮ ಕಾಂಬಳೆ ಸೇರಿದಂತೆ ಮತ್ತಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…