ಕಲಬುರಗಿ: ಬದಲಾಗುತ್ತಿರುವ ಜಗತ್ತಿನಲ್ಲಿ ಹೊಸ ಹೊಸ ತಂತ್ರಜ್ಞಾನಗಳು ಹೊಸ ಹೊಸ ಗುಣಲಕ್ಷಣಗಳ ಬೇಡಿಕೆ ಜಾಸ್ತಿಯಾಗುತ್ತಿವೆ. ವಿವಿಧ ಗುಣಲಕ್ಷಣಗಳ ಬೇಡಿಕೆ ವಸ್ತುಗಳೆಂದರೆ ಸಂಯೋಜಿತ ವಸ್ತುಗಳ (Composet materials) ಅಂತಹ ವಸ್ತುಗಳ ತಯಾರಿಕೆ ಸುಸ್ಥಿರತೆಗಳ ಬಗ್ಗೆ ಇಂದಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತರಬೇತಿ ಅವಶ್ಯಕ ಅಂತಹ ವಿದ್ಯಾರ್ಥಿಗಳನ್ನು ತಯಾರು ಮಾಡಬೇಕೆಂದರೆ ಪ್ರಾಧ್ಯಾಪಕರಲ್ಲಿ ಕೂಡ ಕೌಶಲ್ಯ ಅಭಿವೃದ್ಧಿ ಅತ್ಯಗತೆ ಆದ್ದರಿಂದ ಇವತ್ತಿನ ಈ ಪ್ರಾಧ್ಯಾಪಕರ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಬಹು ಪೂರಕವಾಗಿದೆ ಎಂದು ಭೂಪಾಲನ ರಿಜಿನಲ್ ರಿಸರ್ಚ ಲ್ಯಾಬರೋಟರಿಯ ಮಾಜಿ ನಿರ್ದೇಶಕ ಹಿರಿಯ ವಿಜ್ಞಾನಿ ಡಾ. ಕುನಾಲ್ ಬಸೂ ರವರು ಮಾತನಾಡಿದ್ದರು.
ಅವರು ಕಲಬುರಗಿಯ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ಇಂಡಸ್ಟ್ರೀಯಲ್ ಮತ್ತು ಪ್ರೊಡಕ್ಷನ್ ವಿಭಾಗದ ವತಿಯಿಂದ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಸಂಸ್ಥೆಯ (ಎ.ಆಯ್.ಸಿ.ಟಿ.ಇ) ಪ್ರಾಯೋಜಿತ ೧೦ – ೨೨ ಜನೇವರಿ ೨೦೨೦ ರ ಎರಡು ವಾರಗಳ ಸಂಯೋಜಿತ ವಸ್ತುಗಳು, ಅದರ ತಯಾರಿಕೆ ಮತ್ತು ಸುಸ್ಥಿರತೆ ಕುರಿತ ಇತ್ತೀಚಿನ ಬೆಳವಣಿಗೆಗಳು (Recent Developments in compsit materials, manufacturing and sustainability) ವಿಷಯದ ಕುರಿತು ಪ್ರಾಧ್ಯಾಪಕರ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇನ್ನೋರ್ವ ಅತಿಥಿ ಭಾರತೀಯ ವಿಜ್ಞಾನ ಸಂಸ್ಥೆ (ಆಯ್.ಆಯ್.ಎಸ್.ಸಿ) ಬೆಂಗಳೂರಿನ ವಿಜ್ಞಾನಿ ಡಾ. ಬಲರಾಮ ಸಾಹು ರವರು (Super Capacitor) ಕುರಿತು ಉಪನ್ಯಾಸ ನೀಡಿದ್ದರು. ಗೌರವ ಅತಿಥಿಯಾದ ವಿ.ಟಿ. ಯು ಕಲಬುರಗಿ ವಿಭಾಗದ ನಿರ್ದೇಶಕರಾದ ಡಾ. ಬಸವರಾಜ ಗಾದಗೆ ರವರು ಇಂತಹ ಕಂಪೂಸಿಟ್ ವಸ್ತುಗಳ ಕುರಿತ ಕಾರ್ಯಕ್ರಮ ಆಯೋಜಿಸಿದ ಕಾಲೇಜಿನ ಆಡಳಿತ ಮಂಡಳಿ ಮತ್ತು ಸಂಯೋಜಕರನ್ನು ಅಭಿನಂಧಿಸಿದರು.
