ಕಲಬುರಗಿ: ಮಕ್ಕಳ ಶೈಕ್ಷಣಿಕ ಕೇತ್ರದಲ್ಲಿ ಪ್ರವಾಸ ಬಹಳ ಮಹತ್ತರ ಪರಿಣಾಮ ಬೀರುತ್ತದೆ. ಅವರ ವಿದ್ಯಾಭ್ಯಾಸದಲ್ಲಿ ತಾವೂ ಓದಿದನ್ನು ಅನುಭವದ ಮೇರೆಗೆ ವೀಕ್ಷಣೆಯ ಮೂಲಕ ಕಲಿಯುವ ಒಂದು ಸದಾವಕಾಶ ಮಕ್ಕಳಿಗೆ ಪ್ರವಾಸದಲ್ಲಿ ಒದಗುತ್ತದೆ ಎಂದು ಯುವ ಸಾಹಿತಿ ಹಾಗೂ ಯಾದಗಿರಿ ತಾಲ್ಲೂಕಾ ಚು.ಸಾ.ಪ ಅಧ್ಯಕ್ಷ ರೀಯಾಜ್ ಪಟೇಲ್ ವರ್ಕನಳ್ಳಿ ಹೇಳಿದರು.
ನಗರದ ಶರಣ ಬಸವೇಶ್ವರ ದೇವಸ್ಥಾನದ ಅಪ್ಪಾ ಉದ್ಯಾನವನದಲ್ಲಿ ಕಾಡಂಗೇರಾದ ಕೃಷ್ಣಾ ನರ್ಸರಿ ಮತ್ತು ಪೂರ್ವ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯು ಮಕ್ಕಳ ಶೈಕ್ಷಣಿಕ ಪ್ರವಾಸ ನಿಮತ್ಯ ಆಯೋಜಿಸದ್ದ ಚಿಣ್ಣರ ಹೊರ ಸಂಚಾರ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರುಮ ಮಕ್ಕಳಿಗೆ ಪುಸ್ತಕಗಳ ಆಚೆ ನೈಜತೆಯ ಪ್ರಪಂಚವನ್ನು ಪ್ರಾಯೋಗಿಕವಾಗಿ ಉಪಯೋಗಿಸಿ ಇದರ ಅನುಭೂತಿ ಪಡೆಯಲು ಇದು ಬಹು ಪಾತ್ರ ವಹಿಸುತ್ತದೆ ಆ ನಿಟ್ಟಿನಲ್ಲಿ ಕೃಷ್ಣಾ ಶಾಲೆ ಮಕ್ಕಳಿಗೆ ಇಂತಹ ವಿಶೇಷವಾದ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಮಕ್ಕಳಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಿಗಿಸಿಕೊಳ್ಳುವಂತಹದು ಮತ್ತು ಈಗಿನಿಂದಲೇ ಮಕ್ಕಳಲ್ಲಿ ಆತ್ಮ ಸ್ಥೈರ್ಯ ತುಂಬವ ಕೆಲಸ ಈ ಸಂಸ್ಥೆ ಮಾಡುತ್ತಿರುವುದು ತುಂಬಾ ಶ್ಲಾಘನೀಯವಾಗಿದೆ ಎಂದು ಅಭಿಪ್ರಾಯಪಟ್ಟಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಮಾಳಪ್ಪ ಯಾದವ ಮಾತನಾಡಿ ಇಂತಹ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಮಕ್ಕಳಲ್ಲಿ ಇತಿಹಾಸ,ವಾಸ್ತು ಶಿಲ್ಪ,ಅಭಿವೃದ್ಧಿ,ಉದ್ಯಮ,ಜ,ಧರ್ಮ,ಸಂಸ್ಕೃತಿ, ಹಾಡು, ನೃತ್ಯ, ಹವಮಾನ,ನಿಸರ್ಗ,ಪ್ರಾಣಿ ಸಂಕುಲ,ಮತ್ತು ಪರಿಸರದ ಕುರಿತಾಗಿ ಸಾಕಷ್ಟು ವಿಷಯಗಳು ಅರಿವಿಗೆ ಬರುವುದಲ್ಲದೇ, ಕಲ್ಪನೆಗೂ ಮೀರಿ ಅವರ ಜ್ಞಾನಶಕ್ತಿ ವಿಸ್ತಾರಗೊಳ್ಳುತ್ತದೆ. ಮಕ್ಕಳಲ್ಲಿ ಒಳ್ಳೆಯ ವ್ಯಕ್ತಿತ್ವವನ್ನು ಹುರಿದುಂಬಿಸಲು ಅನುಕೂಲವಾಗುತ್ತದೆ ಪಾಠದ ವಿಷಯವನ್ನು ಬಿಟ್ಟರೆ ಮಕ್ಕಳಲ್ಲಿ ಒಗ್ಗಟ್ಟು ಹಂಚಿ ತಿನ್ನುವ ಗುಣ,ಸ್ನೇಹಿತರ ಜತೆ ಖುಷಿಯಾಗಿ ಮೋಜು ಮಸ್ತಿಗೊಂದು ದಿನ, ತಮ್ಮ ಕೆಲಸಗಳನ್ನು ತಾವೇ ಮಾಡಲು ಅವಕಾಶ,ಎಲ್ಲರೊಂದಿಗೆ ಸಹಬಾಳ್ವೆಯಾಗಿ ವರ್ತಿಸುವುದು ಇತರರನ್ನು ಗೌರವಿಸುವುದು ಇವೆಲ್ಲಾ ಮಕ್ಕಳು ಶೈಕ್ಷಣಿಕ ಪ್ರವಾಸದಲ್ಲಿ ಕಲಿಯಲು ಅತ್ಯಂತ ಸಹಕಾರಿಯಾಗುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ರಘುನಾಥ್ ಸಿಂಗ್, ದೇವಪ್ಪ ಪುರ್ಲೆ, ಶಂಕ್ರಯ್ಯ ಹಿರೇಮಠ,ಶಿಕ್ಷಕರಾದ ಸಿಂಧೂ ಬಿ.ಪಾಟೀಲ್, ರೇಣುಕಾ ಕ್ಯಾತನಾಳ, ದುರ್ಗೇಶ ಪರೇಣ, ಸೇರಿದಂತೆ ಉಪಸ್ಥಿತರಿದ್ದರು. ಶಿಕ್ಷಕ ಷಣ್ಮೂಖ ಪುರ್ಲೆ ನಿರೂಪಿಸಿ ವಂದಿಸಿದರು. ಮಕ್ಕಳು ಕಲಬುರಗಿ ನಗರದ ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳಾದ ಬುದ್ಧ ವಿಹಾರ,ಖಾಜಾ ಬಂದೇನವಾಜ್ ದರ್ಗಾ,ಮಕ್ಕಳ ವಿಜ್ಞಾನ ಉದ್ಯಾನಕ್ಕೆ ಭೇಟಿ ನೀಡಿದರು.ಸಂಜೆ ಅಪ್ಪಾ ಉದ್ಯಾನವನದಲ್ಲಿ ಚಿಣ್ಣರ ಹೊರ ಸಂಚಾರ ಸಂಭ್ರಮದಲ್ಲಿ ಪಾಲ್ಗೊಂಡು ಅಲ್ಲಿರುವ ಆಟಿಕೆ ಸಾಮನುಗಳನ್ನು ಆಡಿ, ಕುಣಿದು ಖುಷಿಪಟ್ಟರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…