ಬಿಸಿ ಬಿಸಿ ಸುದ್ದಿ

ಜಾನಪದ ಉಳೀಸುವ ಹೊಣೆ ನಮ್ಮೆಲ್ಲರ ಮೇಲಿದೆ: ಡಾ. ಎಸ್.ಪಿ.ದಯಾನಂದ

ಸುರಪುರ: ಜಾನಪದ ಭಾರತೀಯ ಸಂಸ್ಕೃತಿಯ ಮೂಲ ತಳಹದಿಯಾಗಿದೆ.ಇಂತಹ ಸಾಹಿತ್ಯವನ್ನು ಉಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಬೆಂಗಳೂರಿನ ಡಿ.ಎಸ್.ಮ್ಯಾಕ್ಸ್ ಪ್ರಾಪರ್ಟಿ ಕಂಪನಿಯ ನಿರ್ದೇಶಕ ಡಾ|| ಎಸ್.ಪಿ.ದಯಾನಂದ ಹೇಳಿದರು.

ಸಗರನಾಡು ಸೇವಾ ಪ್ರತಿಷ್ಠಾನದ ವತಿಯಿಂದ ರಂಗಂಪೇಟೆಯ ಬಸವೇಶ್ವರ ಕಾಲೇಜಿನ ಸಂಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಾನಪದ ಸಂಭ್ರಮ ಹಾಗೂ ಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಆಧುನಿಕ ಸಂಸ್ಕೃತಿ ಹಾಗೂ ಪಾಶ್ಚಾತ್ತೀಕರಣದ ಪ್ರೀತಿಯಿಂದಾಗಿ ನಮ್ಮ ಮೂಲ ಸಂಸ್ಕೃತಿಗೆ ಪೆಟ್ಟು ಬೀಳುತ್ತಲಿದೆ.ಜನಪದರು ತಮ್ಮ ಜೀವನದಲ್ಲಿ ಕಂಡುಂಡ ಅನುಭವಗಳನ್ನು ಮಾರ್ಗದರ್ಶನದ ರೂಪದಲ್ಲಿ ಬಿಟ್ಟುಹೋಗಿದ್ದಾರೆ. ಬೀಸುವ, ಕುಟ್ಟುವ, ಹಂತಿ ಪದ, ಮೋಹರಂ ಪದ, ಸೋಬಾನೆ ಪದ ಮುಂತಾದವು ಈ ದೇಶದ ಜನಪದದ ಮೂಲವಾಗಿವೆ. ಜಾನಪದ ಕಲಾವಿದರಿಗೆ ವೇದಿಕೆ ಮತ್ತು ಪ್ರೋತ್ಸಾಹದ ಅವಶ್ಯಕತೆ ಇದೆ, ಆ ನಿಟ್ಟಿನಲ್ಲಿ ಸಗರನಾಡು ಸೇವಾ ಪ್ರತಿಷ್ಠಾನ ಈ ಜಿಲ್ಲೆಯಲ್ಲಿ ತುಂಬಾ ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಮೂಲತಹ ನಮ್ಮ ಭಾಗದವರಾಗಿರುವ ಡಾ. ಎಸ್.ಪಿ.ದಯಾನಂದ ಅವರು ಬೆಂಗಳೂರಿನ ಪ್ರತಿಷ್ಟಿತ ಕಂಪನಿಯ ನಿರ್ದೇಷಕರಾಗಿ, ಅನೇಕರಿಗೆ ಅನ್ನದಾತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂದು ಅವರು ಈ ಭಾಗದ ಅನೇಕ ಚಟುವಟಿಕೆಗಳಿಗೆ ಪ್ರೇರಕ ಮತ್ತು ಪೊಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಇದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಶಾಂತಪ್ಪ ಬೂದಿಹಾಳ ವಹಿಸಿ ಮಾತನಾಡಿದರು, ಮುಖ್ಯ ಅತಿಥಿಗಳಾಗಿ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸೂಗುರೇಶ ವಾರದ, ನಗರಸಭೆ ಮಾಜಿ ಸದಸ್ಯ ಪಾರಪ್ಪ ಗುತ್ತೆದಾರ, ಪ್ರಮುಖರಾದ ವಿರಭದ್ರಪ್ಪ ಕುಂಬಾರ, ಶಿವಶರಣಪ್ಪ ಹೆಡಿಗಿನಾಳ, ವಿರೇಶ ರುಮಾಲ, ಶಿವರಾಜ ಕಲಿಕೇರಿ, ಮಲ್ಲು ಬಾದ್ಯಾಪುರ, ವಿಜಯಕುಮಾರ ಅಂಗಡಿ, ಮಲ್ಲಿಕಾರ್ಜುನ ಸುಭೇದಾರ, ಆನಂದ ಮುಧೋಳ, ಅಂಬ್ರೇಶ ಕುಂಬಾರ, ಶರಣು ಅರಿಕೇರಿ ಸೇರಿದಂತೆ ಇತರರಿದ್ದರು. ಶಿವಪ್ಪ ಹೆಬ್ಬಾಳ ತಂಡದಿಂದ ಭಜನಾ ಪದ, ಬಸಪ್ಪ ಹಣಮಸಾಗರ ತಂಡದಿಂದ ಡೊಳ್ಳಿನ ಪದ, ನಿಂಗಣ್ಣ ಕಮತಗಿ ತಂಡದಿಂದ ತತ್ವಪದ, ವಿರಸಂಗಮ್ಮ ಅಪ್ಪಾಗೋಳ ತಂಡದಿಂದ ಜನಪದ ಗಾಯನ, ಬಸಮ್ಮ ಕೆಂಡದ ತಂಡದಿಂದ ಮೊಹರಂ ಪದ, ಕಾರ್ಯಕ್ರಮದ ಗಮನ ಸೆಳೆದವು. ಕಾರ್ಯಕ್ರಮವನ್ನು ಲಂಕೇಶ ದೇವತ್ಕಲ್ ನಿರೂಪಿಸಿದರು, ಮೌನೇಶ ಐನಾಪುರ ಸ್ವಾಗತಿಸಿದರು, ಸಂತೋಷ ಸಾತಿಹಾಳ ವಂದಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

21 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago