ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವರು (ಮೌಲ್ಯಮಾಪನ) ಡಾ.ಲಿಂಗರಾಜ ಶಾಸ್ತ್ರೀಯವರು ಡಾ. ಚಿದಾನಂದ ಮೂರ್ತಿಯವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತಾನಾಡುತ್ತಾ ಅವರು ಒಬ್ಬ ಕನ್ನಡ ಸಂಶೋದಕ ಶ್ರೇಷ್ಠರು ಮತ್ತು ಅವರ ಸಂಶೋದನ ಕಾರ್ಯಗಳು ಭವಿಷ್ಯದ ಪೀಳಿಗೆಗೆ ದಾರಿದೀಪವಾಗಿವೆ. ಇವರು ಶನಿವಾರ ಮುಂಜಾನೆ ಬೆಂಗಳೂರಿನಲ್ಲಿ ವಿಧಿವಶರಾಗಿದ್ದು ಇವರ ಅಗಲಿಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.
ನಗರದ ಶರಣಬಸವ ವಿಶ್ವವಿದ್ಯಾಲಯದ ಅನುಭವ ಮಂಟಪದಲ್ಲಿ ಎರ್ಪಡಿಸಿದ್ದ ಸಂತಾಪ ಸಭೆಯಲ್ಲಿ ಮಾತನಾಡಿದ ಡಾ.ಶಾಸ್ರ್ತೀ ಅವರು, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಲು ಅವರು ನೀಡಿದ ಕೊಡುಗೆ ಅಪಾರ ಮತ್ತು ಬಳ್ಳಾರಿ ಜಿಲ್ಲೆಯ ಹಂಪಿ ಸ್ಮಾರಕಗಳನ್ನು ರಕ್ಷಿಸಲು ಅವರು ಮಾಡಿದ ಸತತ ಪ್ರಯತ್ನಗಳನ್ನು ಎಂದೆಂದಿಗೂ ಸ್ಮರಿಸಲಾಗುವುದು ಎಂದು ಹೇಳಿದರು.
ಡಾ.ಚಿದಾನಂದ ಮೂರ್ತಿಯವರು ಕಲ್ಯಾಣ ಕರ್ನಾಟಕ ಹಾಗೂ ೧೨ನೇ ಶತಮಾನದ ಸಾಮಾಜಿಕ ಸುಧಾರಕ ಮಹಾತ್ಮ ಬಸವೇಶ್ವರರ ಮೇಲೆ ಮಾಡಿದ ಸಂಶೋಧನಾ ಕೃತಿಗಳನ್ನು ಅವರು ನೆನಪಿಸಿಕೊಂಡರು, ಇದನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಅನುವಾದಿಸಲಾಗಿದೆ, ಇದು ಡಾ.ಚಿದಾನಂದ ಮೂರ್ತಿ ಅವರ ಅತ್ತ್ಯುತ್ತಮ ಸಂಶೋಧನ ಕೃತಿಗಳಲ್ಲಿ ಒಂದಾಗಿದೆ ಎಂದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘವು ನಡೆಸುತ್ತಿರುವ ಅಂತರವಾಣಿ ಎಫ್‌ಎಂ ರೇಡಿಯೋದ ನಿರ್ದೇಶಕರಾದ ಡಾ.ಶಿವರಾಜ ಶಾಸ್ತ್ರೀ ಹೇರೂರ ಅವರು ಮಾತನಾಡುತ್ತ ಕನ್ನಡದಲ್ಲಿ ಸ್ನಾತಕೋತ್ತರ ಅಧ್ಯಯನದ ಸಮಯದಲ್ಲಿ ಡಾ.ಚಿದಾನಂದ ಮೂರ್ತಿ ಅವರು ನನ್ನ ಮಾರ್ಗದರ್ಶಕರು ಹಾಗೂ ಶಿಕ್ಷಕರಾಗಿದ್ದರು. ಡಾ.ಚಿದಾನಂದ ಮೂರ್ತಿ ಹುಟ್ಟಾ ಹೋರಾಟಗಾರ ಮತ್ತು ಅವರು ಅನುಸರಿಸಿದ ತತ್ವಗಳ ಬಗ್ಗೆ ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ. ಕನ್ನಡ ಮತ್ತು ಕರ್ನಾಟಕದ ಹಿತಾಸಕ್ತಿಗಳನ್ನು ರಕ್ಷಿಸಲು ಯಾವಗಲೂ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು ಎಂದು ಹೇಳಿದರು.
