ಸುರಪುರ: ಇದೇ ತಿಂಗಳ ೧೮ನೇ ತಾರೀಖಿನಂದು ಬೆಳಿಗ್ಗೆ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಇಪ್ಪತ್ತೈದನೆ ವರ್ಷದ ಬೆಳ್ಳಿ ಹಬ್ಬ ಹಾಗು ಅಶ್ವಾರೂಢ ಬಸವೇಶ್ವರರ ಮೂರ್ತಿ ನಿರ್ಮಾಣಕ್ಕೆ ಅಡಿಗಲ್ಲು ಹಾಗು ಕಕ್ಕೇರಾದಲ್ಲಿ ನಿರ್ಮಿಸಲಿರುವ ಸಹಕಾರ ಸಂಘದ ಕಟ್ಟಡಕ್ಕೆ ಅಡಿಗಲ್ಲು ಕಾರ್ಯಕ್ರಮವನ್ನು ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಸುರೇಶ ಸಜ್ಜನ ತಿಳಿಸಿದರು.
ನಗರದ ಬಸ್ ನಿಲ್ದಾಣ ಬಳಿಯಿರುವ ಬಸವೇಶ್ವರ ಸಹಕಾರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ,೧೮ ರಂದು ಬೆಳಿಗ್ಗೆ ೧೧ ಗಂಟೆಗೆ ಆರಂಭಗೊಳ್ಳುವ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಸ್ಥಳಿಯ ಕಡ್ಲೆಪ್ಪನವರ ಮಠದ ಪ್ರಭುಲಿಂಗ ಮಹಾಸ್ವಾಮಿ,ದೇವಾಪುರ ಜಡಿಶಾಂತಲಿಂಗೇಶ್ವರ ಮಠಧ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ,ವೀರಗೋಟಾದ ಅಡಿವಿಂಗ ಮಹಾಸ್ವಾಮೀಜಿ,ಕೊಡೇಕಲ್ ದುರುದುಂಡೇಶ್ವರ ಮಠದ ಶಿವಕುಮರ ಸ್ವಾಮೀಜಿ,ರುಕ್ಮಾಪುರ ಹಿರೇಮಠದ ಗುರುಶಾಂತಮೂರ್ತಿ ಶಿವಾಚಾರ್ಯರು, ಕರಡಕಲ್ ಕೋರಿಸಿದ್ದೇಶ್ವರ ಮಠದ ಶಾಂತರುದ್ರಮುನಿ ಸ್ವಾಮೀಜಿ,ಕೆಂಭಾವಿ ಹಿರೇಮಠದ ಚನ್ನಬಸವ ಶಿವಾಚಾರ್ಯಸ್ವಾಮೀಜಿ,ಮುದನೂರ ಕಂಠಿಮಠದ ಸಿದ್ಧ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ಹಾಗು ಲಕ್ಷ್ಮೀಪುರ ಶ್ರೀಗಿರಿ ಮಠದ ಬಸವಲಿಂಗ ದೇವರು ವಹಿಸಲಿದ್ದಾರೆ.ಕಾರ್ಯಕ್ರಮವನ್ನು ವೆಜಯಪುರ ಸಿದ್ದ ಸಿರಿ ಸಹಕಾರದ ಸಂಸ್ಥಾಪಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗು ಸ್ಥಳಿಯ ಶಾಸಕರಾದ ನರಸಿಂಹ ನಾಯಕ(ರಾಜುಗೌಡ) ಉದ್ಘಾಟಿಸಲಿದ್ದಾರೆ.ಸಹಕಾರಿ ಧ್ವಜಾರೋಹಣವನ್ನು ಸುರಪುರ ಸಂಸ್ಥಾನದ ರಾಜಾ ಕೃಷ್ಣಪ್ಪ ನಾಯಕ ನೆರವೇರಿಸಲಿದ್ದಾರೆ.
ಅಶ್ವಾರೂಢ ಬಸವೇಶ್ವರರ ಪುತ್ಥಳಿ ನಿರ್ಮಾಣದ ಅಡಿಗಲ್ಲನ್ನು ಶಹಾಪುರ ಕ್ಷೇತ್ರದ ಶಾಸಕ ಶರಣಬಸಪ್ಪಗೌಡ ದರ್ಶನಾಪುರ,ಕಲಬುರ್ಗಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ,ಯಾದಗಿರಿ ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ಹಾಗು ಗುರುಮಿಠಕಲ್ ಶಾಸಕ ನಾಗಣ್ಣಗೌಡ ಕಂದಕೂರ ನೆರವೇರಿಸಲಿದ್ದಾರೆ.ಇದೇ ಸಂದರ್ಭದಲ್ಲಿ ಬಸವೇಶ್ವರ ಪತ್ತಿನ ಸಹಕಾರ ಸಂಘ ನಡೆದುಬಂದ ಹಾದಿಯ ಕುರಿತು ಅನೇಕ ಲೇಖಕರು ಬರೆದಿರುವ ಲೇಖನಗಳ ಸಂಕಲನವಾದ ಕಾಯಕ ಸ್ಮರಣ ಸಂಚಿಕೆಯನ್ನು ಸ್ಥಳಿಯ ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಹಾಗು ಮಾಜಿ ಸಚಿವರಾದ ರಾಜಾ ಮದನಗೋಪಾಲ ನಾಯಕ ಬಿಡುಗಡೆಗೊಳಿಸಲಿದ್ದಾರೆ.ಕಕ್ಕೇರಾ ಶಾಖೆಯ ಕಚೇರಿ ನಿರ್ಮಾಣದ ಅಡಿಗಲ್ಲನ್ನು ತಾಲೂಕು ವೀರಶೈವ ಸಮಿತಿ ಗೌರವಾಧ್ಯಕ್ಷ ಬಸವಲಿಂಗಪ್ಪ ಪಾಟೀಲ ಹಾಗು ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ನೆರವೇರಿಸಲಿದ್ದಾರೆ.ಈ ಎಲ್ಲಾ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಸುರೇಶ ಸಜ್ಜನ್ ವಹಿಸಲಿದ್ದಾರೆ.