ಅಧ್ಯಕ್ಷತೆ ವಹಿಸಿದ ಹೈ.ಕ.ಶಿ.ಶಿ. ಸಂಸ್ಥೆಯ ಉಪಾಧ್ಯಕ್ಷರಾದ ಡಾ. ಶಿವಾನಂದ ದೇವರಮನಿ ಯವರು ಪ್ರಾಧ್ಯಾಪಕರ ಜ್ಞಾನಾರ್ಜನೆ ಕುರಿತ ಇಂತಹ ಕಾರ್ಯಕ್ರಮಗಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.
ಇಂಡಸ್ಟ್ರೀಯಲ್ ಮತ್ತು ಪ್ರೊಡಕ್ಷನ್ ವಿಭಾಗದ ಡಾ. ಶಶಿಧರ ಕಲಶೆಟ್ಟಿ ರವರು ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕರಾದ ಡಾ. ಪ್ರಶಾಂತ ಕಾಂಬಳೆ ತರಬೇತಿ ಕಾರ್ಯಕ್ರಮದ ಕುರಿತು ಪಕ್ಷಿ ನೋಟವನ್ನು ನೀಡಿದ್ದರು ಇನ್ನೋರ್ವ ಸಹ ಸಂಯೋಜಕರಾದ ಡಾ. ಬಾಬುರಾವ ಶೇರಿಕರ ವಂದಿಸಿದರು. ಡಾ. ಕುತುಬುದ್ದೀನ್ ನಿರೂಪಿಸಿದರು. ಪ್ರೊ. ಅವಿನಾಶ ಸಾಂಬ್ರಾಣಿ, ಡಾ. ಎಮ್.ಎಸ್. ಉಪ್ಪಿನ ರವರು ಅತಿಥಿಗಳನ್ನು ಪರಿಚಯಿಸಿದರು.
ವೇದಿಕೆಯ ಮೇಲೆ ಕಾಲೇಜಿನ ಹಂಗಾಮಿ ಪ್ರಾಚಾರ್ಯ ಡಾ. ಎಸ್.ಆರ್. ಪಾಟೀಲ, ಹೈ.ಕ.ಶಿ. ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಅರುಣಕುಮಾರ ಪಾಟೀಲ, ಶ್ರೀ ಸತೀಶ ಹಡಗಲಿ ಮಠ, ಶ್ರೀ ಅನೀಲಕುಮಾರ ಮರಗೋಳ, ಡಾ. ವೀರಭದ್ರಪ್ಪ ನಂದ್ಯಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಡಾ. ದೇವಸುಧಾಕರ ಪಾಟೀಲ, ಪ್ರೊ. ರಮೇಶ ಪಾಟೀಲ, ಪ್ರೊ. ಶರಣಬಸಪ್ಪ ಆರ್. ಪಾಟೀಲ, ಪದ್ಮರಾಜ ನಂದ್ಯಾಳ, ವಿರೇಂದ್ರ ಸ್ವಾಮಿ, ಸಂತೋಷ ಹಿರೇಮಠ, ಚನ್ನು, ನಾಮದೇವ ಉಪಸ್ಥಿತರಿದ್ದರು. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಿಂದ ಸುಮಾರು ೮೦ ಜನ ಪ್ರಾಧ್ಯಾಪಕರು ಕಾರ್ಯಕ್ರಮದಲ್ಲಿ ನೊಂದಾಯಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…