ಶರಣಬಸವ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್.ಜಿ. ಡೊಳ್ಳೆಗೌಡರ ಅವರು ತಮ್ಮ ಭಾಷಣದಲ್ಲಿ ಡಾ.ಚಿದಾನಂದ ಮೂರ್ತಿ ವೀರಶೈವ ಸಂಶೋಧಕರಲ್ಲಿ ಅತ್ಯುನ್ಯತ ವ್ಯಕ್ತಿತ್ವ ಹೊಂದಿದ್ದರು ಮತ್ತು ಬುದ್ಧಿಜೀವಿಗಳಾಗಿದ್ದರು. ಇವರು ಸ್ವತಃ ಒಂದು ಸಂಸ್ಥೆಯಾಗಿ ಮತ್ತು ಎಲ್ಲಾ ಸಂಶೋದನ ವಿದ್ವಾಂಸರಿಗೆ ಆದರ್ಶ ಪ್ರಾಯರಾಗಿದ್ದರು ಎಂದು ತಿಳಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಎಂ.ಎಸ್ ಪಾಟೀಲ್ ಅವರು ಅಗಲಿದ ಡಾ.ಚಿದಾನಂದ ಮೂರ್ತಿ ಅವರು ಒಂದು ಉತ್ತಮ ಬರಹಗಾರ, ಸರಳ ವ್ಯಕ್ತಿತ್ವ ಮತ್ತು ಸರಳ ಜೀವನವನ್ನು ನಡೆಸಿದವರು. ಇವರು ಉತ್ತಮ ಸಂಶೋಧಕರ ಎಲ್ಲಾ ಗುಣಗಳನ್ನು ಹೊಂದಿದ್ದರು ಮತ್ತು ಇವರ ಅಗಲಿಕೆಯು ಕನ್ನಡ ಭಾಷಡಗೆ ಹಾಗೂ ಕನ್ನಡ ಸಾಹಿತ್ಯಕ್ಕೆ ತುಂಬಲಾರದ ಭಾರಿ ನಷ್ಟವಾಗಿದೆ ಎಂದು ಹೇಳಿದರು.
ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಎಸ್.ಪಾಟೀಲ್ ಮಾತನಾಡುತ್ತಾ ಡಾ.ಚಿದಾನಂದ ಮೂರ್ತಿ ಅವರು ಪ್ರಖ್ಯಾತ ವಿದ್ವಾಂಸರಾಗಿದ್ದರು ಮತ್ತು ಅವರ ಸಂಶೋಧನಾ ಕಾರ್ಯಗಳ ಪರ ದೃಢವಾಗಿ ನಿಲ್ಲುವ ಅಪರೂಪದ ಗುಣವನ್ನು ಹೊಂದಿದ್ದರು. ಮತ್ತು ಅವರ ತತ್ವಗಳ ಬಗ್ಗೆ ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ. ಟಿಪ್ಪು ಸುಲ್ತಾನರ ಕುರಿತು ತಮ್ಮ ವಿವಾದಾತ್ಮಕ ಸಂಶೋಧನಾ ಕಾರ್ಯದಲ್ಲಿ ಅಗಲಿದ ಬರಹಗಾರ ಹೇಗೆ ಎಲ್ಲಾ ವಿವಾದಗಳ ವಿರುದ್ಧ ದೃಢವಾಗಿ ನಿಂತ್ತಿದ್ದರು ಎಂದು ನೆನಪಿಸಿಕೊಂಡರು.
ಶರಣಬಸವೇಶ್ವರ ಕಲಾ ಮಹಾವಿದ್ಯಾಲದ ಪ್ರಾಚಾರ್ಯ ಡಾ.ಡಿ.ಟಿ.ಅಂಗಡಿ ತಮ್ಮ ಭಾಷಣದಲ್ಲಿ ಡಾ.ಚಿದಾನಂದ ಮೂರ್ತಿ ಅವರ ನಿಧನವು ಕನ್ನಡ ಮತ್ತು ಕನ್ನಡ ಸಾಹಿತ್ಯ ಲೋಕಕ್ಕೆ ದೊಡ್ಡ ನಷ್ಟವಾಗಿದೆ ಎಂದರು.
ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ವಿ.ಡಿ.ಮೈತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮತ್ತು ಡಾ.ನಾನಾಸಾಹೇಬ ಹಚ್ಚಡದ ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…