ಅದ್ಧೂರಿಯಾಗಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯ ಪತ್ತಿಜ ಸಹಕಾರ ಮಹಾಮಂಡಳದ ಉಪಾಧ್ಯಕ್ಷ ಡಿ.ಬಿ.ಭೂಕಾಂತ,ಮಹಾಮಂಡಳದ ನಿರ್ದೇಶಕ ಶೇಖರಗೌಡ ಮಾಲಿಪಾಟೀಲ,ರಾಜ್ಯ ಅಪೇಕ್ಸ್ ಬ್ಯಾಂಕ್ ನಿರ್ದೇಶಕ ವಿಠ್ಠಲ್ ಯಾದವ್,ವರ್ತಕರ ಸಂಘದ ಅಧ್ಯಕ್ಷ ಕಿಶೋರಚಂದ್ ಜೈನ್,ವಿಜಯಪುರ ಸಿದ್ದೇಶ್ವರ ಸಂಸ್ಥೆ ಉಪಾಧ್ಯಕ್ಷ ಸಂಗನಬಸಪ್ಪ ಸಜ್ಜನ್,ಬಸವೇಶ್ವರ ಸಹಕಾರ ಸಂಘದ ಪ್ರಥಮ ಅಧ್ಯಕ್ಷ ಬಸವರಾಜ ಜಮದ್ರಖಾನಿ,ಕಲಬುರಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಸವರಾಜ ವಾಲಿ,ಹಾಪ್ ಕಾಮ್ಸ್ ಅಧ್ಯಕ್ಷ ಸುರೇಂದ್ರನಾಥ ಸಜ್ಜನ್ ಸೇರಿದಂತೆ ಸ್ಥಳಿಯ ಎಲ್ಲಾ ಸಹಕಾರ ಸಂಘಗಳ ಅಧ್ಯಕ್ಷರು ಭಾಗವಹಿಸಲಿದ್ದಾರೆ.ಇದೇ ಸಂದರ್ಭದಲ್ಲಿ ಹಾಲಿ ಶಾಸಕರಿಗೆ,ಹಿರಿಯ ಸಹಕಾರಿಗಳಿಗೆ ಸನ್ಮಾನ ಮತ್ತು ಉತ್ತಮ ಗ್ರಾಹಕರಿಗೆ ಅಭಿನಂಧನೆ ಸಲ್ಲಿಸಲಾಗುವುದು ಜೊತೆಗೆ ಸಹಕಾರ ಸಂಘದ ಎಲ್ಲಾ ಷೇರುದಾರರಿಗೆ ಬೆಳ್ಳಿ ಗ್ಲಾಸು ಮತ್ತು ಬ್ಯಾಗನ್ನು ಕಾಣಿಕೆಯಾಗಿ ನೀಡಲಾಗುವುದು.ನಂತರ ಗದಗಿನ ವೀರಣ್ಣ ಚನ್ನಪ್ಪ ಅಂಗಡಿ ಬಳಗದಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಹಕಾರ ಸಂಘದ ಉಪಾಧ್ಯಕ್ಷರಾದ ಶಾಂತಪ್ಪ ಬಾರಿ ಹಾಗು ನಿರ್ದೇಶಕರಾದ ವೀರಪ್ಪ ಆವಂಟಿ,ಬಸಲಿಂಗಯ್ಯಸ್ವಾಮಿ ಹಿರೇಮಠ,ಹೊನ್ನಪ್ಪ ದೇಸಾಯಿ,ಬಸವರಾಜ ಬೂದಿಹಾಳ,ಮಂಜುನಾಥ ಗುಳಗಿ,ವಿರೇಂದ್ರ ನಿಷ್ಠಿ ದೇಶಮುಖ,ಶಾರದಾ ಎಂ.ಜಾಲಹಳ್ಳಿ,ಎಸ್.ಎಂ.ಕನಕರಡ್ಡಿ,ಸಂಗನಬಸಪ್ಪ ಪಾಟೀಲ,ಸಂಗಣ್ಣ ಯಕ್ಕೆಳ್ಳಿ,ಸೂಗುರೇಶ ವಾರದ,ಅಮರಯ್ಯಸ್ವಾಮಿ ಜಾಲಿಬೆಂಚಿ,ಜಯಲಲಿತ ಪಾಟೀಲ,ಡಿ.ಸಿ.ಪಾಟೀಲ ಕೆಂಭಾವಿ,ಆದಿತ್ಯ ಪೊಲೀಸ್ ಪಾಟೀಲ,ನಂದಯ್ಯಸ್ವಾಮಿ ಮಠಪತಿ,ಚಂದ್ರಕಾಂತ ಸಕ್ರಿ,ಮಲ್ಲಿಕಾರ್ಜುನ ಸಾಹುಕಾರ,ಪ್ರಕಾಶ ಕುಂಬಾರ,ರವೀಂದ್ರ ಅಂಗಡಿ,ಪ್ರಕಾಶ ಅಂಗಡಿ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…