ಬಿಸಿ ಬಿಸಿ ಸುದ್ದಿ

ಶಾಂತಿ ಇಸ್ಲಾಂ ಧರ್ಮದ ಮೂಲವಾಗಿದೆ: ಜೈನಮುನಿ ಅಭಿನಂದನ ಸಾಗರಜೀ

ಸುರಪುರ: ಇಸ್ಲಾಂ ಧರ್ಮದ ಮೂಲ ಎಂದರೆ ಶಾಂತಿಯಾಗಿದೆ.ಇದನ್ನು ಅರಿತುಕೊಂಡ ಯಾವ ಮುಸ್ಲೀಮನು ಅಶಾಂತಿ ಹರಡಲು ಮುಂದಾಗಲಾರ ಎಂದು ಜೈನಮುನಿ ಅಭಿನಂದನ ಸಾಗರಜೀ ಹೇಳಿದರು.

ನಗರದ ಜಾಮೀಯಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಂತರ ನಡೆಸಿದ ಪ್ರವಚನದಲ್ಲಿ ಭಾಗವಹಿಸಿ ಮಾತನಾಡಿ ಮಾನವೀಯ ಮೌಲ್ಯಗಳು,ಪರಸ್ಪರಲ್ಲಿ ಮಾನವೀಯ ಮೌಲ್ಯಗಳನ್ನು ಹಾಗೂ ಗೌರವದ ಭಾವನೆಗಳನ್ನು ಬೆಳೆಸುವುದು ಪ್ರತಿಯೋಬ್ಬರ ಜವ್ಬಾದಾರಿಯಾದೆ ಎಂದರು.

ಈ ಸಂದರ್ಭದಲ್ಲಿ ಬಾಲಮುನಿಗಳಾದ ನೇಮಿಚಂದ, ಮತ್ತು ನಮಿಚಂದರವರು ಕುರಾನಿನ್ ಶ್ಲೋಕಗಳನು ಉಚ್ಛರಿಸಿ, ಇದು ಭಾರತೀಯ ಸೌರ್ಹಾದತೆಗೆ ಸಾಕ್ಷಿಯಾಗಿದೆ ಇಂತಹ ಅಮೂಲ್ಯವಾದ ಎಲ್ಲಾ ಧರ್ಮದ ಗ್ರಂಥಗಳನ್ನು ಪ್ರತಿಯೊಬ್ಬರು ಅರಿತಾಗ ಸೌಹಾರ್ಧ ಸಮಾಜ ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಮುಫ್ತಿ ಇಕ್ಬಾಲ ಅಹ್ಮದ ಒಂಟಿ ಮಾತನಾಡುತ್ತಾ ಪ್ರತಿಯೊಂದು ಧರ್ಮದ ಮೂಲ ಆಶಯವೇ ಪರಸ್ಪರ ಸಹಬಾಳ್ವೆ, ಸೌರ್ಹಾದತೆ ಆಗಿದೆ, ಅದರಲ್ಲೂ ಸುರಪುರದ ಮಣ್ಣಿನಲ್ಲಿ ಅದು ರಕ್ತಗತವಾಗಿದೆ ಎಂದು ಅಭಿಪ್ರಾಪಟ್ಟರು.

ಪ್ರವಚನದಲ್ಲಿ ಪ್ರಮುಖರಾದರಮೇಶಚಂದ ಜೈನ, ಖಾಜಾ ಖಲೀಲ್ ಅಹ್ಮದ ಅರಕೇರಿ, ಲಿಯಾಖತ ಹುಸೇನ ಉಸ್ತಾದ, ಡಾ.ಮುನವರ ಬೋಡೆ, ಇಮ್ತಿಯಾಜ ಹುಸೇನ್ ಗುತ್ತೇದಾರ, ಮುನೀರಸಾಬ್‌ತಿರಂದಾಜ್, ನಯೀಮ್ ತಿರಂದಾಜ್, ಆಬಿದಹುಸೇನ ಪಗಡಿಬಂದ, ಮೌಲಾ ಸೌದಾಗರ, ಉತ್ತಮ ಜೈನ, ರಾಯಚಂದ ಜೈನ, ಸಂಜಯ ಜೈನ, ಇಕ್ಬಾಲ ಸೌದಾಗರ, ಅಜೀಮ್ ಫರೀದಿ, ಅನ್ವರ ಜಮಾದಾರ ಅನೇಕ ಮುಸ್ಲೀಮ ಬಾಂಧವರು ಉಪಸ್ಥಿತರಿದ್ದರು.

emedialine

Recent Posts

ಸಚಿವ ಪ್ರೀಯಾಂಕ್ ಖರ್ಗೆ ಹುಟ್ಟುಹಬ್ಬ ನಿಮಿತ್ತ ಬಾಲಕಿಯರ ಕ್ರಿಕೇಟ್

ಕಲಬುರಗಿ: ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಐಟಿ, ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರೀಯಾಂಕ್ ಖರ್ಗೆ ಅವರ 46ನೇ ವರ್ಷದ…

14 mins ago

ಯತ್ನಾಳ ಹೋರಾಟಕ್ಕೆ ಬೆಂಬಲವಿಲ್ಲ : ಆನಂದ ಕಣಸೂರ

ಕಲಬುರಗಿ: ವಕ್ಫ್ ಬೋರ್ಡ್ ವಿರುದ್ಧ ಹೋರಾಟ ಮಾಡುತ್ತಿರುವ ಯತ್ನಾಳ ಟೀಮ್ ಗೆ ಬೆಂಬಲವಿಲ್ಲ ಭಾರತೀಯ ಜನತಾ ಪಕ್ಷದ ಯುವ ಮುಖಂಡ…

17 mins ago

ವಕ್ಫ್ ಮಸೂದೆ ತಿದ್ದುಪಡಿಗೆ ಮುಸ್ಲೀಮ ವೈಯಕ್ತಿಕ ಕಾನೂನು ಮಂಡಳಿ ವಿರೋಧ

ಕಲಬುರಗಿ: ನ.25- ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ-2024 ಜಾರಿಗೆ ತರಲು ಮುಂದಾಗಿದ್ದನ್ನು ಆಲ್ ಇಂಡಿಯಾ ಮುಸ್ಲೀಮ ವೈಯಕ್ತಿಕ ಕಾನೂನು…

28 mins ago

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

23 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago