ಬಿಸಿ ಬಿಸಿ ಸುದ್ದಿ

ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟ ತೀವ್ರ: ಮಲ್ಲಿಕಾರ್ಜುನ ಸತ್ಯಂಪೇಟೆ

ಸುರಪುರ: ದೇಶದಲ್ಲಿ ರೈತರು ಹೆದರಿಸುತ್ತಿರುವ ಸಂಕಷ್ಟಗಳ ಬಗ್ಗೆ ಸರಕಾರಗಳಿಗೆ ದರಕಾರಿಲ್ಲದಂತಾಗಿದೆ.ರೈತರು ನಿರಂತರವಾಗಿ ಸಮಸ್ಯೆಗಳನ್ನು ಹೆದರಿಸಿ ದೇಶದ ಜನರಿಗೆ ಅನ್ನ ನೀಡಬೇಕಾಗಿದೆ.ಸಮಸ್ಯೆಗಳನ್ನು ಕೇಳಲು ಸರಕಾರಗಿಗೆ ತಾತ್ಸಾರವಿದೆ.ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಬೇಕಾಗಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ವಿಭಾಗಿಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿದರು.

ರೈತ ಸಂಘಟನೆಗಳ ಸಮನ್ವಯ ಸಮಿತಿ ಗ್ರಾಮೀಣ ಕರ್ನಾಟಕ ಬಂದ್ ಅಂಗವಾಗಿ ಹಮ್ಮಿಕೊಂಡಿದ್ದ ದೇವಾಪುರ ಕ್ರಾಸ್ ಬಂದ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ,ರೈತರ ಆತ್ಮಹತ್ಯೆಗಳನ್ನು ತಡೆಯಲು ಕೂಡಲೆ ಸ್ವಾಮಿನಾಥನ್ ಆಯೋಗದ ವರದಿ ಜಾರಿಗೊಳಿಸಿ,ಸಂಸತ್ತಿನಲ್ಲಿ ಮಂಡಿಸಲಾಗಿರುವ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾಯ್ದೆ ಜಾರಿಗೊಳಿಸಬೇಕು ಮತ್ತು ಪಾರ್ಲಿಮೆಂಟ್ ಮುಂದಿರುವ ಋಣ ಮುಕ್ತ ಕಾಯ್ದೆ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ನಂತರ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಯಲ್ಲಪ್ಪ ಚಿನ್ನಾಕಾರ ಮಾತನಾಡಿ, ಕೃಷಿ ಕೂಲಿಕಾರರು ಅನೇಕ ವರ್ಷಗಳಿಂದ ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ಭೂಮಿಗಳ ಸಕ್ರಮಕ್ಕಾಗಿ ಕೇಂದ್ರದ ಭೂ ಸ್ವಾಧಿನ ಕಾಯ್ದೆಯ ಆಶಯಕ್ಕೆ ವಿರುಧ್ಧವಾದ ಕಾಯ್ದೆಯನ್ನು ಕೈಬಿಡಬೇಕು.ಕೇರಳ ಮಾದರಿಯಲ್ಲಿ ಶಾಶ್ವತ ಋಣುಮುಕ್ತ ಆಯೋಗ ರಚಿಸುವಂತೆ ಆಗ್ರಹಸಿದರು.

ಸುಮಾರು ಎರಡು ಗಂಟೆಗಳ ಕಾಲ ಬೆಂಗಳೂರು ಬೀದರ ಹಾಗು ವಿಜಯಪುರ ಮುಖ್ಯರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿ ನಂತರ,ತೊಗರಿಗೆ ೧೦ ಸಾವಿರ ರೂಪಾಯಿ,ಭತ್ತಕ್ಕೆ ೩ ಸಾವಿರದ ೨ ನೂರು ರೂಪಾಯಿ,ಹತ್ತಿಗೆ ೭ ಸಾವಿರ,ಶೆಂಗಾಕ್ಕೆ ೭ ಸಾವಿರ ಬೇಲೆ ನೀಡಬೇಕು.ಪ್ರವಾಅಹ ಪೀಡಿತರಿಗೆ ಸೂಕ್ತ ಪರಿಹಾರ ನೀಡಬೇಕು. ಒಕ್ಕಲುತನಕ್ಕೆ ಪ್ರತಿ ಎಕರೆಗೆ ೧ ಲಕ್ಷ ಸಾಲ ಮನ್ನಾ ಮಾಡಬೇಕು.ಈಗಾಗಲೆ ಘೋಷಿಸಿರುವ ೨ಲಕ್ಷ ವರೆಗಿನ ಸಾಲ ಮನ್ನಾ ಮಾಡಬೇಕು, ಬೀಜ ಕಾಯ್ದೆ ಕಯಬಿಡಬೇಕು,ಆಲಮಟ್ಟಿ ಆಣೆಕಟ್ಟಿನ ಎತ್ತರ ಹೆಚ್ಚಿಸಬೇಕು,ಕೊಂಗಂಡಿ ಏತ ನೀರಾವರಿ ಮೂಲಕ ರೈತರ ಜಮೀನುಗಳಿಗೆ ನೀರು ನಿಡಬೇಕೆಂಬ ಅನೇಕ ಬೇಡಿಕೆಗಳನಿಟ್ಟು ರಾಷ್ಟ್ರ್ರಪತಿಗಳಿಗೆ ಬರೆದ ಮನವಿಯನ್ನು ಪೊಲೀಸ್ ಇನ್ಸ್ಪೇಕ್ಟರ್ ಆನಂದರಾವ್ ಅವರ ಮೂಲಕ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಬಸವರಾಜಪ್ಪ ಹೆಮ್ಮಡಗಿ,ಧರ್ಮಣ್ಣ ದೊರೆ,ಹುಸೇನಬಾಷ ಕುಂಬಾರಪೇಟೆ,ಬಸವರಾಜ ಕಾಮನಟಿಗಿ,ಸೋಮಲಿಂಗಪ್ಪ ಚಂದ್ಲಾಪುರ,ಶಿವರಾಜ ಅಡ್ಡಡಗಿ,ರಾಮಣ್ಣ ಮೇಟಿ,ಖಾಜಾಸಾಬ್ ಬೋನಾಳ,ಅಮರೇಶ ಶೆಳ್ಳಿಗಿ,ರಾಮಣ್ಣ ಶೆಳ್ಳಿಗಿ,ಮಾನಪ್ಪ ಶೆಳ್ಳಿಗಿ ಸೇರಿದಂತೆ ಅನೇಕ ಜನರಿದ್ದರು.

emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

2 hours ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

2 hours ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

2 hours ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

2 hours ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

3 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

4 hours ago