ಕಲಬುರಗಿ: ಹೋಮಿಯೋಪತಿ ಪದ್ದತಿಯಲ್ಲಿ ಅನೇಕ ಜನರು ಸಾಧನೆ ಮಾಡಿರುವ ಬಗ್ಗೆ ಹಾಗೂ ಹೋಮಿಯೋಪತಿ ವೈದ್ಯರು ಬೆರೆಯವರಿಗಿಂತ ಉತ್ತಮ ವೃತ್ತಿ ಬದುಕು ಹೊಂದಿದ್ದಾರೆಂದು ಜಿಲ್ಲಾ ಸರ್ಜನ್ ಹಾಗೂ ಜಿಮ್ಸ್ ವೈದ್ಯಕೀಯ ಅಧೀಕ್ಷಕರಾದ ಡಾ. ಎಸ್.ರುದ್ರವಾಡಿ ಅವರು ವಿಧ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ನಗರದ ಪ್ರತಿಷ್ಠಿತ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ, ಡಾ. ಮಾಲಕರಡ್ಡಿ ಹೋಮಿಯೋಪತಿಕ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಬಸವೇಶ್ವರ ಆಸ್ಪತ್ರೆಯ ರಕ್ತ ನಿಧಿ ಕೇಂದದ್ರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರದ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿದರು.
ಕಾಲೇಜಿನ ಸಂಯೋಜಕರು ಹಾಗೂ ಹೈ.ಕ.ಶಿ.ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಸತೀಶಚಂದ್ರ ಸಿ. ಹಡಗಲಿಮಠ್ ಅವರು ಮಾತನಾಡುತ್ತಾ, ರಕ್ತದಾನವು ಜೀವದಾನವಾಗಿದೆ, ಅರೋಗ್ಯ ಸುಧಾರಿಸಿಕೊಂಡವರ ಬಾಳಿಗೆ ಮತ್ತು ಅವರ ಕುಟುಂಬಕ್ಕೆ ಇದೋಂದು ವರದಾನವಾಗುತ್ತದೆ, ಪವಿತ್ರವಾದ ಈ ಕ್ರಿಯಯಲ್ಲಿ ತೊಡಗಿದ ಕಾಲೇಜಿನ ವಿಧ್ಯಾರ್ಥಿಗಳು ಹಾಗೂ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ ಎಂದು ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು.
ರಕ್ತದಾನ ಶಿಬಿರದಲ್ಲಿ ವಿಧ್ಯಾರ್ಥಿಗಳು ಹಾಗು ಕಾಲೇಜಿನ ಸಿಬ್ಬಂದಿ ವರ್ಗದವರು ಅತಿ ಉತ್ಸಾಹದಿಂದ ಶಿಬಿರದಲ್ಲಿ ಭಾಗವಹಿಸಿ ಸುಮಾರು ೧೩೦ ಜನರು ಸ್ವ ಇಚ್ಛೆಯಿಂದ ತಮ್ಮ ಹೆಸರುಗಳನ್ನು ರಕ್ತದಾನಕ್ಕೆ ನೋಂದಾಯಿಸಿದರು, ಇದರಲ್ಲಿ ಸುಮಾರು ೮೧ ಜನರಿಂದ ರಕ್ತದಾನವನ್ನು ಸ್ವೀಕರಿಸಲಾಯಿತು. ಉಳಿದ ಮಹಿಳೆಯರು ವಿಧ್ಯಾರ್ಥಿನಿಯರ ಹೀಮೋಗ್ಲೋಬಿನ ಪ್ರಮಾಣ ಕಡಿಮೆ ಇರುವದರಿಂದ ಸ್ವೀಕರಿಸಲಾಗಲ್ಲಿಲ್ಲ.
ಹೈ.ಕ.ಶಿ.ಸಂಸ್ಥೆಯ ಉಪಾಧ್ಯಕ್ಷರಾದ ಡಾ.ಶಿವಾನಂದ ದೇವರಮನಿ ಅವರು ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು, ಹೈ.ಕ.ಶಿ.ಸಂಸ್ಥೆ, ಆಡಳಿತ ಮಂಡಳಿ ಸದಸ್ಯ ಅನಿಲ ಮರಗೋಳ ಇವರು ಅಥಿತಿಗಳಾಗಿ ಬಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ, ಕಾಲೇಜಿನ ಪ್ರಾಂಶುಪಾಲರಾದ ಡಾ. ಪಿ.ಸಂಪತರಾವ, ಉಪ ವೈದ್ಯಕೀಯ ಅಧೀಕ್ಷಕರಾದ ಡಾ. ರಾಜೇಂದ್ರ ಪಾಟಿಲ, ಹಾಗು ಬಸವೇಶ್ವರ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದಿಂದ ಡಾ; ಜೋತಿರ್ಲಿಂಗ್, ಉಪಸ್ಥಿತರಿದ್ದರು.
ಡಾ: ರಾಜೇಂದ್ರ ಪಾಟಿಲ, ಉಪ ವೈದ್ಯಕೀಯ ಅಧೀಕ್ಷಕರು ಅಥಿತಿಗಳನ್ನು ಸ್ವಾಗತಿಸಿದರು, ಡಾ. ರೆಣುಕಾಂತ ಲೋಕರೆಯವರು ಕಾರ್ಯಕ್ರಮಕ್ಕೆ ಆಗಮಿಸಿರುವ ಅಥಿತಿಗಳಿಗೆ ಧನ್ಯವಾದಗಳನ್ನ ಹೆಳಿದರು. ಡಾ. ನವಿತಾ ಅವರು ಕಾಯ್ರಕ್ರಮವನ್ನು ನಿರೋಪಿಸಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…